ನವದೆಹಲಿ: ಯುರೋಪ್ ಮತ್ತು ಮಧ್ಯಪ್ರಾಚ್ಯದ ಅತಿದೊಡ್ಡ ಸೇಲ್ಸ್ ಫೋರ್ಸ್ ಪಾಲುದಾರರಲ್ಲಿ ಒಂದಾದ '4ಸಿ'ಯನ್ನು 68 ಮಿಲಿಯನ್ ಯುರೋಗಳಿಗೆ (ಸುಮಾರು 589 ಕೋಟಿ ರೂ.) ಸ್ವಾಧೀನಪಡಿಸಿಕೊಳ್ಳುವುದಾಗಿ ಐಟಿ ದಿಗ್ಗಜ ವಿಪ್ರೋ ತಿಳಿಸಿದೆ.
1997ರಲ್ಲಿ ಮೆಚೆಲೆನ್ನಲ್ಲಿ (ಬೆಲ್ಜಿಯಂ) ಪ್ರಧಾನ ಕಚೇರಿ ಸ್ಥಾಪಿಸಿದ 4ಸಿ, 500ಕ್ಕೂ ಅಧಿಕ ಗ್ರಾಹಕರನ್ನು ಹೊಂದಿದ್ದು, 1,500ಕ್ಕೂ ಹೆಚ್ಚು ಪ್ರಾಜೆಕ್ಟ್ಗಳನ್ನು ಪೂರ್ಣಗೊಳಿಸಿದೆ. ಲಂಡನ್, ಪ್ಯಾರಿಸ್, ಬ್ರಸೆಲ್ಸ್, ಕೋಪನ್ ಹ್ಯಾಗನ್ ಮತ್ತು ದುಬೈನಲ್ಲಿನ ಸ್ಥಳೀಯ ಕಚೇರಿಗಳಿಂದ 350ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಇಂಗ್ಲೆಂಡ್, ಫ್ರಾನ್ಸ್, ಬೆನೆಲಕ್ಸ್, ನಾರ್ಡಿಕ್ಸ್ ಮತ್ತು ಯುಎಇನಲ್ಲಿ ಸೇಲ್ಸ್ ಫೋರ್ಸ್ ಹೊಂದಿದೆ.