ನವದೆಹಲಿ:ಕೇಂದ್ರ ಸಚಿವ ಸಂಪುಟ ಬುಧವಾರ ಅಂಗೀಕರಿಸಿದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ, 'ಪ್ರವೇಶ, ಈಕ್ವಿಟಿ, ಗುಣಮಟ್ಟ, ಕೈಗೆಟುಕುವಿಕೆ, ಹೊಣೆಗಾರಿಕೆಯ ಆಧಾರಸ್ತಂಭಗಳನ್ನು ಆಧರಿಸಿ, ಭಾರತವನ್ನು ಜ್ಞಾನ ಕೇಂದ್ರವನ್ನಾಗಿ ಮಾಡಲಿವೆ' ಎಂದು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.
ಹೊಸ ಶಿಕ್ಷಣ ನೀತಿ ಭಾರತವನ್ನು ಜಗತ್ತಿನ ಜ್ಞಾನ ಕೇಂದ್ರವನ್ನಾಗಿ ಪರಿವರ್ತಿಸಲಿದೆ: ಮೋದಿ
ಈ ಬಗ್ಗೆ ಸರಣಿ ಟ್ವೀಟ್ ಮಾಡಿದ ಪ್ರಧಾನಿ ಮೋದಿ, ರಾಷ್ಟ್ರೀಯ ಶಿಕ್ಷಣ ನೀತಿ 2020ರ ಶೈಕ್ಷಣಿಕ ಚೌಕಟ್ಟನ್ನು ಸಹಭಾಗಿತ್ವ ಆಡಳಿತದ ಹೊಳೆಯುವ ಉದಾಹರಣೆಯಾಗಿ ನೆನಪಿಸಿಕೊಳ್ಳಲಾಗುತ್ತದೆ ಎಂದು ಬರೆದುಕೊಂಡಿದ್ದಾರೆ.
ಮೋದಿ
ಅಂತರ ಶಿಕ್ಷಣ ಕೋರ್ಸ್‌ಗಳು, ಪದವಿ-ಪೂರ್ವ, ಪದವಿಗಳ ನಿರ್ಗಮಿತ ಅಂಕಗಳನ್ನು ನೀಡುವುದು, ಅನೇಕ ಪ್ರಾದೇಶಿಕ ಮತ್ತು ವಿದೇಶಿ ಭಾಷೆಗಳನ್ನು ಕಲಿಸುವುದೂ ಸೇರಿದಂತೆ ನೀತಿಯಡಿ ಇರುವ ಉಪಕ್ರಮಗಳನ್ನು ಶ್ಲಾಘಿಸಿದ ಪ್ರಧಾನಿ, “ಶಿಕ್ಷಣವು ನಮ್ಮ ರಾಷ್ಟ್ರವನ್ನು ಬೆಳಗಿಸಿ ಸಮೃದ್ಧಿಯಡೆಗೆ ಕರೆದೊಯ್ಯಲಿ” ಎಂದು ಆಶಿಸಿದರು.