ಮುಂಬೈ: ಛತ್ರಪತಿ ಶಿವಾಜಿ ಮಹಾರಾಜ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ (ಸಿಎಸ್ಎಂಐಎ) ವಿಮಾನಗಳ ಹಾರಾಟ ಸೇವೆಯಲ್ಲಿ 2ನೇ ದಿನವೂ ಅಡಚಣೆ ಮುಂದುವರಿದಿದ್ದು, 30 ವಿಮಾನಗಳ ಹಾರಾಟ ಸ್ಥಗಿತ ಹಾಗೂ 118 ವಿಮಾನಗಳ ಸಮಯದಲ್ಲಿ ವಿಳಂಬವಾಗಲಿದೆ ಎಂದು ತಿಳಿಸಿದೆ.
30 ವಿಮಾನಗಳ ಹಾರಾಟ ಸ್ಥಗಿತ, 118 ಫ್ಲೈಟ್ಗಳ ಸೇವೆಯಲ್ಲಿ ವಿಳಂಬ
ಲೈವ್ ಫ್ಲೈಟ್ ಟ್ರಾಕಿಂಗ್ ವೆಬ್ಸೈಟ್ ಪ್ರಕಾರ, ಗುರುವಾರ 14 ಒಳಬರುವ ಹಾಗೂ 16 ಹೊರಹೋಗುವ ವಿಮಾನಗಳ ಹಾರಾಟ ಸ್ಥಗಿತವಾಗಲಿವೆ. ಹೆಚ್ಚುವರಿಯಾಗಿ 118 ಫ್ಲೈಟ್ಗಳು ವಿಳಂಬವಾಗಲಿದ್ದು, ಇದರಲ್ಲಿ 86 ಹೊರ ಹೋಗುವ ವಿಮಾನಗಳಿವೆ ಎಂದು ಪ್ರಕಟಿಸಿದೆ.
ಲೈವ್ ಫ್ಲೈಟ್ ಟ್ರಾಕಿಂಗ್ ವೆಬ್ಸೈಟ್ ಪ್ರಕಾರ, ಗುರುವಾರ 14 ಒಳಬರುವ ಹಾಗೂ 16 ಹೊರಹೋಗುವ ವಿಮಾನಗಳ ಹಾರಾಟ ಸ್ಥಗಿತವಾಗಲಿವೆ. ಹೆಚ್ಚುವರಿಯಾಗಿ 118 ವಿಮಾನಗಳು ವಿಳಂಬವಾಗಲಿದ್ದು, ಇದರಲ್ಲಿ 86 ಹೊರಹೋಗುವ ವಿಮಾನಗಳಿವೆ ಎಂದು ಪ್ರಕಟಿಸಿದೆ.
ಸಂಕ್ಷಿಪ್ತ ಪ್ರಕಟಣೆಯಲ್ಲಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್, (ಎಂಐಎಲ್) ನಿಲ್ದಾಣದ ನಿರ್ವಹಣೆಯು ಸಾಮಾನ್ಯವಾಗಿದೆ. ವಿಮಾನಗಳ ಹಾರಾಟ ಸೇವೆಯಲ್ಲಿ ವ್ಯತ್ಯಯವಾಗಿದೆ. ಹೆಚ್ಚಿನ ಮಾಹಿತಿಗೆ ಏರ್ಲೈನ್ಸ್ ಸಂಪರ್ಕಿಸುವಂತೆ ಇಂಡಿಗೋ ಪ್ರಕಟಿಸಿದೆ ಎಂದಿದೆ. ಇಂಡಿಗೋ ತನ್ನ ಸೇವಾ ನಿರ್ವಹಣೆಯನ್ನು ನೌಕರರ ಅಭಾವದಿಂದ ಕಡಿತಗೊಳಿಸಿದೆ ಎಂದು ಮೂಲಗಳು ಹೇಳಿವೆ.