ನವದೆಹಲಿ:ಕಳೆದ ವರ್ಷ ಆತ್ಮನಿರ್ಭರ ಪ್ಯಾಕೇಜ್‌ನಲ್ಲಿ ಉಲ್ಲೇಖಿಸಿದಂತೆ ಪಿಎಸ್‌ಯು ಮಾರಾಟದ ಕಾರ್ಯ ವ್ಯಾಪ್ತಿ ವಿವರಿಸುವ ಸಾರ್ವಜನಿಕ ವಲಯದ ಉದ್ಯಮಗಳ ಖಾಸಗೀಕರಣಕ್ಕೆ ಒಳಪಡಿಸುವ ಕಾರ್ಯತಂತ್ರದ ಕುರಿತು ನೀತಿಗಳು 2021-22ರ ಕೇಂದ್ರ ಬಜೆಟ್ನಲ್ಲಿ ಹೊರ ಬರಬಹುದು.
ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಹಾನಿಗೊಳಗಾದ ಆರ್ಥಿಕತೆಯನ್ನು ಮತ್ತೆ ಸರಿದಾರಿಗೆ ತರಲು ಸರ್ಕಾರ ಕಳೆದ ವರ್ಷ ಘೋಷಿಸಿದ್ದ ನಾಲ್ಕು ಭಾಗಗಳ ಆತ್ಮನಿರ್ಭರ ಭಾರತ ಪ್ಯಾಕೇಜ್‌ನ ಭಾಗವಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಸರ್ಕಾರಿ ಸ್ವಾಮ್ಯದ ಉದ್ಯಮಗಳ (ಪಿಎಸ್‌ಯು) ಖಾಸಗೀಕರಣದ ಕುರಿತು ಹೊಸ ನೀತಿ ಪ್ರಕಟಿಸುವುದಾಗಿ ಹೇಳಿದ್ದರು.
ಹಣಕಾಸು ಸಚಿವರು ಒತ್ತುನೀಡಿದ ಪ್ರಸ್ತಾವಿತ ನೀತಿಯಲ್ಲಿ ಸಾರ್ವಜನಿಕ ವಲಯದ ಜಾಗದಲ್ಲಿ ಕನಿಷ್ಠ ಒಂದು ಉದ್ಯಮವನ್ನಾದರೂ ಖಾಸಗಿ ವಲಯದ ಉಪಸ್ಥಿತಿ ಒಳಗೊಂಡಿರುತ್ತದೆ. ಅಲ್ಲದೇ ವ್ಯರ್ಥ ಆಡಳಿತಾತ್ಮಕ ವೆಚ್ಚ ಕಡಿಮೆ ಮಾಡಲು ಉದ್ಯಮಗಳ ಸಂಖ್ಯೆ ಒಂದರಿಂದ ನಾಲ್ಕು ಆಗಿರಲಿವೆ. ಇತರವುಗಳನ್ನು ಖಾಸಗೀಕರಣ/ ವಿಲೀನ / ಹಿಡುವಳಿ ಕಂಪನಿಗಳ ಅಡಿಯಲ್ಲಿ ತರಲಾಗುತ್ತದೆ ಎಂದು ಸೀತಾರಾಮನ್ ಹೇಳಿದ್ದರು.
ಅನುಕೂಲಕರವಾದ ಪರಿಸ್ಥಿತಿಗಳಿಗೆ ಅನುಗುಣವಾಗಿ ಕಾಲಾಂತರದಲ್ಲಿ ಎಲ್ಲ ಇತರ ಪಿಎಸ್‌ಇಗಳನ್ನು ಹೊರತುಪಡಿಸಿ ಖಾಸಗೀಕರಣಗೊಳಿಸಲಾಗುತ್ತದೆ. ಆತ್ಮನಿರ್ಭರ ಭಾರತ ಘೋಷಣೆಯ ಸಮಯದಲ್ಲಿ ಹೈಲೈಟ್ ಮಾಡಲಾಗಿದ್ದ ನೀತಿಗಳನ್ನು ಈಗ ಕೇಂದ್ರ ಸಚಿವ ಸಂಪುಟ ಅಂಗೀಕರಿಸಿದೆ. ಫೆಬ್ರವರಿ 1ರಂದು ಹಣಕಾಸು ಸಚಿವರು ಮಂಡಿಸಲಿರುವ ಬಜೆಟ್ ಪ್ರಕಟಣೆಗಳ ಒಂದು ಭಾಗವಾಗಿ ಖಾಸಗೀಕರಣ ನೀತಿ ರೂಪುಗೊಳ್ಳಬಹುದು ಎಂದು ಮೂಲಗಳು ತಿಳಿಸಿವೆ.
ವಿದ್ಯುತ್ ಮತ್ತು ರಸಗೊಬ್ಬರ, ಟೆಲಿಕಾಂ, ರಕ್ಷಣಾ, ಬ್ಯಾಂಕಿಂಗ್ ಮತ್ತು ವಿಮೆ ಸೇರಿದಂತೆ ಸುಮಾರು 18 ಕ್ಷೇತ್ರಗಳ ಸಾರ್ವಜನಿಕ ವಲಯದ ಉದ್ಯಮಗಳನ್ನು ಕಾರ್ಯತಂತ್ರ ಎಂದು ಸಲಹಾ ಹೂಡಿಕೆ ಮತ್ತು ಸಾರ್ವಜನಿಕ ಸ್ವತ್ತು ನಿರ್ವಹಣಾ ಇಲಾಖೆ (ಡಿಐಪಿಎಎಂ) ವರ್ಗೀಕರಿಸಿದೆ. ಡಿಐಪಿಎಎಂ ರೂಪಿಸಿರುವ ನೀತಿಯ ಕರಡಿನಿಂದಾಗಿ ಪಿಎಸ್‌ಯು ಖಾಸಗೀಕರಣ ನೀತಿ ಹೊರಹೊಮ್ಮಲಿದೆ.