ನವದೆಹಲಿ:ಮಂದಗತಿಯ ಜಾಗತಿಕ ಆರ್ಥಿಕತೆ ಹಾಗೂ ಚೀನಾ- ಅಮೆರಿಕ ನಡುವಿನ ವಾಣಿಜ್ಯ ಸಮರದಿಂದಾಗಿ ಸೋಮವಾರದ ಪೇಟೆಯಲ್ಲಿ ವಿಶ್ವದ ಅಗ್ರ 500 ಶ್ರೀಮಂತರ ಕಂಪನಿಗಳು ಋಣಾತ್ಮಕ ನಡೆ ಪ್ರದರ್ಶಿಸಿವೆ.
ಅಮೇಜಾನ್ ಸಂಸ್ಥಾಪಕ ಜೆಫ್ ಬೆಜೋಸ್, ಫ್ರಾನ್ಸ್ನ ಎಲ್ವಿಎಂಎಚ್ ಸಿಇಒ ಬರ್ನಾರ್ಡ್ ಅರ್ನಾಲ್ಟ್, ಫೇಸ್ಬುಕ್ ಸಿಇಒ ಮಾರ್ಕ್ ಜುಕರ್ಬರ್ಗ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಕಂಪನಿಗಳ ಷೇರುಗಳ ಮೌಲ್ಯದಲ್ಲಿ ಕುಸಿತ ದಾಖಲಿಸಿದ್ದರೇ ಭಾರ್ತಿ ಏರ್ಟೆಲ್ ಮುಖ್ಯಸ್ಥ ಸುನೀಲ್ ಮಿತ್ತಲ್ ಅವರ ಕಂಪನಿಯ ಷೇರು ಗ್ರೀನ್ ಮಾರ್ಕ್ನಲ್ಲಿ ಮುಂದುವರಿದಿದೆ.