ಹೈದರಾಬಾದ್:ದೀರ್ಘಾವಧಿ ಹೂಡಿಕೆ ಮಾಡಲು ಅನೇಕರು ಯುನಿಟ್ ಆಧಾರಿತ ಅಂದರೆ ಷೇರು ಮಾರುಕಟ್ಟೆ ಆಧಾರಿತ ವಿಮಾ ಪಾಲಿಸಿಗಳನ್ನು (ಯುಲಿಪ್ಸ್) ಆಯ್ಕೆ ಮಾಡುತ್ತಾರೆ. ತೆರಿಗೆ ಉಳಿತಾಯಕ್ಕಾಗಿ ಬ್ಯಾಂಕ್ ಸ್ಥಿರ ಠೇವಣಿಗಳು ಮತ್ತು ಇಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್ (ELSS) ನಂತಹ ಯೋಜನೆಗಳು ಇದ್ದರೂ, ಅವರು ULIP ಗಳಿಗೆ ಆದ್ಯತೆ ನೀಡುತ್ತಾರೆ.
ಯಾಕೆಂದರೆ ಇದರಲ್ಲಿ ಹೆಚ್ಚಿನ ಬಡ್ಡಿ ಹಾಗೂ ಲಾಭ ಬರುವುದರಿಂದ ಈ ಯೋಜನಗಳತ್ತ ಜನ ಆರ್ಕಷಿತರಾಗುತ್ತಿದ್ದಾರೆ. ಇವುಗಳು ಅನೇಕ ಪ್ರಯೋಜನಗಳನ್ನು ಕೂಡಾ ಒದಗಿಸುತ್ತವೆ.
ಯುಲಿಪ್ ಪಾಲಿಸಿ: ಯುನಿಟ್- ಆಧಾರಿತ ವಿಮಾ ಪಾಲಿಸಿಗಳು (ಯುಲಿಪ್ಸ್) ವಿಮಾ ರಕ್ಷಣೆ, ಷೇರು ಮಾರುಕಟ್ಟೆ ಮತ್ತು ತೆರಿಗೆ ಉಳಿತಾಯವನ್ನೂ ಈ ವಿಮೆಗಳಿಂದ ಮಾಡಬಹುದಾಗಿದೆ. ತೆರಿಗೆ ಉಳಿತಾಯಕ್ಕಾಗಿ ಬ್ಯಾಂಕ್ ಸ್ಥಿರ ಠೇವಣಿಗಳು ಮತ್ತು ELSS ನಂತಹ ಯೋಜನೆಗಳಿದ್ದರೂ, ದೀರ್ಘಾವಧಿಯಲ್ಲಿ ಹೂಡಿಕೆಯ ಬೆಳವಣಿಗೆಗೆ ಯುಲಿಪ್ನಲ್ಲಿ ಹೆಚ್ಚು ಅವಕಾಶಗಳು ಇವೆ. ಹೀಗಾಗಿ ಹಲವರು ಯುಲಿಪ್ ಪಾಲಿಸಿಗಳತ್ತ ಮೊರೆ ಹೋಗುತ್ತಾರೆ.
ಇದನ್ನು ಓದಿ:ತೋಟಗಾರಿಕೆ ಬೆಳೆಗಳಿಗೆ ಸಿಗುವ ಸಬ್ಸಿಡಿ ಎಷ್ಟು, ಇದನ್ನು ಪಡೆಯಲು ಮಾನದಂಡವೇನು?.. ಇಲ್ಲಿದೆ ಮಾಹಿತಿ
ತೆರಿಗೆ ಕಡಿತ: ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ರ ಅನ್ವಯ ಯುಲಿಪ್ ಪ್ರಿಮಿಯಂಗಳಿಗೆ ತೆರಿಗೆ ರಿಯಾಯಿತಿ ದೊರೆಯಲಿದೆ. ಅಷ್ಟೇ ಅಲ್ಲ ಹೆಚ್ಚುವರಿಯಾಗಿ, ಸೆಕ್ಷನ್ 80CC ಅಡಿಯಲ್ಲಿ ಪಿಂಚಣಿ ಯೋಜನೆಗಳನ್ನು ಈ ಮೂಲಕ ಕ್ಲೈಮ್ ಮಾಡಬಹುದು. ವರ್ಷಕ್ಕೆ 1.50 ಲಕ್ಷ ಹೂಡಿಕೆ ಮೇಲೆ ನಿಮಗೆ ತೆರಿಗೆ ವಿನಾಯಿತಿ ದೊರೆಯಲಿದೆ.
ಭಾಗಶಃ ಹಿಂಪಡೆಯುವಿಕೆ: ಯುಲಿಪ್ ಪಾಲಿಸಿಗಳ ಲಾಕ್ - ಇನ್ ಅವಧಿಯು ಐದು ವರ್ಷಗಳಾಗಿವೆ. ಪಾಲಿಸಿದಾರರು ಇವುಗಳಲ್ಲಿ ಕೆಲವನ್ನು ಭಾಗಶಃ ಹಿಂಪಡೆಯಬಹುದು. ಇದು ಒಟ್ಟು ನಿಧಿಯ ಮೌಲ್ಯದ ಶೇ 20ರಷ್ಟು ಮೀರಬಾರದು. ಉದಾಹರಣೆಗೆ ಐದು ವರ್ಷಗಳ ನಂತರ ನಿಧಿಯ ಮೌಲ್ಯ 2 ಲಕ್ಷ ರೂ.ಗಳಾಗಿದ್ದರೆ ಅದರಿಂದ 40,000 ರೂ.ವರೆಗೆ ವಾಪಸ್ ತೆಗೆದುಕೊಳ್ಳಬಹುದು. ವಿಮೆಗಾರರು ಇದಕ್ಕೆ ಮಿತಿಯನ್ನು ವಿಧಿಸುವ ಸಾಧ್ಯತೆಯಿದೆ. ಪಾಲಿಸಿಯನ್ನು ತೆಗೆದುಕೊಳ್ಳುವ ಮೊದಲು ಈ ನಿಬಂಧನೆಯ ಬಗ್ಗೆ ತಿಳಿದುಕೊಳ್ಳುವುದು ಉತ್ತಮ.
ಮೆಚ್ಯೂರಿಟಿ: ಪಾಲಿಸಿಯ ಮುಕ್ತಾಯದ ಮೇಲೆ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 10 (10D) ಅಡಿಯಲ್ಲಿ ವಿನಾಯಿತಿ ಅನ್ವಯಿಸುತ್ತದೆ. ಏಪ್ರಿಲ್ 1, 2012 ರ ನಂತರ ತೆಗೆದುಕೊಂಡ ಪಾಲಿಸಿಗಳಿಗೆ ಪಾವತಿಸಬೇಕಾದ ವಾರ್ಷಿಕ ಪ್ರೀಮಿಯಂ, ಪಾಲಿಸಿ ಮೌಲ್ಯದ 10 ಪ್ರತಿಶತಕ್ಕಿಂತ ಕಡಿಮೆಯಿರಬೇಕು. ಈ ಹಿಂದೆ ತೆಗೆದುಕೊಂಡ ಪಾಲಿಸಿಗಳಿಗೆ ಪ್ರೀಮಿಯಂ ಶೇ.20ಕ್ಕಿಂತ ಕಡಿಮೆ ಇರಬಾರದು. ಪಾಲಿಸಿದಾರನು ಪಾಲಿಸಿಯ ಮುಕ್ತಾಯದ ಮೊದಲು ಮರಣ ಹೊಂದಿದರೆ ಆಗ ದೊರೆಯುವ ಪರಿಹಾರ ಮೊತ್ತವು ಸಂಪೂರ್ಣವಾಗಿ ತೆರಿಗೆ-ವಿನಾಯತಿಗೆ ಒಳಪಟ್ಟಿರುತ್ತದೆ.
ಹೆಚ್ಚುವರಿ ಪಾವತಿ:ಹೊಸದಾಗಿ ತೆಗೆದುಕೊಂಡ ಯುನಿಟ್ ಆಧಾರಿತ ವಿಮಾ ಪಾಲಿಸಿಗಳಿಗೆ ಪಾವತಿಸಿದ ವಾರ್ಷಿಕ ಪ್ರೀಮಿಯಂ 2.5 ಲಕ್ಷ ರೂ ಗಿಂತ ಹೆಚ್ಚಾದಾಗ, ಪಡೆದ ಆದಾಯದ ಮೇಲೆ ಯಾವುದೇ ತೆರಿಗೆಯನ್ನು ಕಡಿತಗೊಳಿಸಲಾಗುವುದಿಲ್ಲ. ಪಾಲಿಸಿದಾರರು ಇದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
ಅಂತಿಮವಾಗಿ, ಯುಲಿಪ್‌ಗಳಲ್ಲಿ ಇತರ ಪ್ರಯೋಜನಗಳೂ ಇವೆ. ಈಕ್ವಿಟಿ ಮತ್ತು ಸಾಲದಲ್ಲಿ ಹೂಡಿಕೆ ಮಾಡಲು ಅವರು ನಿಮಗೆ ಅವಕಾಶವನ್ನು ನೀಡುತ್ತಾರೆ. ಹೆಚ್ಚಿನ ರಿಸ್ಕ್ ತೆಗೆದುಕೊಳ್ಳಲು ಇಚ್ಚಿಸುವವರು, ಈಕ್ವಿಟಿ ಫಂಡ್‌ಗಳನ್ನು ಆಯ್ಕೆ ಮಾಡಬಹುದು ಮತ್ತು ಕಡಿಮೆ ರಿಸ್ಕ್ ತೆಗೆದುಕೊಳ್ಳಲು ಬಯಸುವವರು, ಡೆಟ್ ಫಂಡ್‌ಗಳನ್ನು ಆಯ್ಕೆ ಮಾಡಬಹುದು. ನೀವು ಅಪಾಯ - ಮುಕ್ತ ಹೂಡಿಕೆಗಳನ್ನು ಬಯಸಿದರೆ, ಸರ್ಕಾರಿ ಭದ್ರತೆಗಳು, ಸ್ಥಿರ ಆದಾಯದ ಭದ್ರತೆಗಳು ಮತ್ತು ಕಾರ್ಪೊರೇಟ್ ಬಾಂಡ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ