ನವದೆಹಲಿ:ಚೀನಾ ವಿರೋಧಿ ಮನೋಭಾವ ಸಾಮಾಜಿಕ ಮಾಧ್ಯಮಕ್ಕೆ ಸೀಮಿತವಾಗಿದೆ ಎಂಬ ಪ್ರತಿಪಾದನೆಯ ನಡುವೆ ಚೀನೀ ಮೂಲದ ಶಿಯೋಮಿ ತನ್ನ ಸ್ಟೋರ್ ಬ್ರಾಂಡಿಂಗ್ ಅನ್ನು ಮರೆಮಾಚಲು ಮುಂದಾಗಿದೆ ಎಂಬುದು ತಿಳಿಬಂದಿದೆ.
ಭಾರತ-ಚೀನಾ ಮಧ್ಯೆ ನಡೆಯುತ್ತಿರುವ ಗಡಿ ಸಂಬಂಧಿತ ಉದ್ವಿಗ್ನತೆಯಿಂದ ಶಿಯೋಮಿ ತನ್ನ ಮಾರುಕಟ್ಟೆಗೆ ಧಕ್ಕೆ ಆಗಬಹುದು ಎಂಬ ಭೀತಿಯಲ್ಲಿದೆ. ಹೀಗಾಗಿ, ತನ್ನ ಸ್ಟೋರ್ ಬ್ರಾಂಡಿಂಗ್ ಅನ್ನು ಮೇಡ್ ಇನ್ ಇಂಡಿಯಾ ಮೂಲಕ ಕವರ್ ಮಾಡಿ ಬಿಳಿ ಲೋಗೋದಡಿ ಆರಂಭಿಸಿದೆ ಎಂದು ಅಖಿಲ ಭಾರತ ಮೊಬೈಲ್ ಚಿಲ್ಲರೆ ವ್ಯಾಪಾರಿಗಳ ಸಂಘ (ಎಐಎಂಆರ್‌ಎ) ತಿಳಿಸಿದೆ.
ನೈಜ ವಾಸ್ತವಂಶವನ್ನು ತಮ್ಮ ಗಮನಕ್ಕೆ ತರುವಂತೆ ಸಂಘಟನೆಯು ಎಲ್ಲಾ ಚೀನೀ ಮೊಬೈಲ್ ಬ್ರಾಂಡ್‌ಗಳಿಗೆ ಪತ್ರ ಕಳುಹಿಸಿದ ಬಳಿಕ ಶಿಯೋಮಿ ಈ ಕ್ರಮ ಕೈಗೊಂಡಿದೆ.