ಕರ್ನಾಟಕ

karnataka

ETV Bharat / business

ಜೂನ್​ ಅಂತ್ಯದಲ್ಲಿ ಜಿಎಸ್​ಟಿ ಮಂಡಳಿ ಸಭೆ: ಜಿಎಸ್​ಟಿ ವಿಳಂಬ ಶುಲ್ಕ ಮನ್ನಾ ಚರ್ಚೆ! - ಜಿಎಸ್​ಟಿ ಲೇಟ್ ಫೀ​

2017ರ ಆಗಸ್ಟ್ (ಜಿಎಸ್​ಟಿ ಆರಂಭ) ಮತ್ತು 2020ರ ಜನವರಿ ನಡುವಿನ ಹಿಂದಿನ ಅವಧಿಯಲ್ಲಿ ಜಿಎಸ್​ಟಿ ರಿಟರ್ನ್ಸ್​ನ ವಿಳಂಬ ಸಲ್ಲಿಕೆ ಮೇಲಿನ ಶುಲ್ಕ ಪಾವತಿಯನ್ನು ಮನ್ನಾ ಮಾಡುವಂತೆ ವ್ಯಾಪಾರಿಗಳು ಕೋರಿದ್ದರು. ವ್ಯಾಪಾರ ನಷ್ಟ ಮತ್ತು ತೆರಿಗೆ ಪಾವತಿಸಲು ಸಂಪನ್ಮೂಲಗಳ ಕೊರತೆ ಎದುರಿಸುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಜಿಎಸ್​ಟಿ ವಿಳಂಬ ಶುಲ್ಕ ಮನ್ನಾ ಚರ್ಚೆ ಮಹತ್ವದ್ದಾಗಿದೆ.

GST Council
ಜಿಎಸ್​ಟಿ ಮಂಡಳಿ ಸಭೆ

By

Published : Jun 2, 2020, 6:36 PM IST

ನವದೆಹಲಿ:ಕೋವಿಡ್ -19 ಸಾಂಕ್ರಾಮಿಕದಿಂದ ಪ್ರಭಾವಿತವಾದ ವ್ಯವಹಾರಗಳಿಗೆ ಹೆಚ್ಚಿನ ಪರಿಹಾರ ನೀಡಲು ಈ ತಿಂಗಳ ಕೊನೆಯಲ್ಲಿ ನಡೆಯಲಿರುವ ಜಿಎಸ್​ಟಿ ಮಂಡಳಿ ಸಭೆಯಲ್ಲಿ ರಿಟರ್ನ್ಸ್ ಸಲ್ಲಿಸುವ ವಿಳಂಬದ ಮೇಲಿನ ಶುಲ್ಕದ ಕುರಿತು ಚರ್ಚಿಸುವ ಸಾಧ್ಯತೆ ಇದೆ.

ಕೋವಿಡ್ -19 ನಿಂದ ಉದ್ಭವಿಸುವ ಪ್ರಸ್ತುತ ಪರಿಸ್ಥಿತಿಯಲ್ಲಿ 5 ಕೋಟಿ ರೂ.ಗಿಂತ ಕಡಿಮೆ ವಹಿವಾಟು ಹೊಂದಿರುವ ಸಣ್ಣ ಉದ್ಯಮಗಳಿಗೆ ನೆರವಾಗುವುದಾಗಿ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಘೋಷಿಸಿದ್ದರು. ಫೆಬ್ರವರಿ, ಮಾರ್ಚ್, ಏಪ್ರಿಲ್ ಮತ್ತು ಮೇ 2020ರ ಜಿಎಸ್​ಟಿ ಆದಾಯ ಜೂನ್​ವರೆಗೆ ವಿಸ್ತರಿಸುವುದಾಗಿ ಹೇಳಿದ್ದರು. ಈ ಅವಧಿಗೆ ಯಾವುದೇ ವಿಳಂಬ ಶುಲ್ಕ ಸಹ ವಿಧಿಸುತ್ತಿಲ್ಲ.

ಜಿಎಸ್​ಟಿ ರಿಟರ್ನ್ಸ್ ಸಲ್ಲಿಸುವ ವಿಸ್ತರಣೆಯು ಸ್ವಾಗತಾರ್ಹ. ತೀವ್ರವಾದ ದ್ರವ್ಯತೆ ಸಮಸ್ಯೆಗಳನ್ನು ಎದುರಿಸುತ್ತಿರುವ ವ್ಯವಹಾರಗಳಿಗೆ ನೆರವಾಗಲು ಈ ಹಿಂದಿನ ವಿಳಂಬಗಳಿಗೆ ವಿಧಿಸುವ ತಡ ಶುಲ್ಕವನ್ನು ಸಹ ಮನ್ನಾ ಮಾಡಬೇಕು ಎಂದು ದೆಹಲಿ ಮೂಲದ ವ್ಯಾಪಾರಿಯೊಬ್ಬರು ಮನವಿ ಮಾಡಿದರು.

ತೆರಿಗೆದಾರರು ಸಮಯಕ್ಕೆ ರಿಟರ್ನ್ಸ್ (ಜಿಎಸ್‌ಟಿಆರ್ 3 ಬಿ) ಸಲ್ಲಿಸುತ್ತಾರೆ. ಖರೀದಿದಾರರಿಂದ ಸಂಗ್ರಹಿಸಿದ ಮೊತ್ತದ ಮೇಲೆ ಮತ್ತು ಸರ್ಕಾರದಿಂದ ಪಾವತಿಸಬೇಕಾದ ತೆರಿಗೆಯನ್ನು ಪಾವತಿಸಲು ತಡ ಮಾಡಿದವರಿಗೆ ಶುಲ್ಕ ವಿಧಿಸಲಾಗುತ್ತದೆ ಎಂದು ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ.

ABOUT THE AUTHOR

...view details