ನವದೆಹಲಿ:ಕೋವಿಡ್-19 ಸೋಂಕು ಹಬ್ಬುವಿಕೆ ತಡೆಯಲು ಕೇಂದ್ರ ಸರ್ಕಾರ ದೇಶಾದ್ಯಂತ ಲಾಕ್ಡೌನ್ ಹೇರಿದೆ. ಇದರಿಂದ ಇಡೀ ವಿತ್ತೀಯ ಬೆಳವಣಿಗೆಯ ಮೇಲೆ ಪ್ರಭಾವ ಬೀರಿದೆ. ಇನ್ನು ಎರಡು ತಿಂಗಳಲ್ಲಿ ಪೂರ್ವ ಮುಂಗಾರು ಆರಂಭವಾಗಲಿದ್ದು, ಬಿತ್ತನೆ ಪೂರ್ವ ಸಿದ್ಧತಾ ಕಾರ್ಯಗಳನ್ನು ರೈತರು ಶುರು ಮಾಡಲಿದ್ದಾರೆ.
ಹೀಗಾಗಿ, ಕೃಷಿ ಸಚಿವಾಲಯ ರೈತರಿಗೆ ಅನುಕೂಲ ಆಗುವಂತಹ ಪ್ರಮುಖ ಪರಿಹಾರಗಳನ್ನು ಘೋಷಿಸಿದೆ. ಕೃಷಿ ಉತ್ಪನ್ನಗಳು ಮತ್ತು ಸಂಬಂಧಿತ ವಸ್ತುಗಳನ್ನು ಸಾಗಿಸುವ ಟ್ರಕ್‌ಗಳ ಓಡಾಟಕ್ಕೆ ಅವಕಾಶ ನೀಡಿದೆ. ಬೀಜ, ರಸಗೊಬ್ಬರ, ಕೃಷಿ ಉಪಕರಣ ಮತ್ತು ಬಿಡಿ ಭಾಗಗಳ ಮಾರಾಟ ಮಾಡುವ ಅಂಗಡಿಗಳನ್ನು ತೆರೆಯಬಹುದು ಎಂದು ಹೇಳಿದೆ.