ಕರ್ನಾಟಕ

karnataka

ETV Bharat / business

GSTಗೆ ಪೆಟ್ರೋಲ್, ಡೀಸೆಲ್ ಸೇರ್ಪಡೆ ಯಾರಿಂದ ಸಾಧ್ಯ?: ವಿತ್ತ ಸಚಿವೆ ಕೊಟ್ಟ ಉತ್ತರ ಇದು..

ಜಿಎಸ್​ಟಿ ವ್ಯಾಪ್ತಿಗೆ ಪೆಟ್ರೋಲ್ ಮತ್ತು ಡೀಸೆಲ್​ ಸೇರ್ಪಡೆಯ ಕುರಿತು 'ಈಟಿವಿ ಭರತ್' ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರು, ಜಿಎಸ್​ಟಿ ಅಡಿಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನ ತರಲು ರಾಜ್ಯಗಳು ಸಿದ್ಧವಾದರೆ ಕಾಯ್ದೆಗೆ ತಿದ್ದುಪಡಿ ತರುವ ಅಗತ್ಯವಿಲ್ಲ. ಈಗ ರಾಜ್ಯಗಳು ಮತ್ತು ಜಿಎಸ್​ಟಿ ಕೌನ್ಸಿಲ್ ಈ ಬಗ್ಗೆ ಯಾವಾಗ ನಿರ್ಧಾರ ತೆಗೆದುಕೊಳ್ಳುತ್ತಾರೆ ಆಗ ಇದು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.

GST
ಜಿಎಸ್​ಟಿ

By

Published : Feb 10, 2020, 8:52 PM IST

ಕೋಲ್ಕತ್ತಾ: ಪೆಟ್ರೋಲ್, ಡೀಸೆಲ್ ಮತ್ತು ಇತರ ಪೆಟ್ರೋಲಿಯಂ ಉತ್ಪನ್ನಗಳು ಯಾವಾಗ ಜಿಎಸ್ಟಿ ವ್ಯಾಪ್ತಿಗೆ ಬರಬೇಕು ಎಂಬುದನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಮಂಡಳಿ ಹಾಗೂ ರಾಜ್ಯಗಳು ನಿರ್ಧರಿಸಬೇಕಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಈ ಬಗ್ಗೆ 'ಈಟಿವಿ ಭರತ್' ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಹಣಕಾಸು ಅವರು, ಜಿಎಸ್​ಟಿ ಅಡಿ ಪೆಟ್ರೋಲಿಯಂ ಉತ್ಪನ್ನಗಳನ್ನ ತರಲು ರಾಜ್ಯಗಳು ಸಿದ್ಧವಾದರೆ, ಕಾಯ್ದೆಗೆ ತಿದ್ದುಪಡಿ ತರುವ ಅಗತ್ಯವಿಲ್ಲ. ಈಗ ರಾಜ್ಯಗಳು ಮತ್ತು ಜಿಎಸ್​ಟಿ ಕೌನ್ಸಿಲ್ ಈ ಬಗ್ಗೆ ಯಾವಾಗ ನಿರ್ಧಾರ ತೆಗೆದುಕೊಳ್ಳುತ್ತಾರೆಯೋ ಆಗ ಇದು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.

ಎಲ್​ಐಸಿ ಬಗ್ಗೆ ಮಾತನಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಜಿಎಸ್​ಟಿ ರೂಪಿಸಲ್ಪಟ್ಟಾಗ ಮತ್ತು ಅನಷ್ಠಾನಕ್ಕೆ ತರಲ್ಪಟ್ಟಾಗಲೂ ಪೆಟ್ರೋಲ್ ಮತ್ತು ಪೆಟ್ರೋಲಿಯಂ ಸಂಬಂಧಿತ ಉತ್ಪನ್ನಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಆ ಸಮಯದಲ್ಲಿ ದಿವಂಗತ ಅರುಣ್ ಜೇಟ್ಲಿ ಜೀ ಅವರು ಒಂದು ನಿಬಂಧನೆ ಮಾಡಿದ್ದರು. ಜಿಎಟ್​ಟಿ​​ ತಿದ್ದುಪಡಿಯಲ್ಲಿ ಶೂನ್ಯ ದರದ ಪೆಟ್ರೋಲಿಯಂ ಉತ್ಪನ್ನದ ನಿಬಂಧನೆ ಸಹ ಅದರಲ್ಲಿ ಒಳಗೊಂಡಿತ್ತು ಎಂದು ಹೇಳಿದ್ದಾರೆ.

ಜಿಎಸ್​ಟಿ ವ್ಯಾಪ್ತಿಗೆ ಪೆಟ್ರೋಲ್ ಮತ್ತು ಡೀಸೆಲ್​ ಸೇರ್ಪಡೆಯ ಬಗ್ಗೆ ಮಾತನಾಡಿದ ನಿರ್ಮಲಾ ಸೀತಾರಾಮನ್

ಸಾರ್ವಜನಿಕರಿಗೆ ಎಲ್‌ಐಸಿಯಲ್ಲಿ ಷೇರುದಾರರಾಗಲು ಐಪಿಒ ನೀಡಲಾಗುವುದು. ಸಾರ್ವಜನಿಕ ಹಣ ಅಸುರಕ್ಷಿತ ಎಂಬ ಪ್ರಶ್ನೆಯೇ ಎಂಬುದಿಲ್ಲ. ಇದೊಂದು ಸಾರ್ವಜನಿಕ ಹಿಡುವಳಿಯಾಗಿರುತ್ತದೆ. ಅಲ್ಲಿ ಒಂದು ನಿಯಂತ್ರಕ ಸಂಸ್ಥೆ ಜಾರಿಯಲ್ಲಿರುತ್ತದೆ. ಎಲ್ಲವೂ ಪಾರದರ್ಶಕ ಮತ್ತು ಹೊಣೆಗಾರಿಕೆಯಿಂದ ನಡೆಯಲಿದೆ. ಈ ಹಿಂದಿನಂತೆಯೇ ಮುಂದುವರಿಯಲಿದೆ ಎಂದು 'ಈಟಿವಿ ಭಾರತ್' ಪ್ರಶ್ನೆಯೊಂದಕ್ಕೆ ಸೀತಾರಾಮನ್​ ಉತ್ತರಿಸಿದರು.

ABOUT THE AUTHOR

...view details