ನವದೆಹಲಿ :ಲಾಕ್‌ಡೌನ್ ಬಳಿಕ ಕಾರ್ಯಾಚರಣೆ ಪುನಾರಂಭಿಸಿದ ದೇಶದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (ಎಂಎಸ್‌ಐಎಲ್), ತನ್ನ ಮಾರಾಟವನ್ನು ಹೆಚ್ಚಿಸಿಕೊಳ್ಳಲು ಗ್ರಾಹಕರಿಗೆ ವಾಹನ ಫೈನಾನ್ಸ್ ಸೇವೆ ಒದಗಿಸಲು ಇಂಡಸ್ ಇಂಡ್ ಬ್ಯಾಂಕ್ ಜತೆ ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿದೆ.
ಪಾಲುದರಿಕೆಯ ಮೂಲಕ ಗ್ರಾಹಕರಿಗೆ ಪ್ರತಿ ಲಕ್ಷಕ್ಕೆ 899 ರೂ.ಯಿಂದ ಆರಂಭವಾಗುವ ಮೊದಲ 3 ತಿಂಗಳು ಕಡಿಮೆ ಇಎಂಐ ಯೋಜನೆ ಪಡೆಯಬಹುದು. ಪ್ರತಿ ಲಕ್ಷಕ್ಕೆ 1,800 ರೂ.ಗಳಿಂದ ಪ್ರಾರಂಭವಾಗುವ ಇಎಂಐನೊಂದಿಗೆ ಸ್ಟೆಪ್-ಅಪ್ ಯೋಜನೆ ಕೂಡ ನೀಡುತ್ತಿದೆ. ಮಾನ್ಯತೆಯ ಆದಾಯ ಪುರಾವೆ ಹೊಂದಿರುವ ಗ್ರಾಹಕರಿಗೆ ಶೇ.100ರಷ್ಟು ಆನ್‌ರೋಡ್ ಫಂಡಿಂಗ್ ನೀಡಲಾಗುವುದು ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.