ನವದೆಹಲಿ:ತೀವ್ರ ಹಣಕಾಸು ಮುಗ್ಗಟ್ಟು ಎದುರಿಸುತ್ತಿರುವ ಜೆಟ್ ಏರ್ವೇಸ್ ಸಂಸ್ಥೆಯ ಸಮಸ್ಯೆಗಳನ್ನು ಪರಿಶೀಲಿಸಿ, ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ವಿಮಾನಯಾನ ಸಚಿವ ಸುರೇಶ್ ಪ್ರಭು ಅವರು ಸಚಿವಾಲಯದ ಕಾರ್ಯದರ್ಶಿ ಪ್ರದೀಪ್ ಸಿಂಗ್ ಖರೋಲ ಅವರಿಗೆ ಸೂಚಿಸಿದ್ದಾರೆ.
ಇಂಧನ ಪೂರೈಕೆಯ ಅಭಾವ, ವಿಮಾನ ಬಾಡಿಗೆ ಪಾವತಿ ವಿಳಂಬ, ಪೈಲೆಟ್ಗಳ ವೇತನ ಬಾಕಿ ಸೇರಿದಂತೆ ಹಲವು ತೊಡಕುಗಳಿಂದ ಗುರುವಾರದ ಮಟ್ಟಿಗೆ ಅಂತಾರಾಷ್ಟ್ರೀಯ ಸೇವೆಗಳನ್ನು ಸ್ಥಗಿತಗೊಳಿಸಿತ್ತು. ಕಾರ್ಯಾಚರಣೆ ಕಾರಣಗಳಿಂದ ಕೊಲ್ಕತ್ತಾ- ಗುವಾಹತಿ ಹಾಗೂ ಕೊಲ್ಕತ್ತಾ- ಮುಂಬೈ ನಡುವಿನ ವಿಮಾನಗಳ ಸೇವೆಯನ್ನು ರದ್ದು ಪಡಿಸಿತ್ತು.