ನವದೆಹಲಿ:ಆ್ಯಪಲ್ ತನ್ನ ಕೈಗೆಟುಕುವ ದರದಲ್ಲಿ ಎರಡನೇ ತಲೆಮಾರಿನ ಐಫೋನ್ ಎಸ್ಇ (2020) ಅನ್ನು ಭಾರತದಲ್ಲಿ ಜೋಡಿಸಲು ಪ್ರಾರಂಭಿಸಿದೆ. ಶೀಘ್ರದಲ್ಲೇ ಅಧಿಕೃತ ಚಿಲ್ಲರೆ ಅಂಗಡಿ ಮತ್ತು ಆನ್‌ಲೈನ್ ಪ್ಲಾಟ್ಫಾರ್ಮ್ಗಳಲ್ಲಿ ಲಗ್ಗೆ ಇಡಲಿವೆ ಎಂದು ಕಂಪನಿ ತಿಳಿಸಿದೆ.
ಆಂಡ್ರಾಯ್ಡ್ ಮಿಡ್-ಸೆಗ್ಮೆಂಟ್ ಬಳಕೆದಾರರು ಮತ್ತು ಐಫೋನ್ ಅನ್ವೇಷಕರನ್ನು ಗುರಿಯಾಗಿಸಿಕೊಂಡು, ಆ್ಯಪಲ್ ಹೊಸ ಐಫೋನ್ ಎಸ್ಇ ಅನ್ನು ಭಾರತಕ್ಕೆ ತಂದಿದೆ. ಇದು ಐಫೋನ್ 11ರ ಆ್ಯಪಲ್ ಐಫೋನ್ 8ನಂತೆ ಕಾಣುತ್ತಿತ್ತು. ಕೇವಲ 42,500 ರೂ.ಗಳಿಗೆ ಭಾರತೀಯ ಮಾರುಕಟ್ಟೆಗೆ ತಂದಿತು.
ಹೊಸ ಐಫೋನ್ ಎಸ್ಇ ಅತ್ಯಂತ ಶಕ್ತಿಯುತವಾದ ಚಿಪ್ ಅನ್ನು ನಮ್ಮ ಅತ್ಯಂತ ಜನಪ್ರಿಯ ಗಾತ್ರಕ್ಕೆ ಹಾಗೂ ಕೈಗೆಟುಕುವ ಬೆಲೆಯಲ್ಲಿ ಪ್ಯಾಕ್ ಮಾಡುತ್ತಿದ್ದೇವೆ. ಸ್ಥಳೀಯ ಗ್ರಾಹಕರಿಗೆ ಭಾರತದಲ್ಲಿ ಇದನ್ನು ತಯಾರಿಸಲು ನಾವು ಉತ್ಸುಕರಾಗಿದ್ದೇವೆ ಎಂದು ಆ್ಯಪಲ್ ಪ್ರಕಟಣೆಯಲ್ಲಿ ತಿಳಿಸಿದೆ.
ಹೊಸ ಐಫೋನ್ ಎಸ್ಇ ಅನ್ನು ಆ್ಯಪಲ್ ಸರಬರಾಜುದಾರ ವಿಸ್ಟ್ರಾನ್ ತನ್ನ ಬೆಂಗಳೂರು ಯೂನಿಟ್ನಲ್ಲಿ ಜೋಡಿಸುತ್ತಿದೆ.
ಕ್ಯುಪರ್ಟಿನೋ ಮೂಲದ ಟೆಕ್ ದೈತ್ಯ ಕಳೆದ ವಾರ 2 ಟ್ರಿಲಿಯನ್ ಡಾಲರ್ ಗಡಿ ದಾಟಿದ ಮೊದಲ ಯುಎಸ್ ಕಂಪನಿಯಾಗಿದೆ. ಈಗ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಐಫೋನ್ 11, ಐಫೋನ್ ಎಕ್ಸ್ಆರ್, ಐಫೋನ್ 7 ಮತ್ತು ಹೊಸ ಐಫೋನ್ ಎಸ್ಇ ಒಟ್ಟುಗೂಡಿಸುತ್ತಿದೆ.
ಐಡಿಸಿ ಇಂಡಿಯಾದ ಕ್ಲೈಂಟ್ ಡಿವೈಸಸ್ ಮತ್ತು ಐಪಿಡಿಎಸ್ ಸಂಶೋಧನಾ ನಿರ್ದೇಶಕ ನವಕೇಂದರ್ ಸಿಂಗ್ ಅವರ ಪ್ರಕಾರ, ಹೊಸ ಐಫೋನ್ ಎಸ್ಇ ಭಾರತ ಮಾರುಕಟ್ಟೆಯಲ್ಲಿ ಉತ್ತಮ ಆಕರ್ಷಣೆ ಕಂಡುಕೊಳ್ಳುತ್ತಿದೆ. ಹೊಸ ಐಫೋನ್ ಆಕರ್ಷಕ ಬೆಲೆಯಲ್ಲಿ ಮಾರುಕಟ್ಟೆಗೆ ಬರಲಿದೆ ಎಂದಿದ್ದಾರೆ.
ಮುಂದಿನ ಹಬ್ಬದ ದಿನಗಳಲ್ಲಿ ಅದರ ಆಕರ್ಷಕ ಬೆಲೆ ಮತ್ತು ಬ್ರ್ಯಾಂಡ್ ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ನಿರೀಕ್ಷಿತ ಬೆಲೆ ಬಹಿರಂಗ ಆಗಬಹುದು. ನಾವು ಹೊಸ ಐಫೋನ್ ಎಸ್ಇ ಅನ್ನು ಎದುರು ನೋಡುತ್ತಿದ್ದೇವೆ ಎಂದು ಸಿಂಗ್ ಐಎಎನ್‌ಎಸ್‌ಗೆ ತಿಳಿಸಿದರು.