ನವದೆಹಲಿ :2019-20ರ ಆರ್ಥಿಕ ವರ್ಷದ ವಾರ್ಷಿಕ ಜಿಎಸ್‌ಟಿ ರಿಟರ್ನ್ ಸಲ್ಲಿಸುವ ಗಡುವನ್ನು ಕೇಂದ್ರವು ಮಾರ್ಚ್ 31ರವರೆಗೆ ವಿಸ್ತರಿಸಿದೆ.
ಈ ಮೊದಲು ರಿಟರ್ನ್ಸ್ ಸಲ್ಲಿಸುವ ಗಡುವನ್ನು ಫೆಬ್ರವರಿ 28ಕ್ಕೆ ವಿಸ್ತರಿಸಲಾಗಿತ್ತು. ಗಡುವು ಪೂರೈಸುವಲ್ಲಿ ತೆರಿಗೆದಾರರು ವ್ಯಕ್ತಪಡಿಸುವ ತೊಂದರೆಗಳನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕಂದಾಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಬೂದಿಯಿಂದ ಮೇಲೆದ್ದು ಬಂದ ಗೂಳಿ: ಬೆಳಂಬೆಳಗ್ಗೆ 800 ಅಂಕ ಜಿಗಿದ ಸೆನ್ಸೆಕ್ಸ್!
ಈ ಸಮಯದ ಮಿತಿ ಪೂರೈಸುವಲ್ಲಿ ತೆರಿಗೆದಾರರು ವ್ಯಕ್ತಪಡಿಸಿದ ತೊಂದರೆಗಳನ್ನು ಗಮನದಲ್ಲಿರಿಸಿಕೊಂಡು, 2019-20ರ ಹಣಕಾಸು ವರ್ಷಕ್ಕೆ ಜಿಎಸ್ಟಿಆರ್ -9 ಮತ್ತು ಜಿಎಸ್ಟಿಆರ್ -9 ಸಿ ನಿಗದಿತ ದಿನಾಂಕವನ್ನು ಮುಂದೂಡಲು ಸರ್ಕಾರ ನಿರ್ಧರಿಸಿದೆ. ಭಾರತದ ಚುನಾವಣಾ ಆಯೋಗದ ಅನುಮೋದನೆ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ.