ಕರ್ನಾಟಕ

karnataka

ETV Bharat / business

ಸಾಮೂಹಿಕ ಸಂತೋಷ ಜಿಡಿಪಿಯಷ್ಟೇ ಮುಖ್ಯ: ಹೊಸ ಪರಿಕಲ್ಪನೆ ಪ್ರಸ್ತಾಪಿಸಿದ ಪ್ರಣಬ್ ಮುಖರ್ಜಿ

ಪ್ರಪಂಚವು ಇಂದು ಜಿಡಿಪಿ ಬಗ್ಗೆ ಹೆಚ್ಚು ಮಾತನಾಡುತ್ತಿದೆ. ಜಗತ್ತಿಗೆ ಇನ್ನೂ ಹೆಚ್ಚಿನದ್ದು ಬೇಕು. ಸಾಮೂಹಿಕ ಸಂತೋಷವೂ ಕೂಡ ಜಿಡಿಪಿಯಷ್ಟೇ ಮುಖ್ಯವಾದದ್ದು, ಇದು ಹೊಸ ಪರಿಕಲ್ಪನೆ ಎಂದು ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ಅವರು ಹೇಳಿದರು.

ಪ್ರಣಬ್ ಮುಖರ್ಜಿ

By

Published : Sep 6, 2019, 9:29 AM IST

ನವದೆಹಲಿ: ಸಾಮೂಹಿಕ ಸಂತೋಷವು (mass happiness) ಜಿಡಿಪಿಯಷ್ಟೇ ಮುಖ್ಯವಾಗಿದ್ದು, ಇದಕ್ಕೆ ಶಿಕ್ಷಣ ಅಡಿಪಾಯವಾಗಿದೆ ಎಂದು ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ಅಭಿಪ್ರಾಯಪಟ್ಟರು.

ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯ ಅವರ ಪುಸ್ತಕ ಬಿಡುಗಡೆ ಗೊಳಿಸಿ ಮಾತನಾಡಿದ ಅವರು, ಪ್ರಪಂಚವು ಇಂದು ಜಿಡಿಪಿ ಬಗ್ಗೆ ಹೆಚ್ಚು ಮಾತನಾಡುತ್ತಿದೆ. ಜಗತ್ತಿಗೆ ಇನ್ನೂ ಹೆಚ್ಚಿನದ್ದು ಬೇಕು. ಸಾಮೂಹಿಕ ಸಂತೋಷವೂ ಕೂಡ ಜಿಡಿಪಿಯಷ್ಟೇ ಮುಖ್ಯವಾದದ್ದು, ಇದು ಹೊಸ ಪರಿಕಲ್ಪನೆ ಎಂದು ಅವರು ಹೇಳಿದರು.

ಸಾಮೂಹಿಕ ಸಂತೋಷಕ್ಕೆ ಶಿಕ್ಷಣವೇ ಅಡಿಪಾಯವಾಗಿದೆ. ಯಾವಾಗ ಜನ ಶಿಕ್ಷಿತರಾಗುತ್ತಾರೋ ಆಗ ಸಂತೋಷ ತಂತಾನೇ ಉದ್ಭವವಾಗುತ್ತದೆ ಎಂದು ಅವರು ತಿಳಿಸಿದರು.

‘ಶಿಕ್ಷಾ’ ಪುಸ್ತಕದ ಲೇಖಕ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯ ಮಾತನಾಡಿ, ಶಿಕ್ಷಾ ಪುಸ್ತಕ ಬಿಡುಗಡೆಗೊಳಿಸಿದ ಭಾರತ ರತ್ನ ಪುರಸ್ಕೃತ ಪ್ರಣಬ್​ ಮುಖರ್ಜಿ ಅವರಿಗೆ ಧನ್ಯವಾದಗಳು. ಈ ಪುಸ್ತಕ ಬರೆದದ್ದು ಸಂಶೋಧನಾ ವಿದ್ಯಾರ್ಥಿಗಳಿಗೆ ಅಲ್ಲ. ಸಾಮಾನ್ಯ ಶಿಕ್ಷಕರು ಮತ್ತು ಶಿಕ್ಷಣ ಕ್ಷೇತ್ರದಲ್ಲಿನ ಸಾಧಕರಿಗಾಗಿ ಎಂದರು.

ABOUT THE AUTHOR

...view details