ಕರ್ನಾಟಕ

karnataka

ETV Bharat / business

ಹೊಸೂರಲ್ಲಿ ಮುತ್ತೂಟ್​ ಫೈನಾನ್ಸ್​ಗೆ ನುಗ್ಗಿ 7 ಕೋಟಿ ಚಿನ್ನ ದರೋಡೆ: ಹೈದರಾಬಾದ್​ನಲ್ಲಿ 6 ಖದೀಮರ ಬಂಧನ! - ಸೈಬರಾಬಾದ್ ಪೊಲೀಸ್​ ವ್ಯಾಪ್ತಿಯ ಕ್ರೈಮ್

ನಿನ್ನೆ ದರೋಡೆ ಎಸಗಿ ಸಿನಿಮಾ ಶೈಲಿಯಲ್ಲಿ ಪರಾರಿ ಆಗಿದ್ದ ಬಳಿಕ ಆರೋಪಿಗಳ ಪತ್ತೆಗೆ ಕರ್ನಾಟಕ ಹಾಗೂ ತಮಿಳುನಾಡು ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದರು. ಇಂದು ಅನಿರೀಕ್ಷಿತವಾಗಿ ಬೆಳಗ್ಗೆ ದರೋಡೆ ಗ್ಯಾಂಗ್ ಅನ್ನು ಸೈಬರಾಬಾದ್ ಪೊಲೀಸರು ಶಂಶಾಬಾದ್​ನಲ್ಲಿ ಹಿಡಿದಿದ್ದಾರೆ.

robbery
robbery

By

Published : Jan 23, 2021, 1:30 PM IST

Updated : Jan 23, 2021, 2:14 PM IST

ಹೈದರಾಬಾದ್​: ಬೆಂಗಳೂರು ಸಮೀಪದ ನೆರೆಯ ಹೊಸೂರು ಪಟ್ಟಣದಲ್ಲಿರುವ ಮುತ್ತೂಟ್ ಫೈನಾನ್ಸ್​ಗೆ ಶುಕ್ರವಾರ ಬೆಳಗ್ಗೆ ನುಗ್ಗಿದ್ದ 6 ಮಂದಿ ಕಳ್ಳರ ಗುಂಪೊಂದು ಸಿನಿಮೀಯ ರೀತಿಯಲ್ಲಿ ದರೋಡೆ ಮಾಡಿ ಪರಾರಿಯಾಗಿದ್ದರು.

ಈ ಗ್ಯಾಂಗ್ ಅನ್ನು ಹೈದರಾಬಾದ್​ನಲ್ಲಿ ಸೈಬರಾಬಾದ್ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ದರೋಡೆ ಮಾಡಿದ್ದ ಚಿನ್ನ ಹಾಗೂ 95 ಸಾವಿರ ನಗದು ವಶಕ್ಕೆ ಪಡೆಯಲಾಗಿದೆ.

ಹೊಸೂರು ಮುತ್ತೂಟ್ ಫೈನಾನ್ಸ್​

ನಿನ್ನೆ ದರೋಡೆ ಎಸಗಿ ಸಿನಿಮಾ ಶೈಲಿಯಲ್ಲಿ ಪರಾರಿ ಆಗಿದ್ದ ಬಳಿಕ ಆರೋಪಿಗಳ ಪತ್ತೆಗೆ ಕರ್ನಾಟಕ ಹಾಗೂ ತಮಿಳುನಾಡು ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದರು. ಇಂದು ಅನಿರೀಕ್ಷಿತವಾಗಿ ಬೆಳಗ್ಗೆ ದರೋಡೆ ಗ್ಯಾಂಗ್ ಅನ್ನು ಸೈಬರಾಬಾದ್ ಪೊಲೀಸರು ಶಂಶಾಬಾದ್​ನಲ್ಲಿ ಹಿಡಿದಿದ್ದಾರೆ.

ಪೊಲೀಸರು ಆಪಾದಿತರಿಂದ ಚಿನ್ನ, ಹಣ ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸ್ ಆಯುಕ್ತ ಸಜ್ಜನಾರ್ ಬಂಧನದ ಬಗ್ಗೆ ಇಂದು ಮಧ್ಯಾಹ್ನ 3 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.

Last Updated : Jan 23, 2021, 2:14 PM IST

ABOUT THE AUTHOR

...view details