ಕರ್ನಾಟಕ

karnataka

ETV Bharat / business

ಬ್ಯಾಂಕ್​ಗಳಿಗೆ 1.85 ಲಕ್ಷ ಕೋಟಿ ರೂ. ವಂಚಿಸಿದ ದುರುಳರು: ಇದ್ರಲ್ಲಿ ಸಿಬ್ಬಂದಿಯೂ ಭಾಗಿ! - ಭಾರತೀಯ ರಿಸರ್ವ್ ಬ್ಯಾಂಕ್

ವಂಚನೆ ಪ್ರಕರಣಗಳಲ್ಲಿ ಎಷ್ಟು ಬ್ಯಾಂಕ್ ನೌಕರರು ಭಾಗಿಯಾಗಿದ್ದಾರೆ ಮತ್ತು ಎಷ್ಟು ಮೊತ್ತದಲ್ಲಿ ಭಾಗಿಯಾಗಿದ್ದಾರೆ ಎಂಬ ಪ್ರಶ್ನೆಗೆ, ಆರ್‌ಬಿಐ ಉತ್ತರ ಲಭ್ಯವಿಲ್ಲ ಎಂದು ಪ್ರತಿಕ್ರಿಯಿಸಿದೆ. ಆದರೂ 2019-20ನೇ ಹಣಕಾಸು ವರ್ಷದಲ್ಲಿ ಷೆಡ್ಯೂಲ್ಡ್​ ಕಮರ್ಷಿಯಲ್​ ಬ್ಯಾಂಕ್​ಗಳು ಮತ್ತು ಆಯ್ದ ಎಫ್‌ಐಐಗಳು ವರದಿ ಮಾಡಿದಂತೆ, ಸಿಬ್ಬಂದಿ ಮಾಡಿದ ಒಟ್ಟು ವಂಚನೆ ಸಂಖ್ಯೆ 2,668 ಮತ್ತು ಇದರ ಮೊತ್ತ 1,783.22 ಕೋಟಿ ರೂ. ಎಂದು ಕೇಂದ್ರ ಬ್ಯಾಂಕ್ ತಿಳಿಸಿದೆ.

Bank Fraud
ಬ್ಯಾಂಕ್ ವಂಚನೆ

By

Published : Jul 27, 2020, 8:20 PM IST

ನಾಗ್ಪುರ್​(ಮಹಾರಾಷ್ಟ್ರ):2019-20ರ ಅವಧಿಯಲ್ಲಿ ನಿಗದಿತ ವಾಣಿಜ್ಯ ಬ್ಯಾಂಕ್​ಗಳು ಮತ್ತು ಆಯ್ದ ಎಫ್‌ಐಐಗಳಿಂದ ಸುಮಾರು 84,545 ವಂಚನೆ ಪ್ರಕರಣಗಳು ವರದಿಯಾಗಿವೆ ಎಂದು ಆರ್‌ಟಿಐ ಕಾರ್ಯಕರ್ತರೊಬ್ಬರು ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ಪಡೆದ ಮಾಹಿತಿಯನ್ನಾಧರಿಸಿ ತಿಳಿಸಿದ್ದಾರೆ.

ಆರ್‌ಟಿಐ (ಮಾಹಿತಿ ಹಕ್ಕು) ಕಾರ್ಯಕರ್ತ ಅಭಯ್ ಕೋಲಾರ್ಕರ್ ಅವರು 2020ರ ಜೂನ್‌ನಲ್ಲಿ ಆರ್‌ಬಿಐ ವ್ಯಾಪ್ತಿಯಲ್ಲಿ ವಿವಿಧ ಬ್ಯಾಂಕಿಂಗ್ ಸಂಬಂಧಿತ ಪ್ರಶ್ನೆಗಳನ್ನು ಕೋರಿದ್ದರು. ಕೋಲಾರ್ಕರ್ ತಮ್ಮ ಆರ್‌ಟಿಐ ಪ್ರಶ್ನೆಯಲ್ಲಿ 2019ರ ಏಪ್ರಿಲ್ 1 ರಿಂದ 2020ರ ಮಾರ್ಚ್ 31ರವರೆಗೆ ಎಷ್ಟು ವಂಚನೆ ಪ್ರಕರಣಗಳು ನಡೆದಿವೆ ಮತ್ತು ಅದರಲ್ಲಿ ಎಷ್ಟು ಮೊತ್ತವಿದೆ ಎಂದು ಪ್ರಶ್ನಿಸಿದ್ದರು.

2019-20ರ ಹಣಕಾಸು ವರ್ಷದಲ್ಲಿ ಷೆಡ್ಯೂಲ್ಡ್​ ಕಮರ್ಷಿಯಲ್​ ಬ್ಯಾಂಕ್​ಗಳು ಮತ್ತು ಆಯ್ದ ಎಫ್‌ಐಐಗಳು ವರದಿಯಲ್ಲಿ 84,545 ವಂಚನೆ ಪ್ರಕರಣಗಳಿಂದ 1,85,772.42 ಕೋಟಿ ರೂ.ಯಷ್ಟಾಗಿದೆ ಎಂದು ಆರ್‌ಬಿಐ ಹೇಳಿದೆ.

ವಂಚನೆ ಪ್ರಕರಣಗಳಲ್ಲಿ ಎಷ್ಟು ಬ್ಯಾಂಕ್ ನೌಕರರು ಭಾಗಿಯಾಗಿದ್ದಾರೆ ಮತ್ತು ಎಷ್ಟು ಮೊತ್ತದಲ್ಲಿ ಭಾಗಿಯಾಗಿದ್ದಾರೆ ಎಂಬ ಪ್ರಶ್ನೆಗೆ, ಆರ್‌ಬಿಐ ಉತ್ತರ ಲಭ್ಯವಿಲ್ಲ ಎಂದು ಪ್ರತಿಕ್ರಿಯಿಸಿದೆ. ಆದರೂ 2019-20ನೇ ಹಣಕಾಸು ವರ್ಷದಲ್ಲಿ ಷೆಡ್ಯೂಲ್ಡ್​ ಕಮರ್ಷಿಯಲ್​ ಬ್ಯಾಂಕ್​ಗಳು ಮತ್ತು ಆಯ್ದ ಎಫ್‌ಐಐಗಳು ವರದಿ ಮಾಡಿದಂತೆ, ಸಿಬ್ಬಂದಿ ಮಾಡಿದ ಒಟ್ಟು ವಂಚನೆ ಸಂಖ್ಯೆ 2,668 ಮತ್ತು ಇದರ ಮೊತ್ತ 1,783.22 ಕೋಟಿ ರೂ. ಎಂದು ಕೇಂದ್ರ ಬ್ಯಾಂಕ್ ತಿಳಿಸಿದೆ.

ಆರ್‌ಬಿಐನ 15 ಒಂಬುಡ್ಸ್​ಮನ್ ಕಚೇರಿಗಳಿಂದ 2019ರ ಜುಲೈ 1ರಿಂದ 2020ರ ಮಾರ್ಚ್ ತನಕ ಸುಮಾರು 2,14,480 ದೂರುಗಳು ಬಂದಿವೆ. ಎಸ್‌ಬಿಐ- 63,259, ಎಚ್‌ಡಿಎಫ್‌ಸಿ ಬ್ಯಾಂಕ್- 18,764, ಐಸಿಐಸಿಐ ಬ್ಯಾಂಕ್- 14,582, ಪಂಜಾಬ್ ನ್ಯಾಷನಲ್ ಬ್ಯಾಂಕ್- 12,469, ಆಕ್ಸಿಸ್ ಬ್ಯಾಂಕ್ -12,214 ಮತ್ತು ಇತರ ಬ್ಯಾಂಕ್​ಗಳು ಅತಿ ಹೆಚ್ಚು ದೂರು ಸ್ವೀಕರಿಸಿದವು.

ಆರ್‌ಟಿಐ ಪ್ರಶ್ನೆಯು 2019ರ ಏಪ್ರಿಲ್ 1ರಿಂದ 2020 ರ ಮಾರ್ಚ್ 31ರವರೆಗೆ ಬ್ಯಾಂಕ್​ಗಳು ನಿರ್ಗಮಿಸಿದ ಶಾಖೆಗಳ ಸಂಖ್ಯೆ ಮತ್ತು ವಿಲೀನದ ನಂತರ ಮುಚ್ಚಿದ ಶಾಖೆಗಳ ಬಗ್ಗೆಯೂ ಮಾಹಿತಿ ಕೋರಿದ್ದರು. 2019-2020ರ ಅವಧಿಯಲ್ಲಿ 'ಅದೇ ಬ್ಯಾಂಕಿನ ಮತ್ತೊಂದು ಶಾಖೆಯೊಂದಿಗೆ ವಿಲೀನಗೊಂಡ ಶಾಖೆಗಳ ಸಂಖ್ಯೆ' ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಎಸ್‌ಬಿಐ - 130, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ- 62, ಅಲಹಾಬಾದ್ ಬ್ಯಾಂಕ್ - 59 ಮತ್ತು ಇತರ 438 ಶಾಖೆಗಳಿವೆ.

2019-20ರಲ್ಲಿ ಮುಚ್ಚಲಾದ ಒಟ್ಟು ಶಾಖೆಗಳ ಸಂಖ್ಯೆ 194, ಇದರಲ್ಲಿ ಎಸ್‌ಬಿಐನ 78 ಶಾಖೆಗಳು ಮತ್ತು 25 ಫಿನೋ ಪೇಮೆಂಟ್ಸ್​ ಬ್ಯಾಂಕ್ ಸಹ ಸೇರಿವೆ.

ABOUT THE AUTHOR

...view details