ಮುಂಬೈ: ಅಮೆರಿಕದ ಲಾಸ್ ಏಂಜಲೀಸ್ ಮೂಲದ ಷೇರುದಾರರ ಹಕ್ಕುಗಳ ರಕ್ಷಣಾ ಸಂಸ್ಥೆ ಶಾಲ್, ಲಾ ಫರ್ಮ್ನಲ್ಲಿ ಇನ್ಫೋಸಿಸ್ ಕಂಪನಿ ವಿರುದ್ಧ ಕ್ಲಾಸ್ ಆ್ಯಕ್ಷನ್ ಮೊಕದ್ದಮೆ ಹೂಡಿದೆ. ಈ ಬಗ್ಗೆ ತಮಗೆ ಏನೂ ತಿಳಿದಿಲ್ಲ ಎಂದು ಇನ್ಫಿ ಆಡಳಿತ ಮಂಡಳಿ ಪ್ರತಿಕ್ರಿಯೆ ನೀಡಿದೆ.
ಇನ್ಫೋಸಿಸ್ ವಿರುದ್ಧ ಲೆಕ್ಕಪತ್ರಗಳ ಸಮೀಕ್ಷೆ ಮರೆಮಾಚಿದ ಆರೋಪ
ಇನ್ಫೋಸಿಸ್ ಸಿಇಓ ಸಲೀಲ್ ಪರೇಖ್ ಅವರು ಲೆಕ್ಕ ಪತ್ರಗಳ ಸಮೀಕ್ಷೆಯನ್ನು ಮರೆಮಾಚಿದ್ದಾರೆ. ಲೆಕ್ಕ ಪತ್ರದ ವಿವರಗಳನ್ನು ಮ್ಯಾನೇಜ್ಮೆಂಟ್ ಒತ್ತಡದಿಂದ ಹಣಕಾಸು ವಿಭಾಗಕ್ಕೆ ಒದಗಿಸದೆ ಮರೆಮಾಚಿದೆ ಎಂದು ಶಾಲ್, ಲಾ ಫರ್ಮ್‌ಗೆ ನೀಡಿದ ದೂರಿನಲ್ಲಿ ಆರೋಪಿಸಿದೆ. ಈ ಬಗ್ಗೆ ತಮಗೆ ಏನೂ ತಿಳಿದಿಲ್ಲ ಎಂದು ಇನ್ಫಿ ಆಡಳಿತ ಮಂಡಳಿ ಪ್ರತಿಕ್ರಿಯಿಸಿದೆ.
ಇನ್ಫೋಸಿಸ್ ಸಿಇಓ ಸಲೀಲ್ ಪರೇಖ್ ಅವರು ಲೆಕ್ಕ ಪತ್ರಗಳ ಸಮೀಕ್ಷೆಯನ್ನು ಮರೆಮಾಚಿದ್ದಾರೆ. ಲೆಕ್ಕ ಪತ್ರದ ವಿವರಗಳನ್ನು ಮ್ಯಾನೇಜ್ಮೆಂಟ್ ಒತ್ತಡದಿಂದ ಹಣಕಾಸು ವಿಭಾಗಕ್ಕೆ ಒದಗಿಸದೆ ಮರೆಮಾಚಿದೆ ಎಂದು ಶಾಲ್, ಲಾ ಫರ್ಮ್‌ಗೆ ನೀಡಿದ ದೂರಿನಲ್ಲಿ ಆರೋಪಿಸಿದೆ.
ಇನ್ಫೋಸಿಸ್ ವಿರುದ್ಧ ಹೆಚ್ಚುವರಿ ಸೆಕ್ಯುರಿಟೀಸ್ ಕ್ಲಾಸ್ ಆ್ಯಕ್ಷನ್ ಮೊಕದ್ದಮೆಯ ದೂರುಗಳು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳ ಬಗ್ಗೆ ಕಂಪನಿಗೆ ತಿಳಿದಿದೆ. ಆರಂಭಿಕ ದೂರಾದ 2019ರ ಅಕ್ಟೋಬರ್ ತಿಂಗಳ ದೂರು ಹೊರತುಪಡಿಸಿ ಯಾವುದೇ ಹೆಚ್ಚುವರಿ ದೂರುಗಳು ಕಂಪನಿಯ ಗಮನಕ್ಕೆ ಬಂದಿಲ್ಲ ಎಂದು ವ್ಯವಹಾರ ಸಲಹಾ ವಿಭಾಗವು ಬಹುರಾಷ್ಟ್ರೀಯ ಸಂಸ್ಥೆಗೆ ಸಲ್ಲಿಸಿದ ನಿಯಂತ್ರಣದಲ್ಲಿ ಸ್ಪಷ್ಟಪಡಿಸಿದೆ.