ಕರ್ನಾಟಕ

karnataka

ETV Bharat / business

ನೋಕಿಯಾದ 10 ಸಾವಿರ ಉದ್ಯೋಗಿಗಳಿಗೆ ಕೆಲಸದಿಂದ ಗೇಟ್​ಪಾಸ್​

ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೆಕ್ಕಾ ಲುಂಡ್‌ಮಾರ್ಕ್ ನೇತೃತ್ವದಡಿ ಬಹುದೊಡ್ಡ ಪುನರ್ರಚನೆ ಯೋಜನೆ ಪ್ರಕಟಿಸಿದ ನೋಕಿಯಾ, ಮುಂದಿನ ಎರಡು ವರ್ಷಗಳಲ್ಲಿ ಮಾರುಕಟ್ಟೆ ಬೆಳವಣಿಗೆಗಳು ನಿಖರವಾದ ಉದ್ಯೋಗ ನಷ್ಟಗಳನ್ನು ನಿರ್ಧರಿಸುತ್ತದೆ ಎಂದು ಹೇಳಿದೆ.

Nokia
Nokia

By

Published : Mar 16, 2021, 4:32 PM IST

ಹೆಲ್ಸಿಂಕಿ:600 ಮಿಲಿಯನ್ ಯೂರೋ (715 ಮಿಲಿಯನ್ ಡಾಲರ್​) ವೆಚ್ಚ ಕಡಿತ ಯೋಜನೆಯ ಭಾಗವಾಗಿ ಮುಂದಿನ ಎರಡು ವರ್ಷಗಳಲ್ಲಿ ತನ್ನ ಉದ್ಯೋಗಿಗಳ ಶೇ 11ರಷ್ಟು ಕಡಿತಗೊಳಿಸುವುದಾಗಿ ಫಿನ್ನಿಷ್ ಟೆಲಿಕಾಂ ಸಲಕರಣೆಗಳ ತಯಾರಕ ನೋಕಿಯಾ ಪ್ರಕಟಿಸಿದೆ.

ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೆಕ್ಕಾ ಲುಂಡ್‌ಮಾರ್ಕ್ ನೇತೃತ್ವದಡಿ ಬಹುದೊಡ್ಡ ಪುನರ್ರಚನೆ ಯೋಜನೆ ಪ್ರಕಟಿಸಿದ ನೋಕಿಯಾ, ಮುಂದಿನ ಎರಡು ವರ್ಷಗಳಲ್ಲಿ ಮಾರುಕಟ್ಟೆ ಬೆಳವಣಿಗೆಗಳು ನಿಖರವಾದ ಉದ್ಯೋಗ ನಷ್ಟಗಳನ್ನು ನಿರ್ಧರಿಸುತ್ತದೆ ಎಂದು ಹೇಳಿದೆ.

ಯೋಜಿತ ಪುನರ್ರಚನೆಯು ನೋಕಿಯಾ ಇಂದು ಹೊಂದಿರುವ ಸುಮಾರು 90,000 ಉದ್ಯೋಗಿಗಳ ಬದಲು 18-24 ತಿಂಗಳ ಅವಧಿಯಲ್ಲಿ 80,000-85,000 ಉದ್ಯೋಗಿ ಸಂಸ್ಥೆಯಲ್ಲಿ ಉಳಿಯಲಿದ್ದಾರೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಸಂಸ್ಥೆಯು ತನ್ನ ಬಂಡವಾಳವನ್ನು ಸುವ್ಯವಸ್ಥಿತಗೊಳಿಸುತ್ತದೆ. ದೀರ್ಘಾವಧಿಯಲ್ಲಿ ವಿಸ್ತರಣೆಯನ್ನು ಕಡಿಮೆ ಮಾಡುತ್ತದೆ ಎಂದಿದೆ.

ಸೂಪರ್ ಫಾಸ್ಟ್ 5ಜಿ ಸಲಕರಣೆಗಳ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಲು ನೋಕಿಯಾ ಎರಿಕ್ಸನ್ ಮತ್ತು ಹುವಾವೇ ವಿರುದ್ಧ ಸೆಣಸಾಡಲು ಮೂರು ಹಾದಿಗಳ ಓಟ ಆಯ್ದುಕೊಂಡಿದೆ. ಕಳೆದ ವರ್ಷ ಅಮೆರಿಕದಲ್ಲಿ ನಡೆದ ಪ್ರಮುಖವಾದ ವೆರಿಝೋನ್ ಒಪ್ಪಂದ ಕಳೆದುಕೊಂಡಿತು. ಚೀನಾದಲ್ಲಿ ಅತಿಕ್ರಮಣ ಮಾಡಲು ವಿಫಲವಾಗಿದೆ.

ಕಳೆದ ವರ್ಷ ಆಗಸ್ಟ್‌ನಲ್ಲಿ ಲುಂಡ್‌ಮಾರ್ಕ್ ಅಧಿಕಾರದ ಚುಕ್ಕಾಣಿ ಹಿಡಿದ ನಂತರ, ಅವರು ಹಿಂದಿನ ಸಿಇಒ ರಾಜೀವ್ ಸೂರಿಯವರ ಎಂಡ್-ಟು-ಎಂಡ್ ಪರಿಹಾರಗಳ ಕಾರ್ಯತಂತ್ರ ರದ್ದುಗೊಳಿಸಿದರು. ಅದನ್ನು ಹೆಚ್ಚು ಕೇಂದ್ರೀಕೃತ ವಿಧಾನದಿಂದ ಬದಲಾಯಿಸಿದರು. 5ಜಿಯಲ್ಲಿ ಗೆಲ್ಲಲು ಏನು ಬೇಕಾದರೂ ಹೂಡಿಕೆ ಮಾಡುವುದಾಗಿ ಪ್ರತಿಜ್ಞೆ ಮಾಡಿದರು.

ABOUT THE AUTHOR

...view details