ಕರ್ನಾಟಕ

karnataka

ETV Bharat / business

ಕೊರೊನಾದಲ್ಲೂ ಶತಕೋಟ್ಯಧಿಪತಿ ಸಾಲಿಗೆ 40 ಜನ ಸೇರ್ಪಡೆ: ಬೆಂಗಳೂರಲ್ಲಿದ್ದಾರೆ ದೇಶದ ನಂ.1 ಸಿರಿವಂತೆ!

ಕೊರೊನಾದಲ್ಲೂ ಶತಕೋಟ್ಯಧಿಪತಿ ಸಾಲಿಗೆ 40 ಜನ ಸೇರ್ಪಡೆಯಾಗಿದ್ದಾರೆ. ಕೆಲವು ವರ್ಷಗಳಲ್ಲಿ ಅದೃಷ್ಟ ರೀತಿಯಲ್ಲಿ ಸಂಪತ್ತಿನ ಗಳಿಕೆ ಮಾಡಿಕೊಂಡ ಗುಜರಾತ್‌ನ ಗೌತಮ್ ಅದಾನಿ ಅವರ ಮೌಲ್ಯಯು 2020ರಲ್ಲಿ ಸುಮಾರು 32 ಬಿಲಿಯನ್ ಡಾಲರ್‌ಗೆ ದ್ವಿಗುಣಗೊಂಡಿದೆ. 20 ಸ್ಥಾನಗಳನ್ನು ಏರಿ ಜಾಗತಿಕವಾಗಿ 48ನೇ ಶ್ರೀಮಂತ ವ್ಯಕ್ತಿ ಹಾಗೂ ಭಾರತದ ಎರಡನೇ ಸಿರಿವಂತ ಎನಿಸಿಕೊಂಡಿದ್ದಾರೆ.

Adani, Ambani
Adani, Ambani

By

Published : Mar 2, 2021, 5:56 PM IST

ನವದೆಹಲಿ: ಮುಖೇಶ್ ಅಂಬಾನಿ 83 ಬಿಲಿಯನ್ ಡಾಲರ್​ ನಿವ್ವಳ ಮೌಲ್ಯದ ಸಂಪತ್ತಿನೊಂದಿಗೆ ಶ್ರೀಮಂತ ಭಾರತೀಯರಾಗಿ ಮುಂದುವರೆದಿದ್ದು, ಕೊರೊನಾ ವರ್ಷದಲ್ಲಿ ಶೇ 24ರಷ್ಟು ಸಂಪತ್ತು ಏರಿಕೆಯಾಗಿ ಹುರುನ್​ನ ಜಾಗತಿಕ ಸಿರಿವಂತರ ಪಟ್ಟಿಯಲ್ಲಿ ಎಂಟನೇ ಸ್ಥಾನ ಪಡೆದಿದ್ದಾರೆ.

ಸಾಂಕ್ರಾಮಿಕ ಪೀಡಿತ 2020ರಲ್ಲಿ 40 ಮಂದಿ ಭಾರತೀಯರು ಶತಕೋಟ್ಯಧಿಪತಿಗಳ ಕ್ಲಬ್‌ಗೆ ಸೇರ್ಪಡೆಯಾಗಿದ್ದು, ಒಟ್ಟಾರೆ ಸಂಖ್ಯೆ 177 ದಾಟಿದೆ ಎಂದು ಹುರುನ್​ ವರದಿ ತಿಳಿಸಿದೆ.

ಕೆಲವು ವರ್ಷಗಳಲ್ಲಿ ಅದೃಷ್ಟ ರೀತಿಯಲ್ಲಿ ಸಂಪತ್ತಿನ ಗಳಿಕೆ ಮಾಡಿಕೊಂಡ ಗುಜರಾತ್‌ನ ಗೌತಮ್ ಅದಾನಿ ಅವರ ಮೌಲ್ಯಯು 2020ರಲ್ಲಿ ಸುಮಾರು 32 ಬಿಲಿಯನ್ ಡಾಲರ್‌ಗೆ ದ್ವಿಗುಣಗೊಂಡಿದೆ. 20 ಸ್ಥಾನಗಳನ್ನು ಏರಿ ಜಾಗತಿಕವಾಗಿ 48ನೇ ಶ್ರೀಮಂತ ವ್ಯಕ್ತಿ ಹಾಗೂ ಭಾರತದ ಎರಡನೇ ಸಿರಿವಂತ ಎನಿಸಿಕೊಂಡಿದ್ದಾರೆ.

ಸಾಂಕ್ರಾಮಿಕ ರೋಗದ ಪ್ರಭಾವದಿಂದಾಗಿ ಭಾರತೀಯ ಆರ್ಥಿಕತೆಯು ಶೇ 7ಕ್ಕಿಂತಲೂ ಹೆಚ್ಚು ಸಂಕುಚಿತವಾಗಿತ್ತು. ರೋಗ ನಿಯಂತ್ರಣಕ್ಕೆ ಸರ್ಕಾರಗಳು ಲಾಕ್​ಡೌನ್​ಗಳ ಮೊರೆಹೋದವು. ತತ್ಪರಿಣಾಮ ಬಡವರು ಮತ್ತು ಕೂಲಿ ಕಾರ್ಮಿಕರನ್ನು ದುರ್ಬಲಗೊಳಿಸಿತು.

ದೇಶದಲ್ಲಿ 'ಕೆ' ಆಕಾರದ ಚೇತರಿಕೆ ಕಂಡುಬರುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿರುವ ಹೊತ್ತಲ್ಲಿ ಸಿರಿವಂತ ಉದ್ಯಮಿಗಳ ವರದಿ ಬಂದಿದೆ. ಅದರಲ್ಲಿ ಆಯ್ದ ಕೆಲವರು ಏಳಿಗೆ ಕಂಡುಬಂದಿರುವುದು ವಿಷಾದ ಎನ್ನಲಾಗುತ್ತಿದೆ.

ಅಮೆರಿಕ ಮತ್ತು ಚೀನಾದಲ್ಲಿ ಟೆಕ್-ಚಾಲಿತ ಸಂಪತ್ತು ಸೃಷ್ಟಿಗೆ ಹೋಲಿಸಿದರೆ ಭಾರತೀಯ ಸಂಪತ್ತಿನ ಸೃಷ್ಟಿಯು ಸಾಂಪ್ರದಾಯಿಕ ಕೈಗಾರಿಕೆಗಳಿಂದ ಪ್ರಾಬಲ್ಯ ಹೊಂದಿದೆ ಎಂದು ಹುರುನ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಸಂಶೋಧಕ ಅನಸ್ ರಹಮಾನ್ ಜುನೈದ್ ಹೇಳಿದ್ದಾರೆ.

ಇದನ್ನೂ ಓದಿ: ಮೋದಿ ಸರ್ಕಾರದ ನೋಟ್​ಬ್ಯಾನ್​ ನಡೆಯಿಂದ ನಿರುದ್ಯೋಗ ಹೆಚ್ಚಳ: ಡಾ.ಮನಮೋಹನ್ ಸಿಂಗ್‌

ಟೆಕ್-ಚಾಲಿತ ಸಂಪತ್ತು ಸೃಷ್ಟಿ ಪೂರ್ಣ ಸಾಮರ್ಥ್ಯವನ್ನು ತಲುಪಿದಾಗ, ಬಿಲಿಯನೇರ್‌ಗಳ ಸಂಖ್ಯೆಗೆ ಅನುಗುಣವಾಗಿ ಭಾರತವು ಅಮೆರಿಕವನ್ನು ಸೋಲಿಸಬಲ್ಲದು ಎಂದರು.

ಐಟಿ ಕಂಪನಿ ಎಚ್‌ಸಿಎಲ್‌ನ ಶಿವ ನಾಡರ್ 27 ಶತಕೋಟಿ ಡಾಲರ್ ಸಂಪತ್ತನ್ನು ಹೊಂದಿರುವ ಮೂರನೇ ಶ್ರೀಮಂತ ಭಾರತೀಯರಾಗಿದ್ದರೆ, ಟೆಕ್ ಉದ್ಯಮದಲ್ಲಿ ಕೆಲವೇ ಗೆಳೆಯರು ವೇಗವಾಗಿ ಬೆಳೆಯುತ್ತಿರುವ ಸಂಪತ್ತಿನಲ್ಲಿ ನಾಡರ್​ ಪ್ರಾಬಲ್ಯ ಸಾಧಿಸಿದ್ದಾರೆ.

ಸಾಫ್ಟ್‌ವೇರ್ ಕಂಪನಿ ಝ್ಯಡ್​ಕೇಲರ್‌ನ ಜೇ ಚೌಧರಿ ಈ ವರ್ಷದಲ್ಲಿ ನೆಟ್‌ವರ್ತ್‌ನಲ್ಲಿ ಶೇ 274ರಷ್ಟು ಏರಿಕೆ ಕಂಡಿದ್ದು, 13 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ. ಬೈಜು ರವೀಂದ್ರನ್ ಮತ್ತು ಕುಟುಂಬವು ತನ್ನ ಸಂಪತ್ತಿನ ಶೇ 100ರಷ್ಟು ಹೆಚ್ಚಳವಾಗಿ 2.8 ಬಿಲಿಯನ್ ಡಾಲರ್‌ಗೆ ತಲುಪಿದೆ ಎಂದು ವರದಿ ತಿಳಿಸಿದೆ.

ವೈವಿಧ್ಯಮಯ ಕಾರ್ಪೊರೇಟ್ ಹೌಸ್ ಮಹೀಂದ್ರಾ ಗ್ರೂಪ್ ಮುಖ್ಯಸ್ಥ ಆನಂದ್ ಮಹೀಂದ್ರಾ ಮತ್ತು ಕುಟುಂಬ ಕೂಡ 100 ಪ್ರತಿಶತದಷ್ಟು ಸಂಪತ್ತಿನೊಂದಿಗೆ 2.4 ಬಿಲಿಯನ್ ಡಾಲರ್​ಗೆ ಹೆಚ್ಚಳಗೊಂಡಿದೆ. ತಮ್ಮ ನೆಟ್‌ವರ್ತ್‌ನಲ್ಲಿ ಕುಸಿತ ಕಂಡವರಲ್ಲಿ ಪತಂಜಲಿ ಆಯುರ್ವೇದದ ಆಚಾರ್ಯ ಬಾಲಕೃಷ್ಣ ಅವರ ಸಂಪತ್ತು ಶೇ 32ರಷ್ಟು ಇಳಿಕೆಯಾಗಿ 3.6 ಬಿಲಿಯನ್ ಡಾಲರ್‌ಗೆ ತಲುಪಿದೆ.

ವಾಣಿಜ್ಯ ರಾಜಧಾನಿ ದೇಶದಲ್ಲಿ ಮುನ್ನಡೆ ಸಾಧಿಸುತ್ತಿದ್ದು, 177 ಭಾರತೀಯ ಬಿಲಿಯನೇರ್‌ಗಳಲ್ಲಿ 60 ಮಂದಿಗೆ ನೆಲೆಯಾಗಿದೆ. ದೆಹಲಿ 40 ಮತ್ತು ಬೆಂಗಳೂರು 22 ಬಿಲಿಯನೇರ್‌ಗಳನ್ನು ಹೊಂದಿದೆ.

ಮಹಿಳೆಯರ ಸಂಪತ್ತಿನ ಗಳಿಕೆಯ ಸಾಲಿನಲ್ಲಿ ಬಯೋಕಾನ್‌ನ ಕಿರಣ್ ಮಜುಂದಾರ್ ಷಾ ಅವರು 4.8 ಬಿಲಿಯನ್ ಡಾಲರ್ (ಶೇ 41ರಷ್ಟು), ಗೋದ್ರೇಜ್‌ನ ಸ್ಮಿತಾ ವಿ ಕೃಷ್ಣ 4.7 ಬಿಲಿಯನ್ ಡಾಲರ್ ಮತ್ತು ಲುಪಿನ್‌ನ ಮಂಜು ಗುಪ್ತಾ 3.3 ಬಿಲಿಯನ್ ಡಾಲರ್‌ಗಳೊಂದಿಗೆ ಮುನ್ನಡೆ ಸಾಧಿಸಿದ್ದಾರೆ.

ABOUT THE AUTHOR

...view details