ನವದೆಹಲಿ: ಚೀನಾದ ಸ್ಮಾರ್ಟ್ಪೋನ್ ತಯಾರಿಕ ಶಿಯೋಮಿ ತನ್ನ ಬಹುನಿರೀಕ್ಷಿತ ಎಂಐ 10 ಸಿರೀಸ್ನ ಫೆಬ್ರವರಿ 23ರಂದು ಲೋಕಾರ್ಪಣೆಯನ್ನು ಕೊರೊನಾ ವೈರಸ್ ಹರಡುವಿಕೆಯಿಂದ ಮುಂದೂಡಿತ್ತು. ಬದಲಾದ ವೇಳೆಯಲ್ಲಿ ಲಾಂಚ್ ಆಗಲಿರುವ ದಿನಾಂಕವನ್ನು ಘೋಷಿಸಿದೆ.
ಶಿಯೋಮಿ ಎಂಐ 10 ಸಿರೀಸ್ ಮಾರ್ಚ್ 27ರಂದು ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಬಿಡುಗಡೆಯನ್ನು ಅಧಿಕೃತ ಫೇಸ್ಬುಕ್, ಟ್ವಿಟರ್ ಹಾಗೂ ಯುಟ್ಯೂಬ್ನಲ್ಲಿ ನೇರ ಪ್ರಸಾರ ಮಾಡಲಾಗುವುದು ಎಂದು ಗಿಝ್ಮೊ ಚೀನಾ ನ್ಯೂಸ್ ಪೋರ್ಟಲ್ ವರದಿ ಮಾಡಿದೆ.
ಕಂಪನಿಯು ಈಗಾಗಲೇ ಚೀನಾ ಮಾರುಕಟ್ಟೆಗೆ ಎಂಐ 10 ಶ್ರೇಣಿಯ ಮೊಬೈಲ್‌ನ ತಿಂಗಳ ಹಿಂದೆ ಪರಿಚಯಿಸಿದೆ. ಮಾರ್ಚ್ 27ರಂದು ಜಾಗತಿಕ ಮಾರುಕಟ್ಟೆಗೆ ಕೊಡೊಯ್ಯಲಿದೆ. ಟ್ವಿಟರ್ನಲ್ಲಿ ಶಿಯೋಮಿ ಮೊಬೈಲ್ ಫೀಚರ್ ಬಗ್ಗೆ ಟ್ವೀಟ್ ಮಾಡಿದ್ದು, 2000- ಏನೆಂದರೇ? ಕ್ಯಾಮೆರಾ ಇಲ್ಲ? ನನ್ನ ನೆನಪುಗಳನ್ನು ಹೇಗೆ ಸಂಗ್ರಹಿಸಲಿ?
2005- ಏನೆಂದರೇ? 1.5 ಎಂಪಿ? ನನ್ನ ಮೆಮೊರಿ ಬ್ಲರ್ ಆಗಿ ಕಾಣಿಸುತ್ತಿದೆ
2010- ಏನೆಂದರೇ? 5ಎಂಪಿ? ಮೊಬೈಲ್ನಲ್ಲಿ ಸ್ಟೋರ್ ಮಾಡಲು ನನ್ನ ಮೆಮೊರಿ ತುಂಬ ದೊಡ್ಡದಿದೆ
2015 ಏನೆಂದರೇ? 8ಎಂಪಿ? ನನ್ನ ಮೆಮೊರಿ ಇನ್ನೂ 2010ರಲ್ಲಿ ಇದೆ
2020- ಏನೆಂದರೇ? 108 ಎಂಪಿ? ಅಂತಿಮವಾಗಿ, ನನ್ನ ಮೆಮೊರಿ ಶಾಸ್ವತವಾಗಿ ಇರಲಿದೆ ಎಂಐ10
ಮುಂಬರುವ ಎಂಐ 10 ಸರಣಿಯಲ್ಲಿ ಸ್ಟ್ಯಾಂಡರ್ಡ್ ಎಂಐ 10ನಲ್ಲಿ 5G ಮತ್ತು ಸ್ನಾಪ್‌ಡ್ರಾಗನ್ 865 ಪ್ರೊಸೆಸರ್ ಚಾಲಿತ ಪ್ರೋ 5G ಒಳಗೊಂಡಿದೆ. ಇವೆರಡೂ 90ಎಚ್ಜಿ ರಿಫ್ರೆಶ್ ಜತೆಗೆ 6.67 ಇಂಚಿನ ಆ್ಯಮ್ಲೋಡ್ ಎಫ್ಎಚ್ಡಿ+ಪಂಚ್-ಹೋಲ್ ಡಿಸ್ಪ್ಲೇ ಹೊಂದಿದೆ. ಎರಡೂ ಸಾಧನಗಳಲ್ಲಿನ ಸೆಲ್ಫಿ ಕ್ಯಾಮೆರಾ 20ಎಂಪಿ ಇರಲಿದೆ.
ಎಂಐ 10ನಲ್ಲಿ 108 ಎಂಪಿ ಪ್ರೈಮರಿ ಹಿಂಬದಿಯ ಕ್ಯಾಮೆರಾ, 13ಎಂಪಿ ಅಲ್ಟ್ರಾವೈಡ್ ಕ್ಯಾಮೆರಾ, 2ಎಂಪಿ ಮ್ಯಾಕ್ರೋ ಕ್ಯಾಮೆರಾ ಮತ್ತು 2 ಎಂಪಿ ಡೆಪ್ತ್ ಸೆನ್ಸಾರ್ ಇರಲಿದೆ. ಪ್ರೋ ಆವೃತ್ತಿಯು 108ಎಂಪಿ ಪ್ರೈಮರಿ ಕ್ಯಾಮೆರಾ ಜೊತೆಗೆ 20ಎಂಪಿ ಅಲ್ಟ್ರಾವೈಡ್ ಕ್ಯಾಮೆರಾ, 8ಎಂಪಿ ಟೆಲಿಫೋಟೋ ಕ್ಯಾಮೆರಾ ಮತ್ತು 12ಎಂಪಿ ಪೋರ್ಟ್ರೇಟ್ ಕ್ಯಾಮೆರಾ ಸಹ ಹೊಂದಿದೆ.
ಶಿಯೋಮಿ ಟ್ವಿಟರ್ನಲ್ಲಿ ಎಂಐ 10 ಪ್ರೋ ಚಿತ್ರೀಕರಿಸಿದ ವಿಡಿಯೋಗಳನ್ನು ಬಿಡುಗಡೆ ಮಾಡಿದೆ. ಎಂಐ10 ಪ್ರೋ 45ಡಬ್ಲ್ಯೂ ಎಂಎಎಚ್ ಬ್ಯಾಟರಿಯನ್ನು 50ಡಬ್ಲ್ಯೂ ವೈರ್ಡ್ ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲಾಗಿ ಇರಲಿದೆ. ಪ್ರೋ ಮೊಬೈಲ್ 4780 ಎಂಎಎಚ್ ಸಾಮರ್ಥ್ಯದ ದೊಡ್ಡ ಬ್ಯಾಟರಿ ಹೊಂದಿದೆ.