ಮುಂಬೈ: ಮುಂಬರುವ ವಿತ್ತೀಯ ನೀತಿ ಪರಿಶೀಲನಾ ಸಭೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿಯು (ಎಂಪಿಸಿ) ರೆಪೊ ದರವನ್ನು ಬದಲಿಸದೆ ಯಥಾವತ್ತಾಗಿ ಉಳಿಸಿಕೊಳ್ಳುವ ಸಾಧ್ಯತೆಯಿದೆ ಮತ್ತು ಹಣಕಾಸಿನ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಅಸಾಂಪ್ರದಾಯಿಕ ನೀತಿಯ ಕ್ರಮಗಳತ್ತ ದೃಷ್ಟಿ ಹಾಯಿಸಬಹುದು ಎಂದು ವರದಿಯೊಂದು ತಿಳಿಸಿದೆ.
ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದ ಹಣಕಾಸು ನೀತಿ ಸಮಿತಿ (ಎಂಪಿಸಿ) ಆಗಸ್ಟ್ 4ರಿಂದ ಮೂರು ದಿನಗಳವರೆಗೆ ಸಭೆ ಸೇರಲಿದ್ದು, ಆಗಸ್ಟ್ 6ರಂದು ತನ್ನ ಅಂತಿಮ ನಿರ್ಧಾರ ಪ್ರಕಟಿಸಲಿದೆ.
ಆಗಸ್ಟ್ ದರ ಕಡಿತವು ಅಸಂಭವವೆಂದು ನಾವು ನಂಬುತ್ತೇವೆ. ಆರ್ಥಿಕ ಸ್ಥಿರತೆಯನ್ನು ಗಮನದಲ್ಲಿ ಇರಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಪ್ರಸಕ್ತ ವೇಳೆ ಯಾವ ಅಸಾಂಪ್ರದಾಯಿಕ ನೀತಿ ಕ್ರಮಗಳನ್ನು ಅನುಸರಿಸಬಹುದು ಎಂಬುದನ್ನು ಎಂಪಿಸಿ ಚೆನ್ನಾಗಿ ಚರ್ಚಿಸಬಹುದೆಂದು ನಾವು ಭಾವಿಸುತ್ತೇವೆ ಎಂದು ಎಸ್‌ಬಿಐ ಸಂಶೋಧನಾ ವರದಿ ಇಕೋವ್ರಾಪ್ ಹೇಳಿದೆ.
ಫೆಬ್ರವರಿಯಿಂದ ಆರಂಭವಾಗುವ 115 ಬೇಸಿಸ್ ಪಾಯಿಂಟ್‌ಗಳ (ಬಿಪಿಎಸ್) ರೆಪೊ ದರದಲ್ಲಿ, ಬ್ಯಾಂಕ್ಗಳು ಈಗಾಗಲೇ ಗ್ರಾಹಕರಿಗೆ 72 ಬೇಸಿಸ್ ಪಾಯಿಂಟ್‌ಗಳ ಹೊಸ ಸಾಲ ರವಾನಿಸಿವೆ. ಕೆಲವು ದೊಡ್ಡ ಬ್ಯಾಂಕ್ಗಳು 85 ಬೇಸಿಸ್ ಪಾಯಿಂಟ್‌ಗಳಡಿ ಸಾಲ ನೀಡುತ್ತಿವೆ ಎಂದು ತಿಳಿಸಿದೆ.