ವಾಷಿಂಗ್ಟನ್: ಜಾಗತಿಕ ಆರ್ಥಿಕತೆಯು 1930ರ ದಶಕದಲ್ಲಿ ಮಹಾ ಆರ್ಥಿಕ ಕುಸಿತದ ನಂತರದ ಭೀಕರ ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿರುವ ಕಾರಣ 2020ರಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ 1.9ರಷ್ಟು ಇರಬಹುದೆಂದು ಐಎಂಎಫ್ ಅಂದಾಜಿಸಿದೆ.
ಕೊರೊನಾ ವೈರಸ್ ವಿಶ್ವದಾದ್ಯಂತ ಎಲ್ಲಾ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿವೆ. ಭಾರತವು 1991ರ ಉದಾರೀಕರಣ ಅಳವಡಿಸಿಕೊಂಡ ನಂತರ ಅತ್ಯಂತ ಕೆಟ್ಟ ಬೆಳವಣಿಗೆಯ ಕಾರ್ಯಕ್ಷಮತೆ ದಾಖಲಿಸುವ ಸಾಧ್ಯತೆಯಿದೆ. ಆದರೂ ಅಂತಾರಾಷ್ಟ್ರೀಯ ಹಣಕಾಸು ನಿಧಿ ತನ್ನ ಇತ್ತೀಚಿನ ವಿಶ್ವ ಆರ್ಥಿಕ ವರದಿಯಲ್ಲಿ ಭಾರತವನ್ನು ವಿಶ್ವದ ವೇಗವಾಗಿ ಬೆಳಯುತ್ತಿರುವ ಆರ್ಥಿಕತೆಗಳ ಸಾಲಿನಲ್ಲಿ ಇರಿಸಿದೆ.
2020ರಲ್ಲಿ ಸಕಾರಾತ್ಮಕ ಬೆಳವಣಿಗೆಯ ದರ ಭಾರತ ಮತ್ತು ಚೀನಾ ದಾಖಲಿಸಲಿವೆ ಎಂದು ಐಎಂಎಫ್ ಅಂದಾಜಿಸಿದೆ. ಚೀನಾ ಶೇ 1.2ರಷ್ಟು ಬೆಳವಣಿಗೆ ದರ ಹೊಂದಲಿದೆ ಎಂದು ಊಹಿಸಿದೆ.
ನಾವು 2020ರಲ್ಲಿ ಜಾಗತಿಕ ಬೆಳವಣಿಗೆಯನ್ನು ಶೇ -3ಕ್ಕೆ ಇಳಿಸುತ್ತೇವೆ. ಇದು 2020ರ ಜನವರಿಯ ಶೇ 6.3ರಷ್ಟು ಅಂಕಗಳಿಂದ ತಗ್ಗಿಸುತ್ತಿದ್ದೇವೆ. ಇದು ಬಹಳ ಕಡಿಮೆ ಅವಧಿಯಲ್ಲಿ ಪ್ರಮುಖ ಪರಿಷ್ಕರಣೆಯಾಗಿದೆ. ಕೋವಿಡ್-19 ಸಾಂಕ್ರಾಮಿಕವು ಎಲ್ಲ ಪ್ರದೇಶಗಳ ಬೆಳವಣಿಗೆಯ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎಂದು ಐಎಂಎಫ್ ಮುಖ್ಯ ಅರ್ಥಶಾಸ್ತ್ರಜ್ಞ ಭಾರತೀಯ ಮೂಲದ ಅಮೆರಿಕನ್ ಗೀತಾ ಗೋಪಿನಾಥ್ ಹೇಳಿದ್ದಾರೆ.