ನವದೆಹಲಿ:ಹ್ಯುಂಡೈ ಇಂಡಿಯಾ 2021ರ ಮಾರ್ಚ್ ತಿಂಗಳಲ್ಲಿ ತನ್ನ ಉತ್ಪನ್ನಗಳ ವ್ಯಾಪ್ತಿಯಲ್ಲಿ ಆಯ್ದ ಕಾರುಗಳ ಮೇಲೆ ರಿಯಾಯಿತಿ ನೀಡುತ್ತಿದೆ.
ಈ ರಿಯಾಯಿತಿಯು ವಿನಿಮಯ, ನಗದು ಮತ್ತು ಲಾಯಲ್ಟಿ ಬೋನಸ್ ಪ್ರಯೋಜನಗಳ ಮೇಲೆ ಈ ತಿಂಗಳ ಅಂತ್ಯದವರೆಗೆ ಜಾರಿಯಲ್ಲಿರುತ್ತದೆ. ಇದಲ್ಲದೆ, ವೃತ್ತಿ ಅಥವಾ ಕೆಲಸ ಮಾಡುವ ಸ್ಥಳ ಅವಲಂಬಿಸಿ, ಕಾರ್ಪೊರೇಟ್ ರಿಯಾಯಿತಿಯ ಹೆಸರಿನಲ್ಲಿ ಹೆಚ್ಚುವರಿ ಪ್ರಯೋಜನಗಳಿವೆ. 1.5 ಲಕ್ಷ ರೂ.ವರೆಗೆ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರ್‌ಗೆ ಹೆಚ್ಚಿನ ರಿಯಾಯಿತಿ ನೀಡಲಾಗಿದೆ.
ಹ್ಯುಂಡೈನ ಆರಂಭಿಕ ಕಾರು, ಸ್ಯಾಂಟ್ರೊ ಮೇಲೆ 50,000 ರೂ. ರಿಯಾಯಿತಿ ಲಭ್ಯವಿದೆ. ಕೆಲವು ವಿಭಾಗದಲ್ಲಿ ಸಂಪೂರ್ಣ ನಗದು ಲಾಭ 30,000 ರೂ.ಯಷ್ಟು ಲಭ್ಯವಾಗಲಿದ್ದು, ಎರಾ ಕಾರಿನಡಿ 20 ಸಾವಿರ ರೂ. ಆಫರ್ ಸಿಗಲಿದೆ. ಕಾರು ವಿನಿಮಯದ ಮೇಲೆ ಹೆಚ್ಚುವರಿ 15,000 ರೂ. ಹಾಗೂ 5,000 ರೂ. ಕಾರ್ಪೊರೇಟ್ ಲಾಭವಿದೆ.
ಇದನ್ನೂ ಓದಿ: ವಿಡಿಯೋ ಕಾಲಿಂಗ್ನ ಟಿಸಿಎಲ್ ಆಂಡ್ರಾಯ್ಡ್ ಟಿವಿ ಲಾಂಚ್; ರೇಟ್ ಎಷ್ಟು ಗೊತ್ತೇ?
ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್ ಖರೀದಿ ಮೇಲೆ ಗ್ರಾಹಕರು 60,000 ರೂ.ಗಳವರೆಗೆ ರಿಯಾಯಿತಿ ಪಡೆಯಬಹುದು. ಇದರಲ್ಲಿ 45,000 ರೂ. ನಗದು ರಿಯಾಯಿತಿ, 10,000 ರೂ. ವಿನಿಮಯ ಬೋನಸ್ ಮತ್ತು 5,000 ರೂ. ಕಾರ್ಪೊರೇಟ್ ರಿಯಾಯಿತಿ ಸೇರಿವೆ. ಇದು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಎರಡಕ್ಕೂ ಮಾನ್ಯವಾಗಿದೆ. ಹ್ಯುಂಡೈ ಔರಾ ಮೇಲೆ 70,000 ರೂ. ರಿಯಾಯಿತಿ ಸಿಗಲಿದ್ದು, ನಗದು ಲಾಭ 50,000 ರೂ., ವಿನಿಮಯ ಬೋನಸ್ 15,000 ರೂ. ಹಾಗೂ 5,000 ರೂ. ಹೆಚ್ಚುವರಿ ಕಾರ್ಪೊರೇಟ್ ರಿಯಾಯಿತಿ ಮೂಲಕ ಪಡೆಯಬಹುದು.
ಹ್ಯುಂಡೈ ಎಲಾಂಟ್ರಾದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಿಗೆ ಕಂಪನಿಯ ವಿತರಕರು 1 ಲಕ್ಷ ರೂ. ಡಿಸ್ಕೌಂಟ್ ನೀಡಲಿದ್ದಾರೆ. ನಗದು ಲಾಭ 70,000 ರೂ. ಇದೆ. ಆದರೆ ವಿನಿಮಯ ಬಯಸುವವರಿಗೆ ಹೆಚ್ಚುವರಿ 30,000 ರೂ. ಸಿಗಲಿದೆ. ಹ್ಯುಂಡೈ ಕೋನಾ ಇವಿಯಲ್ಲಿ ಗ್ರಾಹಕರು 1.5 ಲಕ್ಷ ರೂ. ಪ್ರಯೋಜನ ಪಡೆಯಬಹುದು. ಹ್ಯುಂಡೈ ಐ 20, ವರ್ನಾ, ಕ್ರೆಟಾ, ವೆನ್ಯೂ ಮತ್ತು ಟಕ್ಸನ್ನಂತಹ ಕಾರುಗಳಿಗೆ ಯಾವುದೇ ರಿಯಾಯಿತಿಗಳಿಲ್ಲ.