ಸ್ಟಾಕ್ಹೋಮ್:ಜಾಗತಿಕ ಮಿಲಿಟರಿ ಸಂಬಂಧಿತ ಯುದ್ಧೋಪಕರಣಗಳ ಮಾರುಕಟ್ಟೆಯು 2018ರಲ್ಲಿ ಶೇ 5ರಷ್ಟು ಏರಿಕೆಯಾಗಿದೆ ಎಂದು ಸ್ಟಾಕ್ಹೋಮ್ ಅಂತಾರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆ (ಎಸ್ಐಪಿಆರ್ಐ) ತಿಳಿಸಿದೆ.
ಎಸ್ಐಪಿಆರ್ಐ, ಶಸ್ತ್ರಾಸ್ತ್ರ ಮಾರಾಟದ ತನ್ನ ವರದಿಯನ್ನು ಇಂದು ಬಿಡುಗಡೆ ಮಾಡಿದೆ. ವಿಶ್ವದ ಅತಿದೊಡ್ಡ 100 ಯುದ್ಧೋಪಕರಣ ತಯಾರಿಕಾ ಘಟಕಗಳನ್ನು ಈ ವರದಿಗೆ ಬಳಸಿಕೊಂಡಿದ್ದು, ಒಟ್ಟಾರಿ ಮಾರಾಟದ ಮೊತ್ತವು 420 ಬಿಲಿಯನ್ ಡಾಲರ್ನಷ್ಟಿದೆ (29.9 ಲಕ್ಷ ಕೋಟಿ ರೂ.) ಎಂದು ಹೇಳಿದೆ.
ವಿಶ್ವದಲ್ಲೇ ಅತ್ಯಧಿಕ ಯುದ್ಧೋಪಕರಣಗಳನ್ನು ಮಾರಾಟ ಮಾಡುವ ರಾಷ್ಟ್ರಗಳ ಪೈಕಿ ಅಮೆರಿಕ ಮೊದಲನೇ ಸ್ಥಾನದಲಿದೆ. ಜಾಗತಿಕವಾಗಿ ಶೇ 59ರಷ್ಟು 246 ಬಿಲಿಯನ್ ಡಾಲರ್ (17.53 ಲಕ್ಷ ಕೋಟಿ ರೂ.) ಪಾಲನ್ನು ಈ ಒಂದು ರಾಷ್ಟ್ರ ಹೊಂದಿದೆ ಎಂದು ಎಸ್ಐಪಿಆರ್ಐ ತಿಳಿಸಿದೆ.
ಅಮೆರಿಕ ಶಸ್ತ್ರಾಸ್ತ್ರ ಮಾರಾಟವನ್ನು ಒಂದು ವರ್ಷದಲ್ಲಿ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಟ್ರಂಪ್ ಆಡಳಿತದ ನಿರ್ಧಾರಗಳಿಂದ ಪ್ರತಿ ಸ್ಪರ್ಧಿ ರಾಷ್ಟ್ರಗಳಾದ ರಷ್ಯಾ ಮತ್ತು ಫ್ರಾನ್ಸ್ಗಿಂತಲೂ ಮುಂದಿದೆ ಎಂದು ಎಸ್ಐಪಿಆರ್ಐನ ಶಸ್ತ್ರಾಸ್ತ್ರ ವರ್ಗಾವಣೆ ಮತ್ತು ಮಿಲಿಟರಿ ಖರ್ಚು ಯೋಜನಾ ನಿರ್ದೇಶಕ ಆಡ್ ಫ್ಲೆರಂಟ್ ಹೇಳಿದ್ದಾರೆ.
ಯುದ್ಧೋಪಕರಣಗಳ ತಯಾರಿಕೆಯ ಮಾರಾಟದಲ್ಲಿ ರಷ್ಯಾ (ಶೇ 8.6ರಷ್ಟು) ಎರಡನೇ ಸ್ಥಾನದಲ್ಲಿದೆ. ಇಂಗ್ಲೆಂಡ್ ಶೇ 8.4 ಮತ್ತು ಫ್ರಾನ್ಸ್ ಶೇ 5.5ರ ಮುಖೇನ ನಂತರದ 3 ಮತ್ತು 4ನೇ ಸ್ಥಾನದಲ್ಲಿವೆ. ಸರಿಯಾದ ದತ್ತಾಂಶಗಳು ಸಿಗದ ಕಾರಣ ಚೀನಾವನ್ನು ವರದಿಯಲ್ಲಿ ಪರಿಗಣಿಸಲಾಗಿಲ್ಲ ಎಂದು ಎಸ್ಐಪಿಆರ್ಐ ತಿಳಿಸಿದೆ.