ಕರ್ನಾಟಕ

karnataka

By

Published : Jun 26, 2020, 3:23 PM IST

ETV Bharat / business

₹ 787 ಕೋಟಿ ಬ್ಯಾಂಕ್​ ವಂಚನೆ ಪ್ರಕರಣ: ಮಾಜಿ ಸಿಎಂ ಸೋದರಳಿಯನ ಕಚೇರಿ, ಮನೆ ಮೇಲೆ ಸಿಬಿಐ ದಾಳಿ

2019ರ ಆಗಸ್ಟ್ ತಿಂಗಳಲ್ಲಿ ಸಿಬಿಐ ಮೋಸರ್ ಬೇರ್ ಇಂಡಿಯಾ ಲಿಮಿಟೆಡ್ (ಎಂಬಿಐಎಲ್) ವಿರುದ್ಧ ಪ್ರಕರಣ ದಾಖಲಿಸಿ, ಪ್ರಸ್ತುತ ಮತ್ತು ಮಾಜಿ ಅಧಿಕಾರಿಗಳನ್ನು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾಕ್ಕೆ 354.51 ಕೋಟಿ ರೂ. ವಂಚನೆ ಎಸಗಿದ್ದಕ್ಕಾಗಿ ಆರು ಸ್ಥಳಗಳ ಮೇಲೆ ದಾಳಿ ನಡೆಸಿತ್ತು.

Bank fraud
ಬ್ಯಾಂಕ್​ ವಂಚನೆ

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು 787 ಕೋಟಿ ರೂ. ಮೌಲ್ಯದ ಇತರೆ ಬ್ಯಾಂಕ್​ಗಳ ವಂಚನೆ ಪ್ರಕರಣಕ್ಕೆ ಸಂಬಂಧ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರ ಸೋದರಳಿಯ ರತುಲ್ ಪುರಿ ಅವರಿಗೆ ಸೇರಿದ ದೆಹಲಿ ಮತ್ತು ನೋಯ್ಡಾದ ಅನೇಕ ಸ್ಥಳಗಳ ಮೇಲೆ ಕೇಂದ್ರೀಯ ತನಿಖಾ ದಳ (ಸಿಬಿಐ) ದಾಳಿ ನಡೆಸಿದೆ.

ಏಜೆನ್ಸಿಯ ಅನೇಕ ತಂಡಗಳು ದೆಹಲಿ ಮತ್ತು ನೋಯ್ಡಾದಲ್ಲಿನ ಆರೋಪಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸುತ್ತಿವೆ. ಇದರಲ್ಲಿ ಮೋಸರ್ ಬೇರ್ ಸೋಲಾರ್ ಲಿಮಿಟೆಡ್ (ಎಂಬಿಎಸ್ಎಲ್) ನಿರ್ದೇಶಕರಾದ ದೀಪಕ್ ಪುರಿ, ರತುಲ್ ಪುರಿ ಮತ್ತು ಇತರರು ಪಿಎನ್‌ಬಿ ಮತ್ತು ಇತರೆ ಬ್ಯಾಂಕ್​ಗಳಿಗೆ 787.25 ಕೋಟಿ ರೂ. ವಂಚನೆ ಎಸಗಿದ ಆಪಾದನೆಯಿದೆ ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಂಬಿಎಸ್ಎಲ್ ಮತ್ತು ಅದರ ನಿರ್ದೇಶಕರು ಹಾಗೂ ಇತರೆ ಅಪರಿಚಿತ ವ್ಯಕ್ತಿಗಳು ಮತ್ತು ಬ್ಯಾಂಕ್ ಅಧಿಕಾರಿಗಳು ಸೇರಿದಂತೆ ಹಲವರ ವಿರುದ್ಧ ಪಿಎನ್​ಬಿ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಈ ದಾಳಿಗಳು ನಡೆದಿವೆ ಎಂದು ಅಧಿಕಾರಿ ಹೇಳಿದ್ದಾರೆ.

2019ರ ಆಗಸ್ಟ್ ತಿಂಗಳಲ್ಲಿ ಸಿಬಿಐ ಮೋಸರ್ ಬೇರ್ ಇಂಡಿಯಾ ಲಿಮಿಟೆಡ್ (ಎಂಬಿಐಎಲ್) ವಿರುದ್ಧ ಪ್ರಕರಣ ದಾಖಲಿಸಿ, ಪ್ರಸ್ತುತ ಮತ್ತು ಮಾಜಿ ಅಧಿಕಾರಿಗಳನ್ನು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾಕ್ಕೆ 354.51 ಕೋಟಿ ರೂ. ವಂಚನೆ ಎಸಗಿದ್ದಕ್ಕಾಗಿ ಆರು ಸ್ಥಳಗಳ ಮೇಲೆ ದಾಳಿ ನಡೆಸಿತ್ತು.

ಎಂಬಿಐಎಲ್ ವ್ಯವಸ್ಥಾಪಕ ನಿರ್ದೇಶಕ ದೀಪಕ್ ಪುರಿ, ಅವರ ಪತ್ನಿ/ ಎಂಬಿಐಎಲ್​ನ ಪೂರ್ಣ ಸಮಯದ ನಿರ್ದೇಶಕಿ ನೀತಾ ಪುರಿ, ಮಗ/ ಎಂಬಿಐಎಲ್ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ರತುಲ್ ಪುರಿ, ನಿರ್ದೇಶಕರಾದ ಸಂಜಯ್ ಜೈನ್, ವಿನೀತ್ ಶರ್ಮಾ ಸೇರಿದಂತೆ ಇತರರ ವಿರುದ್ಧ ವಂಚನೆ, ಖೋಟಾ ಮತ್ತು ಕ್ರಿಮಿನಲ್ ದುಷ್ಕೃತ್ಯಕ್ಕಾಗಿ ಕ್ರಿಮಿನಲ್ ಪಿತೂರಿ ಆರೋಪದ ಮೇಲೆ ಖಾಸಗಿ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

ನೀತಾ ಪುರಿ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಅವರ ಸಹೋದರಿ ಮತ್ತು ರತುಲ್ ಪುರಿ ಅವರ ಸೋದರಳಿಯ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ 354 ಕೋಟಿ ರೂ. ವಂಚನೆಗೆ ಸಂಬಂಧಿಸಿದ ಹಣ ವರ್ಗಾವಣೆ ಸಂಬಂಧ ರತುಲ್ ಪುರಿ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ.

ಸಿಬಿಐ ಎಫ್ಐಆರ್ ಆಧಾರದ ಮೇಲೆ ಇಡೀ ಪ್ರಕರಣವನ್ನು ಮರು ನೋಂದಾಯಿಸಿತ್ತು. ರತುಲ್ ಪುರಿ ತನ್ನ ಕಂಪನಿಗಳ ಮೂಲಕ ಅಗಸ್ಟಾ​ ವೆಸ್ಟ್​ಲ್ಯಾಂಡ್ ಒಪ್ಪಂದದಲ್ಲಿ ಕಿಕ್‌ಬ್ಯಾಕ್ ಪಡೆದ ಆರೋಪ ಸಹ ಹೊತ್ತಿದ್ದಾರೆ.

3,600 ಕೋಟಿ ರೂ. ವಿವಿಐಪಿ ಹೆಲಿಕಾಪ್ಟರ್ ಒಪ್ಪಂದದಲ್ಲಿ ರತುಲ್ ಪುರಿ ಒಡೆತನದ ಮತ್ತು ನಿರ್ವಹಿಸುವ ಸಂಸ್ಥೆಗಳೊಂದಿಗೆ ಸಂಬಂಧಿಸಿದ ಖಾತೆಗಳನ್ನು ಕಿಕ್‌ಬ್ಯಾಕ್ ಮತ್ತು ಲಾಂಡರ್ ಹಣ ಸ್ವೀಕರಿಸಲು ಬಳಸಲಾಗಿದೆ ಎಂದು ಇಡಿ ಆರೋಪಿಸಿದೆ.

ರತುಲ್ ಪುರಿಗೆ 2019ರ ಡಿಸೆಂಬರ್ 2ರಂದು ಜಾಮೀನು ನೀಡಲಾಗಿತ್ತು.

ABOUT THE AUTHOR

...view details