ಕರ್ನಾಟಕ

karnataka

ETV Bharat / business

'ಬ್ಯಾಂಕ್​ ಖಾತೆಗೆ 15 ಲಕ್ಷ, ವರ್ಷಕ್ಕೆ 2 ಕೋಟಿ ನೌಕರಿ': ಆಶ್ವಾಸನೆ ಕೊಟ್ಟ ಪ್ರಧಾನಿಯನ್ನ ಜನ ನಂಬುತ್ತಿಲ್ಲ- ರಾಗಾ ಟ್ವೀಟ್​

ಪ್ರತಿ ಬ್ಯಾಂಕ್ ಖಾತೆಯಲ್ಲಿ 15 ಲಕ್ಷ ರೂ. ಮತ್ತು ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ, ನನಗೆ 50 ದಿನಗಳ ಸಮಯ ನೀಡಿ, ಇಲ್ಲದಿದ್ದರೆ... 21 ದಿನಗಳಲ್ಲಿ ನಾವು ಕೊರೊನಾ ವಿರುದ್ಧದ ಯುದ್ಧವನ್ನು ಗೆಲ್ಲುತ್ತೇವೆ. ನಮ್ಮ ಭೂಪ್ರದೇಶಕ್ಕೆ ಯಾರೂ ಒಳನುಗ್ಗಿಲ್ಲ ಅಥವಾ ಯಾವುದೇ ಪ್ರದೇಶ ವಶಪಡಿಸಿಕೊಂಡಿಲ್ಲ ಎಂದಿದ್ದ ಪ್ರಧಾನಿ ಮೋದಿ ಭಾಷಣದ ಉಲ್ಲೇಖಗಳನ್ನು ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡು ವ್ಯಂಗ್ಯವಾಡಿದ್ದಾರೆ.

Modi Rahul
ಮೋದಿ ರಾಹುಲ್

By

Published : Dec 30, 2020, 3:08 PM IST

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ತುಣಕುಗಳನ್ನು ಉಲ್ಲೇಖಿಸಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪ್ರತಿ ಬ್ಯಾಂಕ್ ಖಾತೆಯಲ್ಲಿ 15 ಲಕ್ಷ ರೂ. ಮತ್ತು ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ, ನನಗೆ 50 ದಿನಗಳ ಸಮಯ ನೀಡಿ, ಇಲ್ಲದಿದ್ದರೆ... 21 ದಿನಗಳಲ್ಲಿ ನಾವು ಕೊರೊನಾ ವಿರುದ್ಧದ ಯುದ್ಧವನ್ನು ಗೆಲ್ಲುತ್ತೇವೆ. ನಮ್ಮ ಭೂಪ್ರದೇಶಕ್ಕೆ ಯಾರೂ ಒಳನುಗ್ಗಿಲ್ಲ ಅಥವಾ ಯಾವುದೇ ಪ್ರದೇಶ ವಹಿಸಿಕೊಂಡಿಲ್ಲ ಎಂದಿದ್ದ ಪ್ರಧಾನಿ ಮೋದಿ ಭಾಷಣದ ಉಲ್ಲೇಖಗಳನ್ನು ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡು ರಾಹುಲ್​ ಗಾಂಧಿ ವ್ಯಂಗ್ಯವಾಡಿದ್ದಾರೆ.

ಮುಂದುವರಿದ ಅವರು, 'ಅಸತ್ಯಾಗ್ರಹದ ಸುದೀರ್ಘ ಇತಿಹಾಸ'ದಿಂದಾಗಿ ರೈತರು ಪ್ರಧಾನಿ ಮೋದಿ ಅವರನ್ನು ನಂಬುವುದಿಲ್ಲ ಎಂದೂ ಟೀಕಿಸಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ರಾಹುಲ್​ ಗಾಂಧಿ ಅವರು ತಮ್ಮ ಪಕ್ಷದ ಹಿರಿಯ ನಾಯಕರ ನಿಯೋಗದೊಂದಿಗೆ ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿದ್ದರು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ ಒಂದು ತಿಂಗಳು ಕಳೆದಿರುವ ಬಗ್ಗೆ ಅವರು ರಾಷ್ಟ್ರಪತಿ ಮುಂದೆ ಪ್ರಸ್ತಾಪ ಮಾಡಿದ್ದರು.

ಇದನ್ನೂ ಓದಿ: ರಾಮ ಮಂದಿರದ ಬುನಾದಿಗೆ ಉತ್ತಮ ಮಾದರಿ ತಿಳಿಸಲು ಐಐಟಿಗೆ ಮನವಿ

ABOUT THE AUTHOR

...view details