ಕರ್ನಾಟಕ

karnataka

ETV Bharat / business

ಭಾರತದ ಲಸಿಕೆಗೆ ಹೆಚ್ಚಿದ ಬೇಡಿಕೆ: 'ಸ್ವಲ್ಪ ತಾಳ್ಮೆಯಿಂದ ಕಾಯುವಂತೆ' ರಾಷ್ಟ್ರಗಳಿಗೆ ಸೀರಮ್​ ಸಂಸ್ಥೆ ಮನವಿ

ಕೆಲವು ವಾರಗಳ ಹಿಂದೆ ಇಂಗ್ಲೆಂಡ್​ಗೆ ಐದು ಮಿಲಿಯನ್ ಡೋಸ್‌ ವಿತರಿಸಲಾಗಿತ್ತು. ಭಾರತದಲ್ಲಿನ ಸರ್ಕಾರಿ ರೋಗನಿರೋಧಕ ಪ್ರೋಗ್ರಾಂನ್​ ಪ್ರಸ್ತುತ ಪರಿಸ್ಥಿತಿ ಮತ್ತು ಅವಶ್ಯಕತೆಯ ಆಧಾರದ ಮೇಲೆ ನಾವು ನಂತರ ಹೆಚ್ಚಿನದನ್ನು ಪೂರೈಸಲು ಪ್ರಯತ್ನಿಸುತ್ತೇವೆ ಎಂದು ಎಸ್‌ಐಐ ವಕ್ತಾರರು ಪಿಟಿಐಗೆ ತಿಳಿಸಿದ್ದಾರೆ.

SII
SII

By

Published : Mar 19, 2021, 8:10 PM IST

Updated : Mar 19, 2021, 9:10 PM IST

ನವದೆಹಲಿ: ಭಾರತದಲ್ಲಿ ಸರ್ಕಾರಿ ರೋಗನಿರೋಧಕ ಲಸಿಕೆ ಅಭಿಯಾನ ವಾಸ್ತವಿಕ ಪರಿಸ್ಥಿತಿ ಮತ್ತು ಅವಶ್ಯಕತೆಯನ್ನು ಗಮನದಲ್ಲಿ ಇರಿಸಿಕೊಂಡು ಇಂಗ್ಲೆಂಡ್​ಗೆ ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಕೋವಿಡ್​-19 ಲಸಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಪೂರೈಸಲು ಪ್ರಯತ್ನಿಸುವುದಾಗಿ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಹೇಳಿದೆ.

ಈ ತಿಂಗಳ ಅಂತ್ಯದ ವೇಳೆಗೆ ಕೋವಿಡ್​-19 ಸೋಂಕಿನಿಂದ ರಕ್ಷಿಸಲು ಲಸಿಕೆಗಳ ಸಾಪ್ತಾಹಿಕ ಪೂರೈಕೆಯಲ್ಲಿ ಗಣನೀಯ ಇಳಿಕೆಯಾಗುವ ಬಗ್ಗೆ ಇಂಗ್ಲೆಂಡ್​ ರಾಷ್ಟ್ರೀಯ ಆರೋಗ್ಯ ಸೇವೆ ಎಚ್ಚರಿಸಿದೆ.

ಕೆಲವು ವಾರಗಳ ಹಿಂದೆ ಇಂಗ್ಲೆಂಡ್​ಗೆ ಐದು ಮಿಲಿಯನ್ ಡೋಸ್‌ ವಿತರಿಸಲಾಗಿತ್ತು. ಭಾರತದಲ್ಲಿನ ಸರ್ಕಾರಿ ರೋಗನಿರೋಧಕ ಪ್ರೋಗ್ರಾಂನ್​ ಪ್ರಸ್ತುತ ಪರಿಸ್ಥಿತಿ ಮತ್ತು ಅವಶ್ಯಕತೆಯ ಆಧಾರದ ಮೇಲೆ ನಾವು ನಂತರ ಹೆಚ್ಚಿನದನ್ನು ಪೂರೈಸಲು ಪ್ರಯತ್ನಿಸುತ್ತೇವೆ ಎಂದು ಎಸ್‌ಐಐ ವಕ್ತಾರರು ಪಿಟಿಐಗೆ ತಿಳಿಸಿದ್ದಾರೆ.

ಕಳೆದ ತಿಂಗಳು ಎಸ್‌ಐಐ ಸಿಇಒ ಆದರ್ ಪೂನವಾಲ್ಲಾ ಅವರು ಕೋವಿಶೀಲ್ಡ್ ಎಂಬ ಕೋವಿಡ್ -19 ಲಸಿಕೆ ಸರಬರಾಜುಗಾಗಿ ಕಾಯುತ್ತಿರುವ ಇತರ ದೇಶಗಳು ಸ್ವಲ್ಪ ತಾಳ್ಮೆಯಿಂದಿರಿ ಎಂದು ಮನವಿ ಮಾಡಿದ್ದರು. ಭಾರತದ ಅಗತ್ಯಗಳಿಗೆ ಆದ್ಯತೆ ನೀಡುವಂತೆ ಕಂಪನಿಗೆ ನಿರ್ದೇಶನ ನೀಡಲಾಗಿದೆ.

ಇದನ್ನೂ ಓದಿ: ಪ್ಯಾನ್-ಆಧಾರ್​ ಲಿಂಕ್​ಗೆ ಕೆಲವೇ ದಿನ ಬಾಕಿ : ಕಾರ್ಡ್ ನಿಷ್ಕ್ರಿಯಗೊಂಡರೆ ವ್ಯವಹಾರ ಬಂದ್.. ಇಲ್ಲಿದೆ ಜೋಡಣೆ ವಿಧಾನ​

ಭಾರತದ ಅವಶ್ಯಕತೆಗಳನ್ನು ಪೂರೈಸುವ ಪ್ರಯತ್ನಗಳನ್ನು ಮಾಡುವುದರ ಹೊರತಾಗಿ, ಲಸಿಕೆ ಅಗತ್ಯವಿರುವ ವಿಶ್ವದ ಇತರ ಭಾಗಗಳ ಬೇಡಿಕೆಯನ್ನು ಸಮತೋಲನಗೊಳಿಸಲು ಪ್ರಯತ್ನವನ್ನು ಮಾಡುತ್ತಿದೆ ಎಂದು ಹೇಳಿದ್ದರು.

ಆತ್ಮೀಯ ದೇಶಗಳು ಮತ್ತು ಸರ್ಕಾರಗಳು, ನೀವು ಕೋವಿಶೀಲ್ಡ್ ಸರಬರಾಜುಗಾಗಿ ಕಾಯುತ್ತಿರುವಾಗ, ದಯವಿಟ್ಟು ತಾಳ್ಮೆಯಿಂದಿರಿ ಎಂದು ನಾನು ವಿನಮ್ರವಾಗಿ ವಿನಂತಿಸುತ್ತೇನೆ. ಸೀರಮ್ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ, ಭಾರತದ ಬೃಹತ್ ಅಗತ್ಯಗಳಿಗೆ ಆದ್ಯತೆ ನೀಡುವಂತೆ ನಿರ್ದೇಶಿತಗೊಂಡಿದೆ. ಅದರ ಜೊತೆಗೆ ವಿಶ್ವದ ಉಳಿದ ಅಗತ್ಯಗಳನ್ನು ಸಮತೋಲನವಾಗಿ ಪೂರೈಕೆ ಮಾಡಲಿದೆ. ನಾವು ಅದಕ್ಕಾಗಿ ಅತ್ಯುತ್ತಮ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದು ಪೂನವಾಲ್ಲಾ ಟ್ವೀಟ್​ನಲ್ಲಿ ಹೇಳಿದ್ದಾರೆ.

ಅಧಿಕೃತ ಅಂಕಿಅಂಶಗಳ ಪ್ರಕಾರ, ಬ್ರಿಟನ್ ಗುರುವಾರ 6,303 ಕೋವಿಡ್​ ಪ್ರಕರಣಗಳನ್ನು ವರದಿ ಮಾಡಿದೆ. ಒಂದು ದಿನದ ಹಿಂದೆ 5,758 ಕೇಸ್​ಗಳು ವರದಿಯಾಗಿವೆ.

ಸೋಂಕು ತಡೆಗಟ್ಟುವಲ್ಲಿ ಲಸಿಕೆಯ ಪ್ರಯೋಜನಗಳು ಅಪಾಯಗಳನ್ನು ಮೀರಿಸುತ್ತವೆ ಎಂದು ಬ್ರಿಟನ್‌ನ ಔಷಧಿ ಮತ್ತು ಆರೋಗ್ಯ ಉತ್ಪನ್ನಗಳ ನಿಯಂತ್ರಣ ಸಂಸ್ಥೆ (ಎಂಎಚ್​ಆರ್​ಎ) ಹೇಳಿತ್ತು. ಅಸ್ಟ್ರಾಜೆನೆಕಾ ಕೋವಿಡ್​-19 ಲಸಿಕೆ ಪಡೆಯುವುದನ್ನು ಮುಂದುವರಿಸಲು ಜನರಿಗೆ ಕರೆ ನೀಡಿತು.

ಲಸಿಕೆ ಪಡೆದ ವ್ಯಕ್ತಿಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ವರದಿಗಳು ಕಂಡುಬಂದಿದೆ. ಈ ಆಧಾರದ ಮೇಲೆ ಯುರೋಪಿಯನ್ ಒಕ್ಕೂಟದಲ್ಲಿ ದೇಶಗಳು ಮುನ್ನೆಚ್ಚರಿಕೆ ಕ್ರಮವಾಗಿ ಅಸ್ಟ್ರಾಜೆನೆಕಾ ಲಸಿಕೆ ಬಳಕೆ ಸ್ಥಗಿತಗೊಳಿಸಿದ್ದ ನಂತರ ಈ ಹೇಳಿಕೆ ಹೊರ ಬಂದಿದೆ.

Last Updated : Mar 19, 2021, 9:10 PM IST

ABOUT THE AUTHOR

...view details