ನವದೆಹಲಿ :ದೇಶದ ಆಟೋಮೊಬೈಲ್ ಅಗ್ರ ಸಂಸ್ಥೆಗಳಲ್ಲಿ ಒಂದಾಗಿರುವ ಟಾಟಾ ಮೋಟಾರ್ಸ್ ಟಿಯಾಗೊ ಶ್ರೇಣಿಯನ್ನು ವಿಸ್ತರಿಸಿದೆ. ಹೊಸ ಸ್ಪೋರ್ಟಿ ಟ್ರಿಮ್, ಟಿಯಾಗೊ ಎನ್ಆರ್‌ಜಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.
ಇದರ ಬೆಲೆ ರೂ. 6.57 ಲಕ್ಷ (ಎಕ್ಸ್ ಶೋ ರೂಂ ದೆಹಲಿ). ಹ್ಯಾಚ್‌ಬ್ಯಾಕ್‌ನ ಹೊಸ ಸ್ಪೋರ್ಟಿ ಆವೃತ್ತಿಯು ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್, ದೊಡ್ಡ ಟೈರ್‌ಗಳು, ಬಾಡಿ ಕ್ಲಾಡಿಂಗ್ ಮತ್ತು ರೂಫ್ ರೇಲ್‌ಗಳೊಂದಿಗೆ ಎಸ್‌ಯುವಿ ಮಾದರಿಯಲ್ಲಿದೆ.
ಟಿಯಾಗೋ ಎನ್‌ಆರ್‌ಜಿ 1.2 ಲೀಟರ್ ಪೆಟ್ರೋಲ್ ಪವರ್‌ಟ್ರೇನ್ (86 ಪಿಎಸ್ ಪವರ್)ನಿಂದ ನಿಯಂತ್ರಿಸಲ್ಪಡುತ್ತದೆ. ಇದು ಐದು ಸ್ಪೀಡ್ ಮ್ಯಾನುವಲ್ ಮತ್ತು ಎಎಮ್‌ಟಿ (ಆಟೋಮೇಟೆಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್) ಟ್ರಾನ್ಸ್‌ಮಿಷನ್ ಹೊಂದಿದೆ. ಈ ಮಾದರಿಯು ಗ್ಲೋಬಲ್ ಎನ್‌ಸಿಎಪಿಯಿಂದ 4 ಸ್ಟಾರ್ ಸುರಕ್ಷತಾ ರೇಟಿಂಗ್ ಹೊಂದಿದೆ.
ಹೆಸರಿನಂತೆಯೇ ನಿಜವಾಗಿಯೂ ಶಕ್ತಿಯುತವಾಗಿದೆ. ಎಸ್‌ಯುವಿ ಮಾದರಿಯ ವಾಹನಗಳು ಮಾರುಕಟ್ಟೆಯಲ್ಲಿ ಹೆಚ್ಚು ಆಕರ್ಷಣೆಯಾಗಿವೆ. ಹೀಗಾಗಿ, ಎನ್‌ಆರ್‌ಜಿ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಇದು ಹೊರಭಾಗದಲ್ಲಿ ಮಾತ್ರ ಪ್ರಬಲವಾಗಿದೆ. ಆದರೆ, ಒಳಾಂಗಣದಲ್ಲಿ ವೈಶಿಷ್ಟ್ಯ-ಲೋಡ್ ಮತ್ತು ಸ್ಟೈಲಿಶ್ ಆಗಿದೆ. ಒರಟಾದ ಭೂಪ್ರದೇಶಗಳಲ್ಲೂ ಚಲಿಸುವ ಸಾರ್ಥಮ್ಯ ಹೊಂದಿಗೆ ಎಂದು ಟಾಟಾ ಮೋಟಾರ್ಸ್ ಉಪಾಧ್ಯಕ್ಷ (ಮಾರಾಟ, ಮಾರ್ಕೆಟಿಂಗ್ ಮತ್ತು ಗ್ರಾಹಕ ಆರೈಕೆ) ರಾಜನ್ ಅಂಬಾ ತಿಳಿಸಿದ್ದಾರೆ.