ಕರ್ನಾಟಕ

karnataka

ETV Bharat / business

ಬ್ಯಾಂಕ್​ಗಳಿಗೆ ₹ 7,000 ಕೋಟಿ ವಂಚನೆ: ಇತಿಹಾಸದಲ್ಲೇ ಪ್ರಥಮ ಬಾರಿಗೆ 169 ಸ್ಥಳಗಳಲ್ಲಿ ಸಿಬಿಐ ತಲಾಶ್​

7,000 ಕೋಟಿ ರೂ. ಬ್ಯಾಂಕ್​ ವಂಚನೆ ನಡೆದಿದೆ ಎಂದು 35 ದೂರುಗಳು ಸಿಬಿಐಗೆ ಬಂದಿವೆ ಎನ್ನಲಾಗ್ತಿದೆ. ಇದಕ್ಕೆ ಸಂಬಂಧಿಸಿದಂತೆ ಕರ್ನಾಟಕ, ಆಂಧ್ರಪ್ರದೇಶ, ದೆಹಲಿ, ಗುಜರಾತ್​, ಕೇರಳ ಸೇರಿದಂತೆ ದೇಶದ 169 ಸ್ಥಳಗಳಲ್ಲಿ ಅಧಿಕಾರಿಗಳು ಶೋಧ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ. ಆದ್ರೆ, ಯಾರ ವಿರುದ್ಧ, ಯಾವ ಬ್ಯಾಂಕ್​ಗಳಲ್ಲಿ ವಂಚನೆ ಆಗಿದೆ ಎಂಬುದರ ಬಗ್ಗೆ ಅಧಿಕಾರಿಗಳು ಗುಟ್ಟು ಬಿಟ್ಟುಕೊಟ್ಟಿಲ್ಲ.

ಸಿಬಿಐ

By

Published : Nov 5, 2019, 4:06 PM IST

ನವದೆಹಲಿ: ಸುಮಾರು 7,000 ಕೋಟಿ ರೂ. ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸೇರಿ ವಿವಿಧ ರಾಜ್ಯಗಳ 169 ಸ್ಥಳಗಳಲ್ಲಿ ಕೇಂದ್ರೀಯ ತನಿಖಾ ತಂಡದ (ಸಿಬಿಐ) ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಸಿಬಿಐನ ಹಿರಿಯ ಅಧಿಕಾರಿಗಳು ನೀಡಿದ ಮಾಹಿತಿಯನ್ವಯ, ಬ್ಯಾಂಕ್ ವಂಚನೆ ಪ್ರಕರಣ ಪತ್ತೆಹಚ್ಚಲು ಕಾರ್ಯಾಚರಣೆ ಚುರುಕುಗೊಂಡಿದೆ. ಈ ನಿಟ್ಟಿನಲ್ಲಿ ಕರ್ನಾಟಕ, ಆಂಧ್ರಪ್ರದೇಶ, ದೆಹಲಿ, ಗುಜರಾತ್​, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಪಂಜಾಬ್, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ, ಉತ್ತರಾಖಂಡ, ದಾದ್ರಾ ಮತ್ತು ನಗರ್ ಹವೇಲಿ ಒಳಗೊಂಡಂತೆ ಒಟ್ಟು 169 ಸ್ಥಳಗಳಲ್ಲಿ ಅಧಿಕಾರಿಗಳು ಶೋಧ ಕಾರ್ಯ ನಡೆಯುತ್ತಿದೆ.

7,000 ಕೋಟಿ ರೂ. ಬ್ಯಾಂಕ್​ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದಡಿ 35 ದೂರುಗಳು ದಾಖಲಾಗಿರುವ ಬಗ್ಗೆ ಸಿಬಿಐ ತಿಳಿಸಿದೆ. ಈ 35 ಪ್ರಕರಣಗಳು ಯಾರ ವಿರುದ್ಧ ದಾಖಲಾಗಿವೆ, ಯಾವು ಬ್ಯಾಂಕ್​ಗಳಲ್ಲಿ ವಂಚನೆ ನಡೆದಿದೆ ಎಂಬುದರ ಬಗ್ಗೆ ಅಧಿಕಾರಿಗಳು ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ. ದೇಶದ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಬ್ಯಾಂಕ್​ ವಂಚನೆಗೆ ಸಂಬಂಧಿಸಿದಂತೆ ಇಷ್ಟೊಂದು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ABOUT THE AUTHOR

...view details