ನವದೆಹಲಿ: ಜನರಿಗೆ ನಗದು ಬೆಂಬಲ ನೀಡಲು ನಿರಾಕರಿಸುವ ಮೂಲಕ ಕೇಂದ್ರ ಸರ್ಕಾರ ಆರ್ಥಿಕತೆ ಹಾಗೂ ಎಂಸ್ಎಂಇ ನಾಶಪಡಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದರು.
ಕೊರೊನಾ ವೈರಸ್ ಸಾಂಕ್ರಾಮಿಕವು ಆರ್ಥಿಕತೆ ಮತ್ತು ದೇಶದ ಎಂಎಸ್‌ಎಂಇ ವಲಯದ ವ್ಯವಹಾರಗಳ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಟ್ವಿಟ್ಟರ್‌ನಲ್ಲಿ ಸುದ್ದಿ ವರದಿಯನ್ನು ಹಂಚಿಕೊಂಡಿದ್ದಾರೆ.
ಪ್ರಸ್ತುತ ಬಿಕ್ಕಟ್ಟು ಪರಿಸ್ಥಿತಿಯಿಂದ ಹೊರಬರಲು ಬಡವರಿಗೆ ತಕ್ಷಣ 10,000 ರೂ. ನೆರ ನಗದು ವರ್ಗಾವಣೆ ಮತ್ತು ಎಂಎಸ್‌ಎಂಇ ಉದ್ಯಮಕ್ಕೆ ಆರ್ಥಿಕ ಉತ್ತೇಜನ ಪ್ಯಾಕೇಜ್ ನೀಡುವಂತೆ ಮನವಿ ಮಾಡಿದ್ದರು.
ಜನರಿಗೆ ಮತ್ತು ಎಂಎಸ್‌ಎಂಇಗಳಿಗೆ ನಗದು ಬೆಂಬಲ ನೀಡಲು ನಿರಾಕರಿಸುವ ಮೂಲಕ ಸರ್ಕಾರ ನಮ್ಮ ಆರ್ಥಿಕತೆಯನ್ನು ಸಕ್ರಿಯವಾಗಿ ನಾಶಪಡಿಸುತ್ತಿದೆ. ಇದು ಡೆಮನ್ 2.0 ಎಂದು ಟ್ವೀಟ್ ಮಾಡಿದ್ದಾರೆ.
ಈ ಬಿಕ್ಕಟ್ಟಿನಿಂದ ಹೊರಬರಲು ಜನರಿಗೆ ಮತ್ತು ಉದ್ಯಮಕ್ಕೆ ಹಣ ನೀಡದಿರುವ ಸರ್ಕಾರದ ಅಪರಾಧ ಎಸಗುತ್ತಿದೆ ಎಂದು ರಾಹುಲ್ ಗಾಂಧಿ ಈ ಹಿಂದೆ ಹೇಳಿದ್ದರು.