ಕರ್ನಾಟಕ

karnataka

By

Published : Feb 15, 2021, 3:15 PM IST

ETV Bharat / business

ಅರ್ಬನ್ ಸಹಕಾರಿ ಬ್ಯಾಂಕ್​​ಗಳ ನಿಯಂತ್ರಣಕ್ಕೆ ಆರ್​​​ಬಿಐನಿಂದ ತಜ್ಞರ ಸಮಿತಿ

ಎಂಟು ಸದಸ್ಯರ ಸಮಿತಿಯು ನಗರ ಸಹಕಾರ ಬ್ಯಾಂಕ್​ಗಳಿಗೆ (ಯುಸಿಬಿ) ಸಂಬಂಧಿಸಿದ ರಿಸರ್ವ್ ಬ್ಯಾಂಕ್ ಮತ್ತು ಇತರ ಅಧಿಕಾರಿಗಳು ತೆಗೆದುಕೊಂಡ ನಿಯಂತ್ರಕ ಕ್ರಮಗಳ ಮೇಲ್ವಿಚಾರಣೆ, ಕಳೆದ ಐದು ವರ್ಷಗಳಲ್ಲಿ ಎದುರಾದ ಪ್ರಮುಖ ಅಡಚಣೆಗಳು ಹಾಗೂ ಅವುಗಳ ಪ್ರಭಾವವನ್ನು ನಿರ್ಣಯಿಸುತ್ತದೆ.

RBI
RBI

ನವದೆಹಲಿ: ಅರ್ಬನ್ ಸಹಕಾರಿ ಬ್ಯಾಂಕ್​​​ಗಳ ನಿಯಂತ್ರಣಕ್ಕೆ ನಿಯಮಾವಳಿಗಳನ್ನು ರೂಪಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ತನ್ನ ಮಾಜಿ ಡೆಪ್ಯುಟಿ ಗವರ್ನರ್ ಎನ್.ಎಸ್. ವಿಶ್ವನಾಥನ್ ಅವರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿ ರಚಿಸಿದೆ.

ಎಂಟು ಸದಸ್ಯರ ಸಮಿತಿಯು ನಗರ ಸಹಕಾರ ಬ್ಯಾಂಕ್​ಗಳಿಗೆ (ಯುಸಿಬಿ) ಸಂಬಂಧಿಸಿದ ರಿಸರ್ವ್ ಬ್ಯಾಂಕ್ ಮತ್ತು ಇತರ ಅಧಿಕಾರಿಗಳು ತೆಗೆದುಕೊಂಡ ನಿಯಂತ್ರಕ ಕ್ರಮಗಳ ಮೇಲ್ವಿಚಾರಣೆ, ಕಳೆದ ಐದು ವರ್ಷಗಳಲ್ಲಿ ಎದುರಾದ ಪ್ರಮುಖ ಅಡಚಣೆಗಳು ಹಾಗೂ ಅವುಗಳ ಪ್ರಭಾವವನ್ನು ನಿರ್ಣಯಿಸುತ್ತದೆ. ಸಾಮಾಜಿಕ-ಆರ್ಥಿಕ ಉದ್ದೇಶ ನೆರವೇರಿಕೆಯಲ್ಲಿ ಕೈಜೋಡಿಸಲಿದೆ.

ಇದನ್ನೂ ಓದಿ: 500 ಅಂಶ ಜಿಗಿದ ಸೆನ್ಸೆಕ್ಸ್.. ಮುಂದುವರಿದ ಗೂಳಿ ಓಟ!

ಈ ಸಮಿತಿಯು ಪ್ರಸ್ತುತ ನಿಯಂತ್ರಣ / ಮೇಲ್ವಿಚಾರಣಾ ವಿಧಾನವನ್ನು ಪರಿಶೀಲಿಸುತ್ತದೆ. ನಗರ ಸಹಕಾರಿ ಕ್ಷೇತ್ರವನ್ನು ಬಲಪಡಿಸಲು ಸೂಕ್ತ ಕ್ರಮಗಳು / ಬದಲಾವಣೆಗಳನ್ನು ಶಿಫಾರಸು ಮಾಡುತ್ತದೆ. ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949ರ ಇತ್ತೀಚಿನ ತಿದ್ದುಪಡಿಗಳನ್ನು ಗಣನೆಗೆ ತೆಗೆದುಕೊಳ್ಳಲಿದೆ ಎಂದು ಆರ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಸಮಿತಿಯ ಇತರ ಸದಸ್ಯರಲ್ಲಿ ನಬಾರ್ಡ್​​ನ ಮಾಜಿ ಅಧ್ಯಕ್ಷ ಹರ್ಷ್ ಕುಮಾರ್ ಭನ್ವಾಲಾ, ಚಾರ್ಟರ್ಡ್ ಅಕೌಂಟೆಂಟ್ ಮುಕುಂದ್ ಎಂ. ಚಿತಳೆ, ಎಂ.ಎಸ್. ಐಐಎಂ ಬೆಂಗಳೂರಿನ ಶ್ರೀರಾಮ್ ಇತರರು ಇದ್ದಾರೆ.

ABOUT THE AUTHOR

...view details