ಹೈದರಾಬಾದ್ :ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅವರನ್ನು ಈವರೆಗಿನ ವಿಶ್ವದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರು. ಆದ್ರೀಗ ಆ ಸ್ಥಾನದಲ್ಲಿ ಫ್ರೆಂಚ್ ಉದ್ಯಮಿ ಬರ್ನಾರ್ಡ್ ಅರ್ನಾಲ್ಡ್ ಇದ್ದಾರೆ. ಬೆಜೋಸ್ ಅವರನ್ನು ಅರ್ನಾಲ್ಡ್ ಹಿಂದಿಕ್ಕಿದ್ದಾರೆ.
ಬಿಲಿಯನೇರ್‌ಗಳ ಪಟ್ಟಿಯಲ್ಲಿ 198.9 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ ಅರ್ನಾಲ್ಡ್ ಅಗ್ರಸ್ಥಾನ ಪಡೆದ್ದಾರೆ. ಇವರ ಸಂಪತ್ತು ಕಳೆದ ಗುರುವಾರವಷ್ಟೇ ಶೇ.0.39 ಏರಿಕೆಯಾಗಿದೆ. ಬೆಜೋಸ್ ಅವರು 194.9 ಬಿಲಿಯನ್ ಡಾಲರ್‌ಗಳೊಂದಿಗೆ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಎಲಾನ್ ಮಸ್ಕ್ (185.5 B.D.), ಬಿಲ್ ಗೇಟ್ಸ್ (132 B.D.) ಮತ್ತು ಮಾರ್ಕ್ ಜುಕರ್‌ಬರ್ಗ್ (130.6 B.D.) ನಂತರದ ಸ್ಥಾನದಲ್ಲಿದ್ದಾರೆ.
ಬರ್ನಾರ್ಡ್ ಅರ್ನಾಲ್ಡ್ ಪ್ರಸ್ತುತ ಎಲ್‌ವಿಎಂಹೆಚ್ ಎಂಬ ಕಂಪನಿಯ ಅಧ್ಯಕ್ಷರಾಗಿದ್ದಾರೆ. ಕಂಪನಿಯು ವಿಶ್ವದ ಅತ್ಯಂತ ದುಬಾರಿ ಬ್ರಾಂಡ್‌ಗಳನ್ನು ಹೊಂದಿದೆ. ಈ ವರ್ಷದ ಜನವರಿಯಲ್ಲಿ ಲೂಯಿ ವಿಟಾನ್ ಯುಎಸ್ ಆಭರಣ ಕಂಪನಿ ಟಿಫಾನಿ & ಕಂ ಅನ್ನು 15.8 ಬಿಲಿಯನ್ ಡಾಲರ್‌ಗೆ ಸ್ವಾಧೀನಪಡಿಸಿಕೊಂಡಾಗ ಅರ್ನಾಲ್ಡ್ ಷೇರುಗಳು ತೀವ್ರವಾಗಿ ಏರಿಕೆ ಕಂಡಿದ್ದವು.
72 ವರ್ಷದ ಅರ್ನಾಲ್ಡ್ ವ್ಯಾಪಾರದಲ್ಲಿ ಸಕ್ರಿಯರಾಗಿದ್ದಾರೆ. ವಿಭಿನ್ನ ಮಾರುಕಟ್ಟೆಗಳನ್ನು ಗಮನಿಸಿದ ಅವರು, ತಮ್ಮ ಅನುಭವದ ಮೂಲಕ ಯಶಸ್ಸಿ ಶಿಖರ ಏರಿದ್ದಾರೆ. ಒಂದು ಸಂದರ್ಭದಲ್ಲಿ ಅವರು ಈ ಹಾದಿಯಲ್ಲಿ ಕಲಿತ ಕೆಲವು ವ್ಯವಹಾರ ಪಾಠಗಳನ್ನು ಹಂಚಿಕೊಂಡಿದ್ದಾರೆ.
ದೀರ್ಘಾವಧಿಯ ತಂತ್ರ
ಅರ್ನಾಲ್ಡ್ ಮೊದಲ ಬಾರಿಗೆ 1991ರಲ್ಲಿ ಚೀನಾಕ್ಕೆ ಪ್ರಯಾಣ ಬೆಳೆಸಿದರು. ಆ ಹೊತ್ತಿಗೆ ಇವರು ಯಾವುದೇ ಪ್ರಗತಿ ಕಂಡಿರಲಿಲ್ಲ. ಆದರೂ ಐಷಾರಾಮಿ ವಸ್ತುಗಳಿಗೆ ಹೆಸರುವಾಸಿಯಾಗಿರುವ ಲೂಡಿ ವಿಟಾನ್ ಅಂಗಡಿಯನ್ನು ಬೀಜಿಂಗ್‌ನಲ್ಲಿ ತೆರೆದರು. ಲೂಯಿಸ್ ವಿಟಾನ್ ಪ್ರಸ್ತುತ ಚೀನಾದಲ್ಲಿ ಅತ್ಯಂತ ಐಷಾರಾಮಿ ಬ್ರಾಂಡ್ ಆಗಿದೆ. ನಾವು 25 ವರ್ಷಗಳಿಂದ ಅತ್ಯುನ್ನತ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸಲು ಕೆಲಸ ಮಾಡುತ್ತಿದ್ದೇವೆ ಎಂದು ಬರ್ನಾಡ್ ಹೇಳಿದ್ದಾರೆ.