2020ರಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗವು ಜಗತ್ತಿನ ಉದ್ದಗಲಕ್ಕೂ ತಾಂಡವವಾಡಿ, ಜನ ಸಾಮಾನ್ಯರಿಗೆ ಸಾಕಷ್ಟು ತೊಂದರೆ ಉಂಟು ಮಾಡಿದೆ. ದೊಡ್ಡ ಮಟ್ಟದಲ್ಲಿ ಇದು ಜನರನ್ನು ಬಲಿ ತೆಗೆದುಕೊಂಡಿದೆ. ಇಷ್ಟೇ ಅಲ್ಲ. ವಿಶ್ವದ ಎಲ್ಲಾ ದೇಶಗಳಲ್ಲೂ ಇದು ಆರ್ಥಿಕ ಹಾನಿಯನ್ನು ಕೂಡಾ ಉಂಟು ಮಾಡಿದೆ. ಎಲ್ಲಾ ದೇಶಗಳ ಆರ್ಥಿಕತೆಗಳು ಕುಸಿದಿವೆ. ಇದು ನೀತಿ ನಿರೂಪಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಆರ್ಥಿಕತೆಯ ಪುನಶ್ಚೇತನ ಅತ್ಯಂತ ನಿಧಾನವಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೇಶಗಳು ತೆಗೆದುಕೊಳ್ಳಬೇಕಾದ ಆರ್ಥಿಕ ನೀತಿ, ಹಲವಾರು ಆರ್ಥಿಕ ಸಂಕಷ್ಟಗಳ ಅಡೆತಡೆ ಎದುರಿಸುತ್ತಿವೆ.
ಈ ವಾಸ್ತವದಿಂದ ಭಾರತ ಕೂಡಾ ಹೊರತಲ್ಲ. ಕೋವಿಡ್ ಸಾವು-ನೋವು-ಆರ್ಥಿಕ ಸಂಕಷ್ಟಗಳ ಸರಮಾಲೆಯ ನಡುವೆಯೇ ಸೋಮವಾರ ಭಾರತದ ವಾರ್ಷಿಕ ಬಜೆಟ್ ೨೦೨೧-೨೨ರ ಮಂಡನೆಯಾಗಿದೆ. ಸಾರ್ವಜನಿಕ ಆರೋಗ್ಯ ಹಾಗೂ ಯೋಗ ಕ್ಷೇಮ ಹೊರತುಪಡಿಸಿ, ಉಳಿದೆಲ್ಲಾ ಕ್ಷೇತ್ರಗಳೂ ಈ ಆರ್ಥಿಕ ಕೊರತೆಯ ಬಿಗಿ ನಿಲುವಿನ ಗುಣಲಕ್ಷಣವನ್ನು ಎದುರಿಸಿವೆ.
ನಿರೀಕ್ಷೆಯಂತೆಯೆ, ಈ ಬಜೆಟ್‌ನಲ್ಲಿ ಅತಿ ಹೆಚ್ಚಿನ ಮೊತ್ತ ಸಾರ್ವಜನಿಕ ಆರೋಗ್ಯ ರಕ್ಷಣೆಗೆ ಮೀಸಲಾಗಿದೆ. ಆರೋಗ್ಯ ರಕ್ಷಣೆ, ಮತ್ತು ಸಂಬಂಧಿತ ಮೂಲಸೌಕರ್ಯ ಮತ್ತು ಇತರೆ ಖರ್ಚುಗಳಿಗೆ, ಏಪ್ರಿಲ್ ೧ರಿಂದ ಆರಂಭವಾಗುವ ಹೊಸ ಆರ್ಥಿಕ ವರ್ಷ 2021-22ರಲ್ಲಿ 2,23,846 ಕೋಟಿ ರೂಪಾಯಿಯನ್ನು ಈ ಬಜೆಟ್‌ನಲ್ಲಿ ಮೀಸಲಿಡಲಾಗಿದೆ. ಇದರ ಜೊತೆಗೆ, ಕೋವಿಡ್ ಲಸಿಕೆ ವಿತರಣೆಗೆ 35,000 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಕಳೆದ ವರ್ಷದ ಬಜೆಟ್‌ಗೆ ಹೋಲಿಸಿದರೆ, ಇದು, 137 ಪ್ರತಿಶತದಷ್ಟು ಹೆಚ್ಚು. ಇದು ನಿಜಕ್ಕೂ ಸ್ವಾಗತಾರ್ಹ. ಈ ನಡುವೆ ನಾವು ನೆನಪಿನಲ್ಲಿಟ್ಟುಕೊಳ್ಳ ಬೇಕಾದ ಅಂಶವೆಂದರೆ, ಜಗತ್ತು ಇನ್ನೂ ಕೂಡಾ ಕೋವಿಡ್‌ನಿಂದ ಮುಕ್ತವಾಗಿಲ್ಲ. ಇನ್ನು ೨-೩ಗಳ ಬಳಿಕ, ಜಗತ್ತು, ಕೋವಿಡ್‌ನಿಂದ ಸುರಕ್ಷಿತ ಹಂತಕ್ಕೆ ತಲುಪಬಹುದು. ಅಲ್ಲಿಯವರೆಗೆ, ಈ ಸಾಂಕ್ರಾಮಿಕ ರೋಗ ಎಲ್ಲೂ ಕೂಡಾ ಹಬ್ಬಬಹುದು.
ಇನ್ನು ನಾಗರಿಕರ ಭದ್ರತೆ ಹಾಗೂ ಅವರ ಯೋಗ ಕ್ಷೇಮ ನೋಡಿಕೊಳ್ಳುವುದು ಎಲ್ಲಾ ಸರಕಾರಗಳ ಜವಾಬ್ದಾರಿ. ಇದನ್ನು ನಮ್ಮ ದೇಶದ ಅತಿ ಪ್ರಾಚೀನ ಗ್ರಂಥಗಳಲ್ಲೊಂದಾದ ಚಾಣಕ್ಯ ಬರೆದ ‘ಅರ್ಥಶಾಸ್ತ್ರ’ ದಲ್ಲಿ ಕೂಡಾ ವಿವರಿಸಲಾಗಿದೆ. ಈ ಗ್ರಂಥ ಕೂಡಾ ನಾಗರಿಕರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿದೆ. ಇದರ ಜೊತೆಗೆ, ಇದಕ್ಕೆ ಸಂಬಂಧಿಸಿರುವ ಇನ್ನೊಂದು ವಿಷಯವೆಂದರೆ, ರಾಷ್ಟ್ರೀಯ ಭದ್ರತೆ. ಇವೆರಡು ಪರಸ್ಪರ ಅವಲಂಬಿತ ಅಂಶಗಳಾಗಿವೆ.
ದೇಶದ ಸಾರ್ವಭೌಮತ್ವವು ರಕ್ಷಣೆ, ಎಲ್ಲಾ ಸರಕಾರಗಳ ಪ್ರಥಮ ಪ್ರಾಶಸ್ತ್ಯದ ಸಂಗತಿ ಹಾಗೂ ಜವಾಬ್ದಾರಿ. ಈ ಮಾತನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ, ದೇಶದ ಚುನಾಯಿತ ಸರಕಾರದ ನೇತೃತ್ವ ವಹಿಸಿರುವ ಮೋದಿ ಸರಕಾರಕ್ಕೆ ಇದು ಅತ್ಯಂತ ತುರ್ತು ವಿಷಯವಾಗಿದೆ. ಏಕೆಂದರೆ, ಚೀನಾ ಸತತವಾಗಿ ಭಾರತದೊಂದಿಗಿನ ಗಡಿ ಉಲ್ಲಂಘಿಸುತ್ತಿದೆ. ಭಾರತದೊಂದಿಗಿನ ವಾಸ್ತವ ನಿಯಂತ್ರಣ ರೇಖೆಯಲ್ಲಿ ೨೦೨೦ರ ಬೇಸಗೆಯಲ್ಲಿ ಚೀನಾ ನಡೆಸಿದೆ ಆಕ್ರಮಣ, ಅದು ತೋರಿದ ಉದ್ಧಟತನ ನೋಡಿದರೆ, ಸರಕಾರದ ಪಾಲಿಗೆ ಇದೊಂದು ಮಹತ್ವದ ಸಂಗತಿಯಾಗಿದೆ.
ಈ ಹಿನ್ನೆಲೆಯಲ್ಲಿ ಹೇಳುವುದಾದರೆ, ಈ ವರ್ಷದ ಬಜೆಟ್‌ನಲ್ಲಿ ದೇಶದ ರಕ್ಷಣಾ ಕ್ಷೇತ್ರಕ್ಕೆ ಹಂಚಿಕೆಯಾಗುವ ಮೊತ್ತದ ಬಗ್ಗೆ ಬಹು ಕುತೂಹಲವಿತ್ತು. ಈ ಕುತೂಹಲದಲ್ಲಿ ಆಶ್ಚರ್ಯವಿಲ್ಲ ಏಕೆಂದರೆ, ಪರಿಸ್ಥಿತಿ ಅಷ್ಟು ಸೂಕ್ಷ್ಮವಾಗಿದೆ.ನಿರೀಕ್ಷೆಯಂತೆ, ಸರಕಾದ ಸಾಧಾರಣ ಹೆಚ್ಚಳವನ್ನು ರಕ್ಷಣಾ ಬಜೆಟ್‌ನಲ್ಲಿ ಮಾಡಿದೆ. ಕಳೆದ ಬಾರಿಯ ಪರಿಷ್ಕೃತ ವೆಚ್ಚದಿಂದ (ಆರ್‌ಇ- 4,71,000 ಕೋಟಿ ರೂಪಾಯಿ) ರಕ್ಷಣಾ ಹಂಚಿಕೆ ಈ ಬಾರಿ 4,78,000 ಕೋಟಿ ರೂಪಾಯಿಗೆ ಬಜೆಟ್ ಹಂಚಿಕೆ ಹೆಚ್ಚಿಸಲಾಗಿದೆ. ಕಳೆದ ಬಾರಿಗೆ ಹೋಲಿಸಿದರೆ, ಇದು ಈಗಿನ ವಿನಿಮಯ ದರದ ಪ್ರಕಾರ 65.48 ಬಿಲಿಯನ್ ಅಮೆರಿಕನ್ ಡಾಲರ್‌ಗಳಷ್ಟು ಹೆಚ್ಚಳ.
ಈ ಹೆಚ್ಚಳವನ್ನು ಇನ್ನಷ್ಟು ವಿಶ್ಲೇಷಣೆ ನಡೆಸಿದರೆ, ಈ ಮೊತ್ತವು, ಕಳೆದ ಬಾರಿಗಿಂತ ೧.೪೮ರಷ್ಟು ಹೆಚ್ಚಳ. ದೇಶದ ಒಟ್ಟು ನಿವ್ವಳ ಆದಾಯ (ಜಿಡಿಪಿ)ಗೆ ಹೋಲಿಸಿದರೆ ಇದು ಮುಂಬರುವ ಆರ್ಥಿಕ ವರ್ಷದ ಜಿಡಿಪಿಯ ೧.೬೩% ರಷ್ಟಾಗುತ್ತದೆ. ಆದರೆ ೨೦೧೧-೧೨ರಲ್ಲಿ ದೇಶದ ಒಟ್ಟು ಜಿಡಿಪಿಯ 2ರಷ್ಟು ರಕ್ಷಣಾ ಬಜೆಟ್‌ಗೆ ಮೀಸಲಿಡಲಾಗಿತ್ತು. ಅದಕ್ಕೆ ಹೋಲಿಸಿದರೆ, ಮೊತ್ತ ಈಗ ಕಡಿಮೆಯಾಗಿದೆ. ತಜ್ಞರ ಪ್ರಕಾರ, ಭಾರತದ ಸೈನಿಕ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಳಗೊಳಿಸಬೇಕಾದರೆ, ರಕ್ಷಣಾ ಬಜೆಟ್ ಮೊತ್ತವನ್ನು ದೇಶದ ಜಿಡಿಪಿಯ ಶೇ 3ರಷ್ಟಕ್ಕೆ ಏರಿಸಬೇಕಿದೆ. ಚೀನಾದ ಸವಾಲಿನ ಹೊರತಾಗಿಯೂ, ಭಾರತ ಹಿಂದಿಗಿಂತ ಕಡಿಮೆ ಖರ್ಚನ್ನು ರಕ್ಷಣಾ ಕ್ಷೇತ್ರದಲ್ಲಿ ಮಾಡಬೇಕಿದೆ. ಇದು ದೇಶ ಎದುರಿಸುತ್ತಿರುವ ನಾನಾ ಸವಾಲುಗಳ ಹೊರತಾಗಿಯೂ, ಒಟ್ಟಾರೆ ಖರ್ಚು ವೆಚ್ಚವನ್ನು ತಗ್ಗಿಸಲು ತೆಗೆದುಕೊಳ್ಳಬೇಕಾದ ಕ್ರಮವಾಗಿದೆ.
ಈ ನಡುವೆ, ರಕ್ಷಣಾ ಕ್ಷೇತ್ರಕ್ಕೆ ವಿನಿಯೋಜಿಸಲಾದ ಮೊತ್ತವನ್ನು ಮತ್ತಷ್ಟು ವಿಭಜಿಸಿ, ಸಂಖ್ಯೆಗಳ ಆಧಾರದಲ್ಲಿ ವಿಶ್ಲೇಷಿಸದರೆ ಇನ್ನೊಂದಿಷ್ಟು ಅಚ್ಚರಿಯ ಸಂಗತಿಗಳು ಕಾಣಸಿಗುತ್ತವೆ. ಅವುಗಳೆಂದರೆ, ಒಟ್ಟು ಘೋಷಿಸಲಾದ 4,78,000 ಕೋಟಿ ರೂ. ಪೈಕಿ 1,16,000 ಕೋಟಿ ರೂಪಾಯಿ ಪಿಂಚಣಿ ಮತ್ತು 3,62,000 ಕೋಟಿ ರೂ. ರಕ್ಷಣಾ ಸೇವೆಗಳಿಗೆ ಮೀಸಲಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ, ಈ ಮೊತ್ತದಲ್ಲಿ ದೊಡ್ಡ ಮಟ್ಟದ ಏರಿಕೆ ಕಂಡು ಬಂದಿದೆ. ಏಕೆಂದರೆ, ರಕ್ಷಣಾ ಸೇವೆಗಳಿಗೆ ಒಟ್ಟು 3,37,000 ಕೋಟಿಯಿಂದ ರೂ ಒದಗಿಸಲಾಗಿದ್ದು, ಕಳೆದ ಬಾರಿ ಇದು 3,62,000 ಕೋಟಿ ರೂಗಳಾಗಿತ್ತು. ಈ ಮೊತ್ತ ರಕ್ಷಣಾ ಕ್ಷೇತ್ರದ ಎಲ್ಲಾ ವಿಭಾಗಳಿಗೂ ಹಂಚಿಕೆಯಾಗುವ ಮೊತ್ತವಾಗಿದೆ.