ನವದೆಹಲಿ:ಮುಂದಿನ 5-6 ವರ್ಷಗಳಲ್ಲಿ ಭಾರತದಲ್ಲಿ ಗೂಗಲ್ ಕಂಪನಿ 75,000 ಕೋಟಿ ರೂ. (10 ಬಿಲಿಯನ್ ಅಮೆರಿಕನ್ ಡಾಲರ್) ಹೂಡಿಕೆ ಮಾಡಲಿದೆ ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಘೋಷಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ ಬಳಿಕ ಭಾರತದಲ್ಲಿ ಹೂಡಿಕೆ ಮಾಡುವುದಾಗಿ ಹೇಳಿದ್ದಾರೆ.
ನಾವು ಭಾರತದಲ್ಲಿ ಈಕ್ವಿಟಿ ಹೂಡಿಕೆ, ಪಾಲುದಾರಿಕೆ ಮತ್ತು ಕಾರ್ಯಾಚರಣೆಯ ಮೂಲಸೌಕರ್ಯ ಇಕೋ ವ್ಯವಸ್ಥೆಯ ಮೂಲಕ ಹೂಡಿಕೆ ಮಾಡುತ್ತೇವೆ. ಇದು ಭಾರತದ ಭವಿಷ್ಯ ಮತ್ತು ಡಿಜಿಟಲ್ ಆರ್ಥಿಕತೆಯ ಬಗೆಗಿನ ನಮ್ಮ ವಿಶ್ವಾಸದ ಪ್ರತಿಬಿಂಬವಾಗಿದೆ ಎಂದು ಪಿಚೈ ಅವರು 'ಗೂಗಲ್ ಫಾರ್ ಇಂಡಿಯಾ ವರ್ಚುವಲ್ ಸಮ್ಮೇಳನ'ದಲ್ಲಿ ಹೇಳಿದರು.
ಭಾರತದ ವಿಶಿಷ್ಟ ಅಗತ್ಯಗಳಿಗೆ ತಕ್ಕಂತೆ ಹೊಸ ಉತ್ಪನ್ನಗಳು ಮತ್ತು ಸೇವೆಗಳನ್ನು ನಿರ್ಮಿಸುವುದು. ಡಿಜಿಟಲ್ ರೂಪಾಂತರವನ್ನು ಮುಂದುವರಿಸಲು ಅಥವಾ ಆರಂಭಿಸಲು ಉದ್ಯಮಗಳಿಗೆ ಅಧಿಕಾರ ನೀಡುವುದು. ಆರೋಗ್ಯ, ಕೃಷಿ ಮತ್ತು ಶಿಕ್ಷಣದಂತಹ ಕ್ಷೇತ್ರಗಳಲ್ಲಿ ಸಾಮಾಜಿಕ ಒಳಿತಿಗಾಗಿ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯನ್ನು ಸದುಪಯೋಗಪಡಿಸಿಕೊಳ್ಳುವುದು ಇದರಲ್ಲಿ ಸೇರಿವೆ ಎಂದು ಹೇಳಿದರು.