ನವದೆಹಲಿ:ನೊಯ್ಡಾ ಮೆಟ್ರೊ ರೈಲ್ ಕಾರ್ಪೊರೇಷನ್ (ಎನ್ಎಂಆರ್ಸಿ) ವತಿಯಿಂದ ಖಾಲಿ ಇರುವ 199 ಹುದ್ದೆಗಳಿಗೆ ಬ್ರಾಡ್ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟಂಟ್ ಇಂಡಿಯಾ ಲಿಮಿಟೆಡ್ (ಬಿಇಸಿಐಎಲ್) ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಈ ಎಲ್ಲ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳನ್ನು 3 ವರ್ಷಗಳ ಕಾಲಾವಧಿಗೆ ಒಪ್ಪಂದದ ಮೇರೆಗೆ ನೊಯ್ಡಾ/ ಗ್ರೇಟರ್ ನೊಯ್ಡಾ ಕಾರ್ಪೊರೇಷನ್ ಕಚೇರಿಯಲ್ಲಿ ನಿಯೋಜಿಸಲಾಗುತ್ತದೆ.
ಅಭ್ಯರ್ಥಿಗಳು ಮುಖ್ಯವಾಗಿ ಗಮನಿಸಬೇಕಾದದ್ದು, ನೇಮಕವಾದವರು ಎನ್ಎಂಆರ್ಸಿಯಲ್ಲಿ ಕನಿಷ್ಠ ಎರಡು ವರ್ಷ ಕಾರ್ಯನಿರ್ವಹಿಸಲು ಸಿದ್ಧರಿರಬೇಕು ಎಂದು ತಿಳಿಸಿದೆ.
ಅರ್ಜಿಗಳನ್ನು ಆನ್ಲೈನ್ ಮುಖಾಂತರ ಸಲ್ಲಿಸಬೇಕು. ಜುಲೈ 22ರಿಂದ ಆಗಸ್ಟ್ 21ರ ವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶವಿರುತ್ತದೆ. ಅಭ್ಯರ್ಥಿಗಳು ಅರ್ಜಿಯ ಶುಲ್ಕವನ್ನು ಜುಲೈ 22- ಆಗಸ್ಟ್ 21ರ ಅವಧಿಯೊಳಗೆ ಪಾವತಿಸಬೇಕು.
ಖಾಲಿ ಇರುವ ಹುದ್ದೆಗಳ ವಿವರ:
* ಸ್ಟೇಷನ್ ಕಂಟ್ರೋಲರ್/ ಟ್ರೈನ್ ಆಪರೇಟರ್- 9 ಹುದ್ದೆ
* ಕಸ್ಟಮರ್ ರಿಲೆಷನ್ಸ್ ಅಸಿಸ್ಟೆಂಟ್- 16 ಹುದ್ದೆ
* ಜ್ಯೂನಿಯರ್ ಇಂಜಿನಿಯರ್/ ಎಲೆಕ್ಟ್ರಿಕಲ್- 12 ಹುದ್ದೆ
* ಜ್ಯೂನಿಯರ್ ಇಂಜಿನಿಯರ್/ ಮೆಕ್ಯಾನಿಕಲ್- 4 ಹುದ್ದೆ