ನವದೆಹಲಿ :ಕೊರೊನಾ ವೈರಸ್ ಸಾಂಕ್ರಾಮಿಕ ಮತ್ತು ತೈಲ ಮಾರುಕಟ್ಟೆಯ ಮೇಲೆ ಅದು ಬೀರಿದ ತೀವ್ರ ಪ್ರಭಾವದ ಮಧ್ಯೆ ಬ್ರಿಟಿಷ್ ಪೆಟ್ರೋಲಿಯಂ ಈ ವರ್ಷದ ಅಂತ್ಯದ ವೇಳೆಗೆ ಜಾಗತಿಕವಾಗಿ 10,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದೆ. ತೈಲ ದೈತ್ಯದ 70,000 ಜಾಗತಿಕ ಉದ್ಯೋಗಿಗಳ ಪೈಕಿ 15 ಪ್ರತಿಶತದಷ್ಟು ವಜಾ ಆಗಲಿದ್ದಾರೆ.
ಕೊರೊನಾ ವೈರಸ್ ಸಾಂಕ್ರಾಮಿಕದಿಂದ ಉಂಟಾದ ತೈಲ ಬೇಡಿಕೆಯ ಜಾಗತಿಕ ಕುಸಿತದ ನಡುವೆ ಕಂಪನಿಗೆ ನೆರವಾಗಲು ಉದ್ಯೋಗ ಕಡಿತವು ಅವಶ್ಯಕವಾಗಿದೆ ಎಂದು ಬಿಪಿಯ ಸಿಇಒ ಬರ್ನಾರ್ಡ್ ಲೂನಿ ಇಮೇಲ್ನಲ್ಲಿ ಉದ್ಯೋಗಿಗಳಿಗೆ ತಿಳಿಸಿದ್ದಾರೆ.