ಲಂಡನ್: ತಂತ್ರಜ್ಞಾನವು ಪ್ರಯೋಜನಗಳ ಜೊತೆಗೆ ಋಣಾತ್ಮಕ ಪರಿಣಾಮಗಳನ್ನು ತಂದೊಡ್ಡುತ್ತದೆ. ಕೃತಕ ಬುದ್ಧಿಮತ್ತೆಯನ್ನು ನಿಯಂತ್ರಿಸಲು ಸಮತೋಲಿತ ವಿಧಾನ ಅಗತ್ಯವಿದೆ ಎಂದು ಗೂಗಲ್‌ನ ಮುಖ್ಯ ಕಾರ್ಯನಿರ್ವಾಹಕ ಸುಂದರ್ ಪಿಚೈ ಕರೆ ನೀಡಿದ್ದಾರೆ.
ಕೃತಕ ಬುದ್ಧಿಮತ್ತೆಯನ್ನು ಹೇಗೆ ಬಳಸುತ್ತಾರೆ ಎಂಬುದರ ಬಗ್ಗೆ ಮಿತಿಗಳನ್ನು ಹೇರಲು ಕಾನೂನು ತಜ್ಞರು ಮತ್ತು ಸರ್ಕಾರಗಳು ಗಂಭೀರವಾಗಿ ಪರಿಗಣಿಸುತ್ತಿರುವ ಬೆನ್ನಲ್ಲೇ ಸುಂದರ್ ಪಿಚೈ ಅವರ ಅಭಿಪ್ರಾಯ ಹೊರಬಿದ್ದಿದೆ.
ಕೃತಕ ಬುದ್ಧಿಮತ್ತೆಯನ್ನು ನಿಯಂತ್ರಿಸುವ ಅವಶ್ಯಕತೆಯಿದೆ ಎಂಬುದರ ಹೊರತು ಬೇರೆ ಯಾವುದೇ ಪ್ರಶ್ನೆ ನನ್ನ ಮನಸ್ಸಿನಲ್ಲಿ ಇಲ್ಲ. ಈ ಬಗ್ಗೆ ಸರ್ಕಾರಗಳು ಪ್ರಮುಖ ಪಾತ್ರ ವಹಿಸಬೇಕಿದೆ. ಯುರೋಪಿಯನ್ ಒಕ್ಕೂಟ ಮತ್ತು ಅಮೆರಿಕ ಇದರ ನಿಯಂತ್ರಣಕ್ಕೆ ತಮ್ಮದೇ ಆದ ವಿಧಾನಗಳನ್ನು ರೂಪಿಸಲು ಇಂದಿನಿಂದಲೇ ಆರಂಭಿಸಬೇಕು ಎಂದು ಥಿಂಕ್ ಟ್ಯಾಂಕ್ ಭಾಷಣದಲ್ಲಿ ಹೇಳಿದ್ದಾರೆ.
ಇದು ದೊಡ್ಡ ಪ್ರಯೋಜನಗಳ ಭರವಸೆ ನೀಡುತ್ತದೆ ಆದರೂ ಕೃತಕ ಬುದ್ಧಿಮತ್ತೆಯ ಸಂಭವನೀಯ ತೊಂದರೆಯ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು. 'ಕಾಣೆಯಾದ ಜನರನ್ನು ಹುಡುಕಲು ಇದನ್ನು ಬಳಸಬಹುದು. ಆದರೆ, ಕೆಲವು ನಿರ್ದಿಷ್ಟ ಕೆಟ್ಟ ಕಾರಣಗಳಿವೆ' ಎಂದರು. ಪಿಚೈ, ಆ ಕೆಟ್ಟ ಕಾರಣಗಳು ಯಾವುವು ಎಂಬುದನ್ನು ತಮ್ಮ ಭಾಷಣದಲ್ಲಿ ತಿಳಿಸಲಿಲ್ಲ.