ನವದೆಹಲಿ:ಬಳಕೆದಾರರ ಮಾಹಿತಿ ರಕ್ಷಣೆ ಮತ್ತು ದೇಶದ ಸುರಕ್ಷತೆ ದೃಷ್ಟಿಯಿಂದ ಚೀನಾ ಮೂಲದ ಆ್ಯಪ್ ನಿಷೇಧದ ಕ್ರಮ ಮುಂದುವರೆದಿದೆ.
ಕೇಂದ್ರ ಸರ್ಕಾರ ಬುಧವಾರ ಪಬ್‌ಜಿ, ಲಿವಿಕ್, ವೀಚಾಟ್ ಸೇರಿದಂತೆ 118 ಮೊಬೈಲ್ ಆ್ಯಪ್ಗಳನ್ನು ನಿಷೇಧಿಸಿದೆ.
ನವದೆಹಲಿ:ಬಳಕೆದಾರರ ಮಾಹಿತಿ ರಕ್ಷಣೆ ಮತ್ತು ದೇಶದ ಸುರಕ್ಷತೆ ದೃಷ್ಟಿಯಿಂದ ಚೀನಾ ಮೂಲದ ಆ್ಯಪ್ ನಿಷೇಧದ ಕ್ರಮ ಮುಂದುವರೆದಿದೆ.
ಕೇಂದ್ರ ಸರ್ಕಾರ ಬುಧವಾರ ಪಬ್‌ಜಿ, ಲಿವಿಕ್, ವೀಚಾಟ್ ಸೇರಿದಂತೆ 118 ಮೊಬೈಲ್ ಆ್ಯಪ್ಗಳನ್ನು ನಿಷೇಧಿಸಿದೆ.
ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಪೂರ್ವಾಗ್ರಹ ಪೀಡಿತ 118 ಮೊಬೈಲ್ ಅಪ್ಲಿಕೇಷನ್‌ಗಳನ್ನು ಸರ್ಕಾರ ನಿರ್ಬಂಧಿಸುತ್ತದೆ. ಭಾರತದ ರಕ್ಷಣೆ, ಭದ್ರತೆ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಈ ವರ್ಷದ ಜೂನ್‌ನಲ್ಲಿ ದೇಶದ ಸಾರ್ವಭೌಮತ್ವ, ಸಮಗ್ರತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಟಿಕ್‌ಟಾಕ್, ಯುಸಿ ಬ್ರೌಸರ್, ವೀಬೊ, ಬೈದು ಮ್ಯಾಪ್ ಮತ್ತು ಬೈದು ಸೇರಿದಂತೆ ಚೀನಾದ ಲಿಂಕ್ ಹೊಂದಿರುವ 59 ಅಪ್ಲಿಕೇಷನ್‌ಗಳನ್ನು ಭಾರತ ನಿಷೇಧಿಸಿತ್ತು.