ಕರ್ನಾಟಕ

karnataka

ಮೂರು ತಿಂಗಳ ಬಳಿಕ ಚೇತರಿಸಿಕೊಂಡ ಕೈಗಾರಿಕ ಉತ್ಪಾದನಾ ವಲಯ

By

Published : Jan 11, 2020, 3:52 AM IST

ನವೆಂಬರ್​ ತಿಂಗಳಲ್ಲಿ ಕೈಗಾರಿಕಾ ಉತ್ಪಾದನೆಯು ಶೇ 1.8ರಷ್ಟು ಬೆಳವಣಿಗೆ ದಾಖಲಿಸಿದೆ. ತಯಾರಿಕೆ ವಲಯದಲ್ಲಿನ ಹೆಚ್ಚಿನ ಚಟುವಟಿಕೆಗಳ ಫಲವಾಗಿ ಪ್ರಗತಿ ಕಂಡುಬಂದಿದೆ ಎಂದು ಹೇಳಲಾಗುತ್ತಿದೆ. ಈ ಹಣಕಾಸು ವರ್ಷದ ಏಪ್ರಿಲ್​- ನವೆಂಬರ್​ ಅವಧಿಯಲ್ಲಿ ಕೈಗಾರಿಕ ತಯಾರಿಕಾ ಸೂಚ್ಯಂಕದ (ಐಐಪಿ) ಬೆಳವಣಿಗೆಯು ಶೇ 0.6ರಷ್ಟಾಗಿದೆ. ವರ್ಷದ ಹಿಂದೆ ಇದು ಶೇ 5ರಷ್ಟು ಇತ್ತು. 2018ರ ನವೆಂಬರ್​ನಲ್ಲಿ ಶೇ 0.2ರಷ್ಟು ಹೆಚ್ಚಳವಾಗಿತ್ತು.

Factory Output
ಕೈಗಾರಿಕ ಉತ್ಪನಾ

ನವದೆಹಲಿ: ಸತತ ಮೂರು ತಿಂಗಳ ಕುಸಿತದ ಬಳಿಕ ಕೈಗಾರಿಕಾ ಉತ್ಪಾದನೆಯು ಮತ್ತೆ ಪ್ರಗತಿಯತ್ತ ಮರಳಿದೆ.

ನವೆಂಬರ್​ ತಿಂಗಳಲ್ಲಿ ಕೈಗಾರಿಕಾ ಉತ್ಪಾದನೆಯು ಶೇ 1.8ರಷ್ಟು ಬೆಳವಣಿಗೆ ದಾಖಲಿಸಿದೆ. ತಯಾರಿಕೆ ವಲಯದಲ್ಲಿನ ಹೆಚ್ಚಿನ ಚಟುವಟಿಕೆಗಳ ಫಲವಾಗಿ ಪ್ರಗತಿ ಕಂಡುಬಂದಿದೆ ಎಂದು ಹೇಳಲಾಗುತ್ತಿದೆ.

ತಯಾರಿಕ ವಲಯವು ಶೇ 2.7ರಷ್ಟು ಬೆಳವಣಿಗೆ ಕಂಡಿದೆ. ವರ್ಷದ ಹಿಂದೆ ಇದೇ ಅವಧಿಯಲ್ಲಿ ಶೇ 0.7ರಷ್ಟು ಕುಸಿದಿತ್ತು. ವಿದ್ಯುತ್ ಉತ್ಪಾದನೆಯು ವರ್ಷದ ಹಿಂದಿನ ಶೇ 5ರಷ್ಟು ಬೆಳವಣಿಗೆಗೆ ಹೋಲಿಸಿದರೆ ಈ ಬಾರಿ ಶೇ 5ರಷ್ಟು ಕುಸಿತ ಕಂಡಿದೆ. ಗಣಿಗಾರಿಕೆ ವಲಯವೂ ಶೇ 1.7ರಷ್ಟು ಕುಸಿದಿದೆ.

ಈ ಹಣಕಾಸು ವರ್ಷದ ಏಪ್ರಿಲ್​- ನವೆಂಬರ್​ ಅವಧಿಯಲ್ಲಿ ಕೈಗಾರಿಕ ತಯಾರಿಕಾ ಸೂಚ್ಯಂಕದ (ಐಐಪಿ) ಬೆಳವಣಿಗೆಯು ಶೇ 0.6ರಷ್ಟಾಗಿದೆ. ವರ್ಷದ ಹಿಂದೆ ಇದು ಶೇ 5ರಷ್ಟು ಇತ್ತು. 2018ರ ನವೆಂಬರ್​ನಲ್ಲಿ ಶೇ 0.2ರಷ್ಟು ಹೆಚ್ಚಳವಾಗಿತ್ತು.

ABOUT THE AUTHOR

...view details