ನವದೆಹಲಿ: ವಿಫಲವಾದ ಆರ್ಥಿಕತೆ ಉತ್ತೇಜಿಸಲು ಸಾಲದ ಬೆಂಬಲ ವಿಸ್ತರಿಸುವ ಸರ್ಕಾರದ ನೀತಿಯಿಂದಾಗಿ ದೇಶವು ಈಗಾಗಲೇ ಸಾಕಷ್ಟು ಸಮಯ ಕಳೆದುಕೊಂಡಿದೆ. ಇದು ಭಾರತದ ಬಹುಪಾಲು ಬಡವರಿಗೆ ದೊಡ್ಡ ಪ್ರಮಾಣದ ನಗದು ವರ್ಗಾವಣೆಯ ಅನುಪಸ್ಥಿತಿ ನಿರೀಕ್ಷಿತ ಫಲಿತಾಂಶ ನೀಡಲಿಲ್ಲ. ಬೇಡಿಕೆ ಹೆಚ್ಚಿಸಲು ನಗದು ವರ್ಗಾವಣೆ ಅತ್ಯಗತ್ಯ ಎಂದು ಅರ್ಥಶಾಸ್ತ್ರಜ್ಞರು ಕೇಂದ್ರವನ್ನು ಒತ್ತಾಯಿಸಿದ್ದಾರೆ.
'ಪಿಎಂ ಕಿಸಾನ್' ಯೋಜನೆ ಅಥವಾ ರೈತರಿಗೆ ರಸಗೊಬ್ಬರ ಸಬ್ಸಿಡಿ ವೆಚ್ಚದಲ್ಲಿಯೂ ಸರ್ಕಾರವು ಕನಿಷ್ಠ ಹಣವನ್ನು ದೇಶದ ಶೇ 40ರಷ್ಟು ಜನಸಂಖ್ಯೆಗೆ ವರ್ಗಾಯಿಸಬೇಕು. ಮುಂದಿನ ವರ್ಷದ ಬಜೆಟ್‌ನಲ್ಲಿ ಕೃಷಿಯಲ್ಲಿ ನೀರಿನ ಸಮರ್ಥ ಬಳಕೆ ಸುಧಾರಿಸಲು ಹೆಚ್ಚಿನ ಹಣ ವಿನಿಯೋಗಿಸಬೇಕು ಎನ್ನುತ್ತಾರೆ ದೆಹಲಿ ಮೂಲದ ಮಾನವಸಂಪನ್ಮೂಲ ಅಭಿವೃದ್ಧಿಯ ವಿತ್ತ ತಜ್ಞ ಸಂತೋಷ್ ಮೆಹ್ರೋತ್ರಾ.
ನಾವು ಈಗಾಗಲೇ ಸಾಕಷ್ಟು ಸಮಯ ಕಳೆದುಕೊಂಡಿದ್ದೇವೆ. ಆದ್ದರಿಂದ ಬಜೆಟ್ ಸಾರ್ವಜನಿಕ ಹೂಡಿಕೆಯನ್ನು ಗಮನಾರ್ಹವಾಗಿ ಹೆಚ್ಚಿಸಬೇಕು ಎಂದು ಈಟಿವಿ ಭಾರತಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದರು.
ಸಾರ್ವಜನಿಕ ಖರ್ಚು ಹೆಚ್ಚಿಸಲು ಮತ್ತು ಹೆಚ್ಚಿನ ಹಣವನ್ನು ನೇರವಾಗಿ ಸಾರ್ವಜನಿಕರ ಕೈಗೆ ನೀಡಲು ಸರ್ಕಾರ ಹೆಚ್ಚು ಪ್ರಮಾಣದಲ್ಲಿ ಸಾಲ ಪಡೆಯುವ ಅಗತ್ಯವಿದೆ. ಬಡವರಿಗೆ ನಗದು ವರ್ಗಾವಣೆ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ.
ಇದನ್ನೂ ಓದಿ: ಸಿಹಿ ಸುದ್ದಿ: ಭಾರತದ ಆರ್ಥಿಕತೆಗೆ ಸಿಗಲಿದೆ ಅನಿರೀಕ್ಷಿತ ಹೈಜಂಪ್
ಪಿಎಂ ಕಿಸಾನ್ ಸಮ್ಮಾನ್ ನಿಧಿಯಡಿ ಬಜೆಟ್ ಹಂಚಿಕೆಯನ್ನು ಮಾನದಂಡಗಳನ್ನು ವಿಸ್ತರಿಸಿ, ಹೆಚ್ಚಿನ ಫಲಾನುಭವಿಗಳನ್ನು ತಲುಪಲು ಬಳಸಿಕೊಂಡರೇ ನಗದು ವರ್ಗಾವಣೆಗೆ ಸರ್ಕಾರಕ್ಕೆ ಹೆಚ್ಚುವರಿ ಹಣದ ಅಗತ್ಯವಿಲ್ಲ. ವಿಶ್ವದ ಎಲ್ಲ ಪ್ರಮುಖ ಅರ್ಥಶಾಸ್ತ್ರಜ್ಞರು ನಗದು ವರ್ಗಾವಣೆ ಅಥವಾ ಕನಿಷ್ಠ ಆದಾಯ ಖಾತರಿ ಶಿಫಾರಸು ಮಾಡುತ್ತಿದ್ದಾರೆ. ನಾನು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಶೇ 40ರಷ್ಟು ಬಡ ಜನರಿಗೆ ತಿಂಗಳಿಗೆ 500 ರೂ. ನೀಡುವ ಬಗ್ಗೆ ಮಾತನಾಡುತ್ತಿದ್ದೇನೆ.