ಕರ್ನಾಟಕ

karnataka

ETV Bharat / business

ಲಾಕ್​ಡೌನ್​ ವೇಳೆ ಸಾಲಕ್ಕೆ ಬಡ್ಡಿ: ಆರ್‌ಬಿಐ, ಕೇಂದ್ರ ಸರ್ಕಾರಕ್ಕೆ ಸುಪ್ರೀಂ ನೋಟಿಸ್ - ಬಡ್ಡಿ ನಿಷೇಧ

ಜನರು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದಾರೆ. ಲಾಕ್​ಡೌನ್ ಸಮಯದಲ್ಲಿ ಆದಾಯ ಕುಗ್ಗಿದೆ. ನಿಷೇಧಿತ ಅವಧಿಗೆ ಬಡ್ಡಿ ವಿಧಿಸುವ ಕ್ರಮವು ಅಸಂವಿಧಾನಿಕವಾಗಿದೆ ಎಂದು ಆರೋಪಿಸಿ ಗಜೇಂದ್ರ ಶರ್ಮಾ ಅವರು ಸುಪ್ರೀಂಗೆ ಪಿಐಎಲ್ ಸಲ್ಲಿಸಿದ್ದರು.

Supreme Court
ಸುಪ್ರೀಂಕೋರ್ಟ್

By

Published : May 26, 2020, 3:49 PM IST

ನವದೆಹಲಿ: ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಸುಪ್ರೀಂಕೋರ್ಟ್ ನ್ಯಾಯ ಪೀಠವು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮತ್ತು ಕೇಂದ್ರಕ್ಕೆ ನೋಟಿಸ್ ಜಾರಿಗೊಳಿಸಿದೆ.

ಆರ್‌ಬಿಐ ನೀಡಿದ ನಿಷೇಧದ ಅವಧಿಯ 3 ತಿಂಗಳ ನಂತರ ಸಾಲಗಳಿಗೆ ಬಡ್ಡಿ ವಿಧಿಸುವುದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿತ್ತು. ಬಡ್ಡಿ ನಿಷೇಧವನ್ನು ಮತ್ತೆ ಆಗಸ್ಟ್ 31ರವರೆಗೆ ವಿಸ್ತರಿಸಲಾಗಿದೆ.

ಜನರು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದಾರೆ. ಲಾಕ್​ಡೌನ್ ಸಮಯದಲ್ಲಿ ಆದಾಯ ಕುಗ್ಗಿದೆ. ನಿಷೇಧಿತ ಅವಧಿಗೆ ಬಡ್ಡಿ ವಿಧಿಸುವ ಕ್ರಮವು ಅಸಂವಿಧಾನಿಕವಾಗಿದೆ ಎಂದು ಆರೋಪಿಸಿ ಗಜೇಂದ್ರ ಶರ್ಮಾ ಅವರು ಪಿಐಎಲ್ ಸಲ್ಲಿಸಿದ್ದರು.

ಆರ್‌ಬಿಐ ಇಎಂಐ ಪಾವತಿಸುವುದರ ಮೇಲೆ ನಿಷೇಧ ಆದೇಶಿಸಿತ್ತು. ಆದರೆ, ಸಾಲಗಳ ಮೇಲಿನ ಬಡ್ಡಿ ಅಲ್ಲ. ಮೇ 31ರವರೆಗಿನ ಅವ ವಾಯ್ದೆಯನ್ನು ಈಗ ಆಗಸ್ಟ್ 31ಕ್ಕೆ ವಿಸ್ತರಿಸಿದೆ. ಅರ್ಜಿಯ ಬಗ್ಗೆ ಉತ್ತರಿಸಲು ಆರ್‌ಬಿಐ ಒಂದು ವಾರ ಕಾಲಾವಕಾಶ ನೀಡಿದ ನಂತರವೂ ಆರ್‌ಬಿಐ ಈ ಬಗ್ಗೆ ಇನ್ನೂ ಸ್ಪಂದಿಸಿಲ್ಲ ಎಂದು ಎಸ್‌ಜಿ ತುಷಾರ್ ಮೆಹ್ತಾ ನ್ಯಾಯಾಲಯದ ಗಮನಕ್ಕೆ ತಂದರು.

ABOUT THE AUTHOR

...view details