ಕರ್ನಾಟಕ

karnataka

ETV Bharat / business

'2014ರಲ್ಲಿ 11ನೇ ಸ್ಥಾನದಲ್ಲಿದ್ದ ಭಾರತದ ಆರ್ಥಿಕತೆ ಈಗ 5ನೇ ಸ್ಥಾನದಲ್ಲಿದೆ'

ಭಾರತೀಯ ಆರ್ಥಿಕತೆಯ ಮೂಲಭೂತ ಅಂಶಗಳು ಬಲಿಷ್ಠವಾಗಿವೆ. ನೀತಿಗಳು ಕೂಡ ಸ್ಪಷ್ಟವಾಗಿವೆ. ಭಾರತದಲ್ಲಿ 2019ರಲ್ಲಿ 48 ಬಿಲಿಯನ್ ಡಾಲರ್​ ಎಫ್‌ಡಿಐ ಹರಿದುಬಂದಿದ್ದು, ಇದು ಶೇ 16ರಷ್ಟು ಬೆಳವಣಿಗೆ ಇದು. ಶೇ 53ಕ್ಕೂ ಅಧಿಕ ಖಾಸಗಿ ಇಕ್ವಿಟಿ ಇದ್ದರೆ ಸಾಹಸೋದ್ಯಮ ಬಂಡವಾಳ ಹೂಡಿಕೆ 19 ಬಿಲಿಯನ್ ಇದೆ. ಆದರೆ, ಜಾಗತಿಕ ಆರ್ಥಿಕತೆ ಕುಸಿತವನ್ನು ಎದುರಿಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.

PM Modi
ಪ್ರಧಾನಿ ಮೋದಿ

By

Published : Mar 6, 2020, 11:02 PM IST

ನವದೆಹಲಿ: ನಮ್ಮ ನೀತಿಗಳು ಸ್ಪಷ್ಟವಾಗಿವೆ, ಆರ್ಥಿಕತೆಯ ಮೂಲಭೂತ ಅಂಶಗಳು ಪ್ರಬಲವಾಗಿವೆ. 2014ರಲ್ಲಿ ಜಾಗತಿಕ ಆರ್ಥಿಕತೆಯಲ್ಲಿ 11ನೇ ಸ್ಥಾನದಲ್ಲಿದ್ದ ಭಾರತ, ಇಂದು 5ನೇ ಸ್ಥಾನದಲ್ಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಹೊಸ ಪೌರತ್ವ ಕಾನೂನು ಜಾರಿ ಹಾಗೂ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಸರ್ಕಾರದ ನಿರ್ಧಾರವನ್ನು ಟೀಕಿಸಿದವರ ವಿರುದ್ಧ ಹರಿಹಾಯ್ದ ಮೋದಿ, 'ಸರಿಯಾದ ಕೆಲಸಗಳನ್ನು ಮಾಡಿಕೊಂಡು ಸರಿಯಾದ ಹಾದಿಯಲ್ಲಿ ನಡೆಯುವ ಜನರ ಬಗ್ಗೆ ದ್ವೇಷ ಮಾಡುವವರು ಇರುತ್ತಾರೆ' ಎಂದರು.

ಇಟಿ ಗ್ಲೋಬಲ್ ಬಿಸ್ನೆಸ್ ಶೃಂಗಸಭೆಯಲ್ಲಿ ಮಾತನಾಡಿದ ಅವರು, ವಿಶ್ವದಾದ್ಯಂತ ವಲಸಿಗರ ಹಕ್ಕುಗಳಿಗಾಗಿ ಪ್ರತಿಪಾದಿಸಿ 'ಬಲವಾಗಿ ಮಾತನಾಡುವ' ಗ್ಯಾಂಗ್, ನೆರೆಯ ರಾಷ್ಟ್ರಗಳಲ್ಲಿ ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರಿಗೆ ಭಾರತ ಪೌರತ್ವ ನೀಡುವುದನ್ನು ವಿರೋಧಿಸುತ್ತದೆ.

ಈ ಗ್ಯಾಂಗ್ ಸಂವಿಧಾನದ ಬಗ್ಗೆ ಮಾತನಾಡುತ್ತದೆ. ಆದರೆ, 370ನೇ ವಿಧಿ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸಂವಿಧಾನದ ಸಂಪೂರ್ಣ ಅನುಷ್ಠಾನವನ್ನು ವಿರೋಧಿಸುತ್ತದೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ನಡೆಯನ್ನು ಟೀಕಿಸಿದರು.

ಸರಿಯಾದ ವಿಷಯಗಳ ಬಗ್ಗೆ ಮಾತನಾಡುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಈ ಜನರಿಗೆ ಸರಿಯಾದ ಕೆಲಸಗಳನ್ನು ಮಾಡುವ ಜನರ ಬಗ್ಗೆ ನಿರ್ದಿಷ್ಟ ದ್ವೇಷವಿದೆ. ಆದ್ದರಿಂದ ಬದಲಾವಣೆಗಳನ್ನು ಯಥಾಸ್ಥಿತಿಯಲ್ಲಿ ತಂದಾಗ, ಅವರು ಇದನ್ನು ಅಡ್ಡಿಪಡಿಸಲು ನೋಡುತ್ತಾರೆ ಎಂದರು.

ಭಾರತೀಯ ಆರ್ಥಿಕತೆಯ ಮೂಲಭೂತ ಅಂಶಗಳು ಬಲಿಷ್ಠವಾಗಿವೆ. ನೀತಿಗಳು ಕೂಡ ಸ್ಪಷ್ಟವಾಗಿವೆ. ಭಾರತದಲ್ಲಿ 2019ರಲ್ಲಿ 48 ಬಿಲಿಯನ್ ಡಾಲರ್​ ಎಫ್‌ಡಿಐ ಹರಿದುಬಂದಿದ್ದು, ಇದು ಶೇ 16ರಷ್ಟು ಬೆಳವಣಿಗೆ ಇದು. ಶೇ 53ಕ್ಕೂ ಅಧಿಕ ಖಾಸಗಿ ಇಕ್ವಿಟಿ ಇದಿದ್ದರೇ ಸಾಹಸೋದ್ಯಮ ಬಂಡವಾಳ ಹೂಡಿಕೆ 19 ಬಿಲಿಯನ್ ಇದೆ. ಆದರೆ, ಜಾಗತಿಕ ಆರ್ಥಿಕತೆ ಕುಸಿತವನ್ನು ಎದುರಿಸುತ್ತಿದೆ ಎಂದು ಮೋದಿ ಹೇಳಿದರು.

ABOUT THE AUTHOR

...view details