ಕರ್ನಾಟಕ

karnataka

ETV Bharat / business

ಕೆಟ್ಟ ಮೇಲೆ ಬುದ್ಧಿ ಕಲಿತ ಅಮೆರಿಕ; ಸೇಬಿನ ಸುಂಕ ಕಡಿತಗೊಳಿಸುವಂತೆ ಭಾರತಕ್ಕೆ ಮನವಿ - ಅಮೆರಿಕ ಸೇಬು

ಸಾಮಾನ್ಯ ಆದ್ಯತಾ ಕಾರ್ಯಕ್ರಮದಿಂದ (ಜಿಎಸ್​ಪಿ) ಭಾರತವನ್ನು ಇತ್ತೀಚೆಗೆ ಅಮೆರಿಕ ಹೊರಗಿಟ್ಟಿತ್ತು. ಇದಕ್ಕೆ ಪ್ರತಿಯಾಗಿ ಅಮೆರಿಕದಿಂದ ಆಮದಾಗುವ ಸರಕುಗಳ ಮೇಲಿನ ಸುಂಕವನ್ನು ಭಾರತ ಹೆಚ್ಚಿಸಿತ್ತು. ವಾಷಿಂಗ್ಟನ್ ಸೇಬು ಮೇಲಿನ ಸುಂಕವನ್ನು ಶೇ 50ರಿಂದ ಶೇ 70ಕ್ಕೆ ಏರಿಸಿದ್ದು ಇದಕ್ಕೊಂದು ನಿದರ್ಶನ. ಈ ನಿರ್ಧಾರ ಅಮೆರಿಕದ ರೈತರಿಗೆ ಬಲವಾದ ಪೆಟ್ಟು ಕೊಟ್ಟಿದೆ.

ಸಾಂದರ್ಭಿಕ ಚಿತ್ರ

By

Published : Sep 19, 2019, 5:30 PM IST

Updated : Sep 19, 2019, 5:41 PM IST

ವಾಷಿಂಗ್ಟನ್​:ಅಮೆರಿಕದಿಂದ ಭಾರತಕ್ಕೆ ರಫ್ತಾಗುವ ಸೇಬಿನ ಮೇಲಿನ ಹೆಚ್ಚುವರಿ ಸುಂಕವನ್ನು ಕಡಿತಗೊಳಿಸುವಂತೆ ಒತ್ತಡ ಹೇರಬೇಕೆಂದು ಅಧ್ಯಕ್ಷ ಡೊನಾಲ್ಡ್​ ಟ್ರಂಪ್‌ಗೆ ಅಮೆರಿಕದ ಸಂಸದರು ಪತ್ರ ಬರೆದಿದ್ದಾರೆ.

ಭಾರತ ತನ್ನ ಸೇಬುಗಳ ಮೇಲೆ ಹೆಚ್ಚುವರಿ ಆಮದು ಸುಂಕ ವಿಧಿಸುತ್ತಿರುವುದರಿಂದ ಅಮೆರಿಕ ಸೇಬು ಬೆಳೆಗಾರರಿಗೆ ತೀವ್ರವಾದ ಹೊಡೆತ ಬೀಳುತ್ತಿದೆ. ಈ ನಿಟ್ಟಿನಲ್ಲಿ ಸುಂಕ ದರ ಕಡಿಮೆ ಮಾಡುವಂತೆ ನವದೆಹಲಿಯನ್ನು ಕೋರಬೇಕೆಂದು ಟ್ರಂಪ್ ಆಡಳಿತವನ್ನು ಒತ್ತಾಯಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಭೇಟಿಯ ಪೂರ್ವಭಾವಿಯಾಗಿ ಭಾರತದೊಂದಿಗೆ ವಾಣಿಜ್ಯ-ವಹಿವಾಟು ಸಂಬಂಧ ಮಾತುಕತೆ ನಡೆಸುತ್ತಿರುವ ಅಮೆರಿಕದ ವಾಣಿಜ್ಯ ಪ್ರತಿನಿಧಿ ರಾಬರ್ಟ್ ಲೈಟ್‌ಹೈಜರ್‌ ಅವರಿಗೆ ಕಾಂಗ್ರೆಸ್ ಸದಸ್ಯ ಡಾನ್ ನ್ಯೂಹೌಸ್ ಈ ಕುರಿತು ಪತ್ರ ಬರೆದಿದ್ದಾರೆ. ವಾಷಿಂಗ್ಟನ್ ಸೇಬಿನ ಸುಂಕ ಕಡಿತಕ್ಕೆ ಟ್ರಂಪ್ ಆಡಳಿತವನ್ನು ಒತ್ತಾಯಿಸಿದರು.

ಸಾಮಾನ್ಯ ಆದ್ಯತಾ ಕಾರ್ಯಕ್ರಮದಿಂದ (ಜಿಎಸ್​ಪಿ) ಭಾರತವನ್ನು ಅಮೆರಿಕ ಇತ್ತೀಚೆಗೆ ಹೊರಗಿಟ್ಟಿತ್ತು. ದೊಡ್ಡಣ್ಣನ ಈ ನಿರ್ಧಾರಕ್ಕೆ ಪ್ರತಿಯಾಗಿ ಭಾರತ ಅಮೆರಿಕದಿಂದ ಆಮದಾಗುವ ಸರಕುಗಳ ಮೇಲಿನ ಸುಂಕವನ್ನು ಹೆಚ್ಚಿಸಿದೆ. ವಾಷಿಂಗ್ಟನ್ ಸೇಬು ಮೇಲಿನ ಸುಂಕವನ್ನು ಶೇ 50ರಿಂದ ಶೇ 70ಕ್ಕೆ ಏರಿಸಲಾಗಿತ್ತು. ಭಾರತದ ಈ ನಿರ್ಧಾರದಿಂದ ಅಮೆರಿಕದಿಂದ ಭಾರತಕ್ಕೆ ರಫ್ತಾಗುವ ಆ್ಯಪಲ್‌ ಪ್ರಮಾಣ ಕಡಿಮೆಯಾಗಿದೆ.

Last Updated : Sep 19, 2019, 5:41 PM IST

ABOUT THE AUTHOR

...view details