ನವದೆಹಲಿ: ಭಾರತೀಯ ಅಂಚೆ ಇಲಾಖೆಯು ಖಾಲಿ ಇರುವ ಗ್ರಾಮೀಣ್ ಡಾಕ್ ಸೇವಕ್ (ಜಿಡಿಎಸ್) ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ವೆಬ್ಸೈಟ್ನಲ್ಲಿ ತಿಳಿಸಿದೆ.
ನೇಮಕಾತಿಯು ಬಿಹಾರ, ಅಸ್ಸೊಂ, ಗುಜರಾತ್, ಕರ್ನಾಟಕ ಮತ್ತು ಪಂಜಾಬ್ ರಾಜ್ಯಗಳಲ್ಲಿ ನಡೆಯಲಿದೆ. ಆನ್ಲೈನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆಗಸ್ಟ್ 15ರಿಂದ ಆರಂಭವಾಗಿದ್ದು, ಸೆಪ್ಟೆಂಬರ್ 2ಕ್ಕೆ ಕೊನೆಯ ದಿನವಾಗಿದೆ. ಒಟ್ಟು 10,066 ಹುದ್ದೆಗಳ ಖಾಲಿ ಇವೆ ಎಂದು ತಿಳಿಸಿದೆ.
ಅರ್ಹತೆ?
ಶೈಕ್ಷಣಿಕ:ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 10ನೇ ತರಗತಿ ಆದರೂ ತೇರ್ಗಡೆ ಆಗಿರಬೇಕು. ಉನ್ನತ ಶಿಕ್ಷಣ ಪಡೆದ ಅಭ್ಯರ್ಥಿಗಳಿಗೆ ಯಾವುದೇ ಹೆಚ್ಚುವರಿ ಆದ್ಯತೆ ಇರುವುದಿಲ್ಲ.