ಕರ್ನಾಟಕ

karnataka

ETV Bharat / business

ಕೋವಿಡ್​ ರೂಪದ 'ಆ್ಯಕ್ಟ್​ ಆಫ್ ಗಾಡ್'​​ನಿಂದ ಅಸಾಧಾರಣ ಪರಿಸ್ಥಿತಿ ತಲೆದೂರಿದೆ: ಸೀತಾರಾಮನ್​ - Sitharaman press briefing

ಕೋವಿಡ್​-19 ರೂಪದಲ್ಲಿ ‘ದಿ ಆ್ಯಕ್ಟ್ ಆಫ್ ಗಾಡ್’ ಕಾರಣದಿಂದ ಅಸಾಧಾರಣ ಪರಿಸ್ಥಿತಿ ತಲೆದೂರಿದೆ. ಇದರಿಂದಾಗಿ ನಷ್ಟ ಪರಿಹಾರದ ಅಂತರ ವ್ಯಾಪಕವಾಗಿ ಹೆಚ್ಚಳವಾಗಿದೆ. ಜಿಎಸ್​ಟಿ ಅನುಷ್ಠಾನದಿಂದ ಉಂಟಾಗುವ ನಷ್ಟ ಪರಿಹಾರದ ಭಾಗಕ್ಕೆ ಸಾಲ ಪಡೆಯಲು ಕೇಂದ್ರವು ಆರ್‌ಬಿಐ ಮೂಲಕ ರಾಜ್ಯಗಳಿಗೆ ಅನುಕೂಲ ಕಲ್ಪಿಸುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜಿಎಸ್​ಟಿ ಸಭೆ ಬಳಿಕ ಹೇಳಿದರು.

Nirmala Sitharaman
ನಿರ್ಮಲಾ ಸೀತಾರಾಮನ್

By

Published : Aug 27, 2020, 6:06 PM IST

ನವದೆಹಲಿ:ಕೋವಿಡ್​-19 ರೂಪದಲ್ಲಿ ‘ದಿ ಆ್ಯಕ್ಟ್ ಆಫ್ ಗಾಡ್’ (ದೇವರ ಚಟುವಟಿಕೆ) ಕಾರಣದಿಂದ ಅಸಾಧಾರಣ ಪರಿಸ್ಥಿತಿ ತೆಲೆದೂರಿದೆ. ಇದರಿಂದಾಗಿ ನಷ್ಟ ಪರಿಹಾರದ ಅಂತರ ವ್ಯಾಪಕವಾಗಿ ಹೆಚ್ಚಳವಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಹೇಳಿದರು.

ವಿಡಿಯೋ ಕಾನ್ಫರೆನ್ಸ್ ಮೂಲಕ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಮಂಡಳಿಯ 41ನೇ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ಕೋವಿಡ್​-19 ರೂಪದಲ್ಲಿ ‘ದಿ ಆ್ಯಕ್ಟ್ ಆಫ್ ಗಾಡ್’ ಕಾರಣದಿಂದ ಅಸಾಧಾರಣ ಪರಿಸ್ಥಿತಿ ತಲೆದೂರಿದೆ. ಇದರಿಂದಾಗಿ ನಷ್ಟ ಪರಿಹಾರದ ಅಂತರ ವ್ಯಾಪಕವಾಗಿ ಹೆಚ್ಚಳವಾಗಿದೆ. ಜಿಎಸ್​ಟಿ ಅನುಷ್ಠಾನದಿಂದ ಉಂಟಾಗುವ ನಷ್ಟ ಪರಿಹಾರದ ಭಾಗಕ್ಕೆ ಸಾಲ ಪಡೆಯಲು ಕೇಂದ್ರವು ಆರ್‌ಬಿಐ ಮೂಲಕ ರಾಜ್ಯಗಳಿಗೆ ಅನುಕೂಲ ಕಲ್ಪಿಸುತ್ತದೆ ಎಂದರು.

ವಿತ್ತೀಯ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ (ಎಫ್‌ಆರ್‌ಬಿಎಂ) ಕಾಯ್ದೆ ಆಯ್ಕೆಯಡಿ ರಾಜ್ಯಗಳ ಸಾಲ ಮಿತಿಯಲ್ಲಿ ಕೇಂದ್ರ ಸರ್ಕಾರವು 0.5 ಪ್ರತಿಶತದಷ್ಟು ವಿಶ್ರಾಂತಿ ನೀಡುತ್ತದೆ. ರಾಜ್ಯಗಳು ನಿರೀಕ್ಷಿತ ಪರಿಹಾರವನ್ನು ಮೀರಿ ಹೆಚ್ಚು ಸಾಲ ಪಡೆಯಲು ಇದನ್ನು ಆಯ್ಕೆ ಮಾಡಿಕೊಳ್ಳಬಹುದು. ಇದು ಕೋವಿಡ್​-19ನಿಂದ ಉಂಟಾಗುವ ಗಾಯವಾಗಿದೆ ಎಂದರು.

ಒಂದು ವೇಳೆ ರಾಜ್ಯವು ಆಯ್ಕೆ ಒಂದನ್ನು ಆಯ್ದುಕೊಂಡರೆ ಅದು ಕಡಿಮೆ ಸಾಲ ಪಡೆಯುತ್ತದೆ. ಆದರೂ ಅದರ ಪರಿಹಾರಕ್ಕೆ ತಕ್ಕಂತೆ ಅರ್ಹತೆ ರಕ್ಷಿಸಲಾಗುವುದು. ಕಡಿಮೆ ಸಾಲ ಪಡೆದು ನಂತರ ಸೆಸ್ ಪಡೆಯುವುದಾ ಅಥವಾ ಪರಿವರ್ತನೆಯ ಅವಧಿಯಲ್ಲಿ ಸಂಗ್ರಹಿಸಿದ ಸೆಸ್ ಬಳಸಿ ಹೆಚ್ಚು ಸಾಲ ಮಾಡಿ ಮತ್ತು ಅದನ್ನು ಪಾವತಿಸುವುದಾ ಎಂಬುದನ್ನು ರಾಜ್ಯಗಳ ಇಚ್ಛೆಗೆ ಬಿಡಲಾಗಿದೆ ಎಂದು ಸೀತಾರಾಮನ್ ಹೇಳಿದರು.

ಹೆಚ್ಚು ಸಾಲ ಪಡೆಯಲು ಮಾರುಕಟ್ಟೆಗೆ ಹೋಗುವ ಬದಲು ಕಠಿಣ ಮಾರ್ಗದ ಮೂಲಕ ಪರಿಹಾರ ಪಡೆಯುವಂತಹ ಕೆಲವು ರಾಜ್ಯಗಳು ಇರಬಹುದು. ರಾಜ್ಯಗಳು ತಮಗೆ ಬರುವ ನಿರೀಕ್ಷಿತ ಪರಿಹಾರವನ್ನು ಅವಲಂಬಿಸಿ ನಿರ್ಧಾರ ತೆಗೆದುಕೊಳ್ಳಬಹುದು. ಈ ಆಯ್ಕೆಯನ್ನು ರಾಜ್ಯಗಳಿಗೆ ತಕ್ಕಂತೆ ನಿರ್ಮಿಸಲಾಗಿದೆ ಎಂದರು.

ತೆರಿಗೆ ದರಗಳ ಹೆಚ್ಚಳದ ಕುರಿತು ಮಾತನಾಡಲು ಇದು ಸೂಕ್ತ ಸಮಯವಲ್ಲ ಎಂಬುದನ್ನು ಜಿಎಸ್​​ಟಿ ಕೌನ್ಸಿಲ್ ಒಪ್ಪಿಕೊಂಡಿದೆ. ಪ್ರತಿ ರಾಜ್ಯವು ಮಾರುಕಟ್ಟೆಗೆ ಧಾವಿಸಿದರೆ, ಅದು ಬಾಂಡ್ ಇಳುವರಿ ಹೆಚ್ಚಳ ಮಾಡುತ್ತದೆ. ಇದರ ಬದಲು ನಮಗೆ ನೆರವಾಗಲು ಮತ್ತು ಪ್ರಕ್ರಿಯೆಯನ್ನು ಸುಗಮಗೊಳಿಸಲು ಆರ್‌ಬಿಐ ಅನ್ನು ಸಂಪರ್ಕಿಸುವುದು ಸೂಕ್ತವೆಂದು ನಾವು ಭಾವಿಸಿದ್ದೇವೆ. ಆ ಮೂಲಕ ಎಲ್ಲಾ ರಾಜ್ಯಗಳು ಒಂದೇ ದರದಲ್ಲಿ ಸಾಲ ಪಡೆಯಬಹುದು ಎಂದು ಆರ್​ಬಿಐನಿಂದ ಪಡೆಯಬಹುದಾದ ಸಾಲದ ಬಗ್ಗೆ ಸ್ಪಷ್ಟನೆ ನೀಡಿದರು.

ABOUT THE AUTHOR

...view details