ಹೈದರಾಬಾದ್: ತೆಲಂಗಾಣ ರಾಜ್ಯ ಟ್ಯಾಕ್ಸಿ ಮತ್ತು ಡ್ರೈವರ್ಗಳು ಸಂಘಟನೆ (ಟಿಎಸ್ಆರ್ಟಿಎಸ್) ಕರೆ ನೀಡಿದ ರಾಜ್ಯ ವ್ಯಾಪ್ತಿ ಪ್ರತಿಭಟನೆಗೆ ಉಬರ್, ಓಲಾ ಚಾಲಕರು ಬೆಂಬಲ ನೀಡಿದ್ದು, ಅಕ್ಟೋಬರ್ 19ರಂದು ಸುಮಾರು 50 ಸಾವಿರ ಉಬರ್, ಓಲಾ ವಾಹನಗಳು ರಸ್ತೆಗೆ ಇಳಿಯುತ್ತಿಲ್ಲ.
ಉಬರ್, ಓಲಾ ಪ್ರಯಾಣಿಕರಿಗೆ ಶಾಕ್... ಈ ದಿನ 50,000 ಪ್ರಯಾಣಿಕ ವಾಹನಗಳು ಬಂದ್ - Ola
ರಾಜ್ಯ ಸಾರಿಗೆ ಸಿಬ್ಬಂದಿ ಪ್ರತಿಭಟನೆಯಿಂದ ಪರದಾಡುತ್ತಿರುವ ತೆಲಂಗಾಣ ರಾಜ್ಯದ ಜನತೆಗೆ ಮತ್ತೊಂದು ತಲೆನೋವು ಶುರುವಾಗಲಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಪಟ್ಟು ಹಿಡಿದಿರುವ ಓಲಾ, ಉಬರ್ಗಳು ಸಂಪೂರ್ಣ ಬಂದ್ ಆಚರಿಸಲಿವೆ. ಈಗಾಗಲೇ ವಿವಿಧ ಕಂಪನಿಗಳು ತಮ್ಮ ನೌಕರರಿಗೆ ಈ ಬಗ್ಗೆ ಸೂಚನೆ ರವಾನಿಸಿದ್ದು, ಕಚೇರಿಗೆ ಬರಲು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ಹೇಳಿವೆ.
ಈಗಾಗಲೇ ರಾಜ್ಯ ಸಾರಿಗೆ ಸಿಬ್ಬಂದಿ ಪ್ರತಿಭಟನೆಯಿಂದ ಪರದಾಡುತ್ತಿರುವ ತೆಲಂಗಾಣ ರಾಜ್ಯದ ಜನತೆಗೆ ಮತ್ತೊಂದು ತಲೆನೋವು ಶುರುವಾಗಲಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಪಟ್ಟು ಹಿಡಿದಿರುವ ಓಲಾ, ಊಬರ್ಗಳು ಸಂಪೂರ್ಣ ಬಂದ್ ಆಚರಿಸಲಿವೆ. ಈಗಾಗಲೇ ವಿವಿಧ ಕಂಪನಿಗಳು ತಮ್ಮ ನೌಕರರಿಗೆ ಈ ಬಗ್ಗೆ ಸೂಚನೆ ರವಾನಿಸಿದ್ದು, ಕಚೇರಿಗೆ ಬರಲು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ಹೇಳಿವೆ.
ಟ್ಯಾಕ್ಸಿ ಸಂಚಾರದಲ್ಲಿ ಪ್ರತಿ ಕಿ.ಮೀ.ಗೆ ಕನಿಷ್ಠ ₹ 22 ನಿಗದಿ, ಕರ್ತವ್ಯದಿಂದ ವಜಾಗೊಳಿಸಿದ ನೌಕರರ ನೇಮಕ, ಚಾಲಕರಿಗೆ ಕನಿಷ್ಠ ಉದ್ಯೋಗ ಖಾತರಿ, ಓಲಾ- ಉಬರ್ ಚಾಲಕರ ಕಲ್ಯಾಣ ನಿಧಿ ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗಳನ್ನು ರಾಜ್ಯ ಸರ್ಕಾರದ ಮುಂದಿರಿಸಿದ್ದಾರೆ. ಚಾಲಕರ ಮುಷ್ಕರಕ್ಕೆ ಸ್ಥಳೀಯ ಸಂಘ- ಸಂಸ್ಥೆಗಳು, ಇತರ ಕಾರ್ಮಿಕ ಸಂಘಟನೆಗಳು ಬೆಂಬಲ ಸೂಚಿಸಿವೆ. ಕಾಂಗ್ರೆಸ್, ಟಿಜೆಸ್, ಸಿಪಿಐ, ಸಿಪಿಎಂ ಸೇರಿದಂತೆ ಇತರ ಪ್ರತಿಭಟನೆಗೆ ಕೈಜೋಡಿಸಿವೆ.