ಕರ್ನಾಟಕ

karnataka

ETV Bharat / business

ತಾನೇ ಕತ್ತೆ, ಬೀದಿ ನಾಯಿ ಮಾರಿ, ಜಗತ್ತಿನ ಆರ್ಥಿಕ ಚೇತರಿಕೆಗೆ ಟಿಪ್ಸ್​ ಕೊಟ್ಟ ಪಾಕ್ ಪ್ರಧಾನಿ ಇಮ್ರಾನ್​!

ಕೊರೊನಾ ವೈರಸ್ ಸಾಂಕ್ರಾಮಿಕದ ಮಧ್ಯೆ ಪಾಕಿಸ್ತಾನವು ಗಂಭೀರ ಆರ್ಥಿಕ ಸವಾಲುಗಳಿಂದಾಗಿ ಬೆಳವಣಿಗೆಯ ದರ ಕುಂಠಿತಗೊಂಡಿದ್ದು, ನಿರುದ್ಯೋಗದಂತಹ ಸಮಸ್ಯೆ ಎದುರಿಸುತ್ತಿದೆ. ಇದರೊಂದಿಗೆ ಜನಸಾಮಾನ್ಯರು ನಿತ್ಯ ಬೆಲೆ ಏರಿಕೆಗೆ ಬೇಸತ್ತಿದ್ದಾರೆ. ತನ್ನ ರಾಷ್ಟ್ರದಲ್ಲಿನ ಇಂತಹ ಗಂಭೀರ ಆರ್ಥಿಕ ಸಂಕಷ್ಟಗಳು ಇದ್ದರೂ ಇಮ್ರಾನ್ ಖಾನ್ ಜಾಗತಿಕ ನಾಯಕರ ಮುಂದೆ ಆರ್ಥಿಕ ಕುಸಿತವನ್ನು ತಪ್ಪಿಸಲು 10 ಅಂಶಗಳ ಕ್ರಿಯಾ ಯೋಜನೆ ಪ್ರಸ್ತಾಪಿಸಿದ್ದಾರೆ..

Imran
ಪಾಕ್ ಪ್ರಧಾನಿ ಇಮ್ರಾನ್

By

Published : Dec 4, 2020, 4:12 PM IST

Updated : Dec 4, 2020, 4:36 PM IST

ಇಸ್ಲಾಮಾಬಾದ್ :ಕೋವಿಡ್ -19 ಸಾಂಕ್ರಾಮಿಕ ರೋಗದ ಕುರಿತ ವಿಶೇಷ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (ಯುಎನ್‌ಜಿಎ) ಅಧಿವೇಶನ ಉದ್ದೇಶಿಸಿ ಮಾತನಾಡಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಕೊರೊನಾ ಪ್ರೇರೇಪಿತ ಆರ್ಥಿಕ ಬಿಕ್ಕಟ್ಟಿನ ಕುಸಿತವನ್ನು ತಪ್ಪಿಸಲು 10 ಅಂಶಗಳ ಕ್ರಿಯಾ ಯೋಜನೆಗಳನ್ನು ಪ್ರಸ್ತಾಪಿಸಿದರು.

ಸಾಂಕ್ರಾಮಿಕ ರೋಗದ ಪ್ರತಿಕ್ರಿಯೆಯ ಕುರಿತು ಎರಡು ದಿನಗಳ ಅಧಿವೇಶನದಲ್ಲಿ 100 ಜಾಗತಿಕ ನಾಯಕರ ಸಭೆಯಲ್ಲಿ ಖಾನ್ ಮಾತನಾಡಿದ್ದಾರೆ ಎಂದು ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ. ತಮ್ಮ ಭಾಷಣದಲ್ಲಿ ಖಾನ್ ಅವರು, ಅಂತಾರಾಷ್ಟ್ರೀಯ ಹಣಕಾಸು ಬುನಾದಿ ಸುಧಾರಿಸುವ ಅಗತ್ಯವಿದೆ.

ಬಹುಪಾಲು ಮತ್ತು ನ್ಯಾಯಯುತ ಸಾಲ ನಿರ್ವಹಣಾ ಕಾರ್ಯವಿಧಾನವನ್ನು ನಿರ್ಮಿಸುವುದು. ಪ್ರಜಾಪ್ರಭುತ್ವ ಎಸ್‌ಡಿಜಿ (ಸುಸ್ಥಿರ ಅಭಿವೃದ್ಧಿ ಗುರಿ) ಕೇಂದ್ರಿತ ವ್ಯಾಪಾರ ವ್ಯವಸ್ಥೆ ನಿರ್ಮಾಣ ಮತ್ತು ನ್ಯಾಯಯುತ ಅಂತಾರಾಷ್ಟ್ರೀಯ ತೆರಿಗೆ ವ್ಯವಸ್ಥೆಗಳನ್ನು ಮುಂದಿಟ್ಟರು.

ಪಾಪರ್‌ ಪಾಕಿಸ್ತಾನ‌.. ಕತ್ತೆ, ಬೀದಿ ನಾಯಿ ಬಳಿಕ ಮೀನು ಮಾರಾಟಕ್ಕಿಳಿದ ಇಮ್ರಾನ್​ ಖಾನ್!!

ಸಾಂಕ್ರಾಮಿಕ ರೋಗವು ಅಪಾರವಾದ ಮಾನವ ಸಂಕಟಗಳನ್ನು ಉಂಟು ಮಾಡಿದೆ. ಎಲ್ಲಾ ರಾಷ್ಟ್ರಗಳಲ್ಲಿನ ಮುಖ್ಯವಾಗಿ ಬಡ ದೇಶಗಳ ಬಡವರು ಹೆಚ್ಚು ಬಳಲುತ್ತಿದ್ದಾರೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಸುಮಾರು 100 ಮಿಲಿಯನ್ ಜನರು ತೀವ್ರ ಬಡತನಕ್ಕೆ ಸಿಲುಕುತ್ತಿದ್ದಾರೆ ಎಂದು ಎಚ್ಚರಿಸಿದ್ದಾರೆ.

ನಮ್ಮ ಸ್ಥಾನದಲ್ಲಿರುವ ಇತರ ಅಭಿವೃದ್ಧಿಶೀಲ ರಾಷ್ಟ್ರಗಳು ಇದೇ ರೀತಿಯ ಸಂದಿಗ್ಧತೆ ಎದುರಿಸುತ್ತಿವೆ ಎಂಬುದು ನನಗೆ ಖಾತ್ರಿಯಿದೆ. ಆರ್ಥಿಕತೆ ಹೇಗೆ ಉತ್ತೇಜಿಸುವುದು ಮತ್ತು ಅದೇ ಸಮಯದಲ್ಲಿ ನಮ್ಮ ಬಜೆಟ್ ಕೊರತೆ ಹೇಗೆ ತಗ್ಗಿಸುವುದು ಎಂಬ ಪ್ರಶ್ನೆ ನಮ್ಮ ಮುಂದಿವೆ ಎಂದರು.

ಬೆಳವಣಿಗೆಯನ್ನು ಕಾಪಾಡಿಕೊಳ್ಳಲು ಮತ್ತು ಪುನರುಜ್ಜೀವನಗೊಳಿಸಲು ಹಣಕಾಸಿನ ವಲಯವೇ ನಮಗೆ ಇರುವ ಏಕೈಕ ಮಾರ್ಗ. ಅದರ ಹೆಚ್ಚುವರಿ ದ್ರವ್ಯತೆ ಪ್ರವೇಶಕ್ಕೆ ಅನುಕೂಲ ಮಾಡಿ ಕೊಡಬೇಕಿದೆ.

ಕೋವಿಡ್-19 ಕಾರಣದಿಂದಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಆರ್ಥಿಕ ಕುಸಿತ ತಪ್ಪಿಸಬೇಕಾದ್ರೆ, ಅಂತಾರಾಷ್ಟ್ರೀಯ ಸಮುದಾಯವು ಕೆಲವು ಪ್ರಮುಖ ಆದ್ಯತೆಯ ಕ್ರಮಗಳನ್ನು ಗುರುತಿಸಿ ಅವುಗಳನ್ನು ಕಾರ್ಯಗತಗೊಳಿಸಬೇಕಿದೆ ಎಂದು ಖಾನ್ ಹೇಳಿದರು. ಆರ್ಥಿಕ ಭದ್ರತೆ ಇಲ್ಲದೆ ಇರುವುದರಿಂದ ಘರ್ಷಣೆಗಳು ಮತ್ತು ವಿವಾದಗಳು ಪ್ರಪಂಚದಾದ್ಯಂತ ಮುಂದುವರಿಯುತ್ತವೆ ಮತ್ತು ಹೆಚ್ಚಾಗುತ್ತವೆ ಎಂದರು.

ದಿವಾಳಿಯಾಗುವತ್ತ ಪಾಕಿಸ್ತಾನ : ವಿಶ್ವದಲ್ಲೇ ಅತಿಹೆಚ್ಚು ಹಣದುಬ್ಬರ
ಕೊರೊನಾ ವೈರಸ್ ಸಾಂಕ್ರಾಮಿಕದ ಮಧ್ಯೆ ಪಾಕಿಸ್ತಾನವು ಗಂಭೀರ ಆರ್ಥಿಕ ಸವಾಲುಗಳಿಂದಾಗಿ ಬೆಳವಣಿಗೆಯ ದರ ಕುಂಠಿತಗೊಂಡಿದ್ದು, ನಿರುದ್ಯೋಗದಂತಹ ಸಮಸ್ಯೆ ಎದುರಿಸುತ್ತಿದೆ. ಇದರೊಂದಿಗೆ ಜನಸಾಮಾನ್ಯರು ನಿತ್ಯ ಬೆಲೆ ಏರಿಕೆಗೆ ಬೇಸತ್ತಿದ್ದಾರೆ.

ತನ್ನ ರಾಷ್ಟ್ರದಲ್ಲಿನ ಇಂತಹ ಗಂಭೀರ ಆರ್ಥಿಕ ಸಂಕಷ್ಟಗಳು ಇದ್ದರೂ ಇಮ್ರಾನ್ ಖಾನ್ ಜಾಗತಿಕ ನಾಯಕರ ಮುಂದೆ ಆರ್ಥಿಕ ಕುಸಿತವನ್ನು ತಪ್ಪಿಸಲು 10 ಅಂಶಗಳ ಕ್ರಿಯಾ ಯೋಜನೆ ಪ್ರಸ್ತಾಪಿಸಿದ್ದಾರೆ.

ಪಾಕಿಸ್ತಾನದ ಗ್ರಾಹಕರ ಬೆಲೆ ಸೂಚ್ಯಂಕದ ಹಣದುಬ್ಬರವು 2019ರ ಹಣಕಾಸು ವರ್ಷದಲ್ಲಿ ಸರಾಸರಿ ಶೇ.6.8 ರಿಂದ 2020ರ ವಿತ್ತೀಯ ವರ್ಷದಲ್ಲಿ ಸರಾಸರಿ ಶೇ.10.7ಕ್ಕೆ ಏರಿದೆ. ಆಹಾರ ಪದಾರ್ಥಗಳ ಹಣದುಬ್ಬರ, ಇಂಧನ ಬೆಲೆಗಳ ಏರಿಕೆ ಮತ್ತು ಡಾಲರ್​ ಎದುರು ದುರ್ಬಲವಾದ ರೂಪಾಯಿ ಶೇ.13.8 ಪ್ರತಿಶತದಷ್ಟು ಕುಸಿದಿದೆ ಎಂದು ವಿಶ್ವಬ್ಯಾಂಕ್ ತನ್ನ ವರದಿಯಲ್ಲಿ ತಿಳಿಸಿದೆ.

ಇಸ್ಲಾಮಾಬಾದ್​ ವಿದೇಶಿ ಕರೆನ್ಸಿ ಸಾಲದ ಮೇಲೆ ಯಥೇಚ್ಛವಾಗಿ ಅವಲಂಬಿಸಿರುವುದರಿಂದ ಬಾಹ್ಯ ಸಾಲ ಪಾವತಿ ದುರ್ಬಲಗೊಳ್ಳುತ್ತಿದೆ. ಇದರ ಜೊತೆಗೆ ಅಮೆರಿಕ-ಚೀನಾ ನಡುವಿನ ವ್ಯಾಪಾರ ಉದ್ವಿಗ್ನತೆಯು ಪಾಕಿಸ್ತಾನಕ್ಕೆ ಭವಿಷ್ಯದಲ್ಲಿ ಗಂಭೀರವಾದ ಹಣಕಾಸು ಸಮಸ್ಯೆಗಳು ತಂದೊಡ್ಡಲಿದೆ ಎಂದು ಅಂತಾರಾಷ್ಟ್ರೀಯ ಕ್ರೆಡಿಟ್​ ರೇಟಿಂಗ್ ಸಂಸ್ಥೆ ಮೂಡಿಸ್​ ಕೂಡ ಈ ಹಿಂದೆ ಎಚ್ಚರಿಸಿತ್ತು.

Last Updated : Dec 4, 2020, 4:36 PM IST

ABOUT THE AUTHOR

...view details