ನವದೆಹಲಿ: ವಿಶ್ವ ವಿಶ್ವವಿದ್ಯಾನಿಲಯ ಶ್ರೇಯಾಂಕದ ಪ್ರಮುಖ ಪ್ರಕಾಶಕರಾದ ಕ್ವಾಕ್ವೆರೆಲ್ಲಿ ಸೈಮಂಡ್ಸ್ (ಕ್ಯೂಎಸ್) ಇತ್ತೀಚೆಗೆ ಕ್ಯೂಎಸ್ ಇಂಡಿಯಾ ವಿಶ್ವವಿದ್ಯಾಲಯ ಶ್ರೇಯಾಂಕ- 2020ರ ಸಾಲಿನ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ನಿರೀಕ್ಷೆಯಂತೆ ಶ್ರೇಯಾಂಕ ಪಟ್ಟಿಯಲ್ಲಿ ಐಐಟಿಗಳು ಪ್ರಾಬಲ್ಯ ಮೆರೆದಿವೆ. ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಬಾಂಬೆ 88.5 ಅಂಕಗಳೊಂದಿಗೆ ದೇಶದ ಅತ್ಯುತ್ತಮ ಸಂಸ್ಥೆ ಎಂಬ ಕಿರೀಟವನ್ನು ಉಳಿಸಿಕೊಂಡಿದೆ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್) ಈ ಶ್ರೇಯಾಂಕದಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ವಿಶ್ವವಿದ್ಯಾನಿಲಯಗಳಲ್ಲಿ ಐಐಟಿ ದೆಹಲಿ ಮತ್ತು ಹೈದರಾಬಾದ್ ವಿವಿ ಅಗ್ರ ಸ್ಥಾನ ಗಳಿಸಿವೆ.
ಕ್ಯೂಎಸ್ ಭಾರತ ಶ್ರೇಣಿಯನ್ನು ಬ್ರಿಕ್ಸ್ ಶ್ರೇಯಾಂಕಗಳ ವಿಧಾನ ಬಳಸಲಾಗಿದ್ದು, ಶೈಕ್ಷಣಿಕ ಖ್ಯಾತಿ (ಶೇ 30ರಷ್ಟು), ಉದ್ಯೋಗದಾತ ಖ್ಯಾತಿ (ಶೇ 20ರಷ್ಟು), ಅಧ್ಯಾಪಕ/ವಿದ್ಯಾರ್ಥಿಗಳ ಅನುಪಾತ (ಶೇ 20ರಷ್ಟು), ಪಿಎಚ್‌ಡಿ ಹೊಂದಿರುವ ಸಿಬ್ಬಂದಿ (ಶೇ 10ರಷ್ಟು), ಪ್ರತಿ ಅಧ್ಯಾಪಕರಿಗೆ ಪೇಪರ್ಸ್ (ಶೇ 10ರಷ್ಟು), ಪ್ರತಿ ಕಾಗದಕ್ಕೆ ಉಲ್ಲೇಖಗಳು (ಶೇ 5ರಷ್ಟು), ಅಂತಾರಾಷ್ಟ್ರೀಯ ಅಧ್ಯಾಪಕರು (ಶೇ 2.5ರಷ್ಟು) ಮತ್ತು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು (ಶೇ 2.5ರಷ್ಟು) ಎಂಬ ಸೂಚಕಗಳನ್ನು ಬಳಸಿಕೊಳ್ಳಲಾಯಿತು.
2020ರ ಸಾಲಿನ ಕ್ಯೂಎಸ್ ಶ್ರೇಣಿಯ ವಿಶ್ವವಿದ್ಯಾನಿಲಯಗಳು
1. ಐಐಟಿ ಬಾಂಬೆ
2. ಐಐಎಸ್ ಬೆಂಗಳೂರು
3. ಐಐಟಿ ದೆಹಲಿ
4. ಐಐಟಿ ಮದ್ರಾಸ್
5.ಐಐಟಿ ಖರಗ್ಪುರ್
6. ಐಐಟಿ ಕಾನ್ಪುರ್
7. ದೆಹಲಿ ವಿಶ್ವವಿದ್ಯಾನಿಲಯ
8. ಹೈದರಾಬಾದ್ ವಿಶ್ವವಿದ್ಯಾನಿಲಯ
9. ಐಐಟಿ ರೋರ್ಖಿ
10. ಐಐಟಿ ಗುವಾಹಟಿ