ನವದೆಹಲಿ:ಮುಂದಿನ ಮೂರು ತಿಂಗಳಲ್ಲಿ (ಏಪ್ರಿಲ್-ಜೂನ್) ನೇಮಕಾತಿ ಚಟುವಟಕೆಗಳು ವ್ಯಾಪಕವಾಗಿ ನಡೆಯುವ ಸಾಧ್ಯತೆ ಇದೆ ಎಂದು ಮ್ಯಾನ್‌ಪವರ್ ಇಂಡಿಯಾ ಸಮೀಕ್ಷೆ ತಿಳಿಸಿದೆ.
ಸಾರ್ವಜನಿಕ ವಲಯದ ಆಡಳಿತ, ಶಿಕ್ಷಣ ಮತ್ತು ಸೇವಾ ಕ್ಷೇತ್ರಗಳಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಸಿಗಲಿವೆ. ಜೂನ್ ತ್ರೈಮಾಸಿಕದಲ್ಲಿ ನಿವ್ವಳ ಉದ್ಯೋಗ ಸೃಷ್ಟಿ ಶೇ 9ರಷ್ಟಿದೆ ಎಂದು ನಿರೀಕ್ಷಿಸಲಾಗಿದೆ.
ಬಜೆಟ್ ಪ್ರಸ್ತಾಪಗಳು ಉದ್ಯೋಗ ಸೃಷ್ಟಿ ಒದಗಿಸುತ್ತವೆ. ಮೂಲಸೌಕರ್ಯ, ಆರೋಗ್ಯ ಮತ್ತು ಬಿಎಫ್‌ಎಸ್‌ಐ ಕ್ಷೇತ್ರಗಳಲ್ಲಿ ಪರಿಸ್ಥಿತಿ ಸ್ಪಷ್ಟವಾಗಿದೆ ಎಂದು ಮ್ಯಾನ್‌ಪವರ್ ಗ್ರೂಪ್ ಇಂಡಿಯಾ ಎಂಡಿ ಸಂದೀಪ್ ಗುಲೆತಿ ಹೇಳಿದ್ದಾರೆ.